ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಟ್ರೇಲರ್ ರಿಲೀಸ್ ಆಗಿದ್ದು ಭಾರೀ ಭರವಸೆ ಹುಟ್ಟು ಹಾಕಿದೆ. ಟ್ರೇಲರ್ರೇ ಹೀಗಿದೆ. ಚಿತ್ರ ಇನ್ನೇಗಿರಬಹುದು? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

ರಕ್ಷಿತ್ ಶೆಟ್ಟಿ ವಿಚಾರ ಬಂದಾಗಲೆಲ್ಲಾ ರಶ್ಮಿಕಾ ಮಂದಣ್ಣರನ್ನು ಟ್ರೋಲಿಗರು ಎಳೆಯುತ್ತಾರೆ. ರಶ್ಮಿಕಾ ಏನೇ ಪೋಸ್ಟ್ ಹಾಕಲಿ ಅನಗತ್ಯವಾಗಿ ಎಳೆದು ತರುತ್ತಿದ್ದಾರೆ.  

ಅವನೇ ಶ್ರೀಮನ್ನಾರಾಯಣ ಸುತ್ತ ಈ ವಿವಾದವೇಕೆ?

ಸದ್ಯ ರಶ್ಮಿಕಾ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ಮಹೇಶ್ ಬಾಬುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅಪ್‌ಡೇಟ್‌ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರು 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ನೋಡಿದ್ರಾ ಎಂದು ಎಂದು ಕಮೆಂಟ್‌ನಲ್ಲಿ ಕೇಳುತ್ತಿದ್ದಾರೆ. ಲಿಂಕ್‌ ಶೇರ್ ಮಾಡಿ ನೋಡಿ ಎಂದು ಕಿಚಾಯಿಸುತ್ತಿದ್ದಾರೆ. 

 

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಇನ್ನೂ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. 

"