Asianet Suvarna News Asianet Suvarna News

ಚೆನ್ನೈನ ಸೈಕ್ಲೋನ್‌ಗೆ ಸಿಲುಕಿದ್ದ ನಿರ್ದೇಶಕ ಮಂಸೋರೆ; ವಿಡಿಯೋ ನೋಡಿದ್ರೆ ಭಯ ಆಗೋದು ಗ್ಯಾರಂಟಿ

 ಚೆನ್ನೈ ಸೈಕ್ಲೋನ್‌ಗೆ ಸಿಲುಕಿಕೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ಬೆಂಗಳೂರಿಗೆ  ಸೇಫ್ ಆಗಿ ತಲುಪಿದ್ದಾರೆ....

National award winner director Mansore stuck in Chennai cyclone share updates post vcs
Author
First Published Dec 11, 2022, 12:06 PM IST

ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಚಿತ್ರಗಳ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೋರೆ ತುರ್ತು ಕೆಲಸ ಮೇಲೆ ಚೆನ್ನೈಗೆ ಪ್ರಯಾಣ ಮಾಡಿ ಅಲ್ಲಿನ ಸೈಕ್ಲೋನ್‌ಗೆ ಸಿಲುಕಿಕೊಂಡಿದ್ದರು. ಈ ವಿಚಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಗಾಬರಿಯೊಂಡ ಅಭಿಮಾನಿಗಳು ಕಾಮೆಂಟ್ಸ್‌ನಲ್ಲಿ ಯೋಗಕ್ಷೇಮ ವಿಚಾರಿಸಿದ್ದಾರೆ. ಸುರಕ್ಷಿತವಾಗಿ ಬೆಂಗಳೂರು ತಪುಪಿರುವುದಾಗಿ ಮತ್ತೊಂದು ಪೋಸ್ಟ್‌ ಹಾಕಿದ್ದಾರೆ.

ಮಂಸೋರೆ ಪೋಸ್ಟ್‌: 
'Latest update 08:44 AM : ಸುರಕ್ಷಿತವಾಗಿ ತಲುಪಿದ್ದೇನೆ .
Old post,
ತುರ್ತು ಕೆಲಸದ ಮೇಲೆ ಚೆನ್ನೈಗೆ ಬಂದಿದ್ದೆ, ವಾಪಾಸ್ಸು ಬರಲು ಟಿಕೆಟ್ ಬುಕ್ ಆಗಿದ್ದ ವಿಮಾನ ರದ್ದಾದ ಕಾರಣ ನಾನು ನಮ್ಮ ನಿರ್ಮಾಪಕರು, ರಸ್ತೆಯ ಮೂಲಕ ಬೆಂಗಳೂರು ತಲುಪಲು ನಿರ್ಧರಿಸಿ ಚೆನ್ನೈ ಸಿಟಿಯಿಂದ ಒಂದು ಐವತ್ತು ಕಿಮೀ ಬಂದು ರಸ್ತೆ ಸಾಗಲು ಸಹ ತ್ರಾಸದಾಯಕವಾದ ಸೈಕ್ಲೋನ್ ನೋಡುತ್ತಾ ಕೂತಿರುವ ಕ್ಷಣ. ರಾಡಾರ್ ಚಿತ್ರದಲ್ಲಿ ಸೈಕ್ಲೋನ್ ಸುತ್ತುವ ಮಧ್ಯ ಭಾಗದಲ್ಲಿ ನಾವಿದ್ದೇವೆ ಎಂದು ತೋರಿಸುತ್ತಿದೆ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮೂರು ವಿಡಿಯೋ ಹಂಚಿಕೊಂಡಿರುವ ನಿರ್ದೇಶಕರು ಮಳೆಯ ಅಬ್ಬರ ಹೇಗಿದೆ? ಸೈಕ್ಲೋನ್ ಎಲ್ಲಿ ಎಲ್ಲೋ ಅಲರ್ಟ್‌ ತೋರಿಸುತ್ತಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಇದಾದ ನಂತರ 'ಅಂತೂ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ವಿ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಮಂಸೋರೆ ಸೆಲ್ಫಿ ಹಂಚಿಕೊಳ್ಳುವ ಮೂಲಕ ಮಾಹಿತಿ ಕೊಟ್ಟಿದ್ದಾರೆ. 

ನಾನು ಕಂಡಿದ್ದ ಕನಸು ಕನಸಾಗಿಯೇ ಹೋಯಿತು: ನಿರ್ದೇಶಕ ಮಂಸೋರೆ

ಚೆನ್ನೈ ಸೈಕ್ಲೋನ್ Mandous ?

ಕರ್ನಾಟಕ, ತಮಿಳುನಾಡು  ಸೇರಿ ಕೆಲ ರಾಜ್ಯಗಳಿಗೆ ಮ್ಯಾಂಡೌಸ್‌ ಚಂಡಮಾರುತ (Mandous Cyclone) ಅಪ್ಪಳಿಸಿದೆ. ಮಾಂಡೌಸ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ಮಾರ್ಪಾಡಾಗಿದ್ದು, ಶುಕ್ರವಾರ ರಾತ್ರಿ ತಮಿಳುನಾಡಿನ ಮಹಾಬಲಿಪುರಂ ಅಥವಾ ಮಾಮಲ್ಲಪುರಂ ಅನ್ನು ಅಪ್ಪಳಿಸಿದೆ . ಚಂಡಮಾರುತದ ತೀವ್ರತೆಯಿಂದಾಗಿ ಗಂಟೆಗೆ 85 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಅಂದಾಜಿಸಲಾಗಿದೆ. ಈ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಶುಕ್ರವಾರ ತೀವ್ರ ಚಳಿಗೆ ಅಕ್ಷರಶಃ ನಡುಗಿತು. ಅಲ್ಲದೆ, ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ತುಂತುರು ಮಳೆ ಬೀಳುತ್ತಲೇ ಇತ್ತು. ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಪ್ರಭಾವ ರಾಜಧಾನಿಯ ಹವಾಮಾನದ ಮೇಲಾಗಿದ್ದು, ಇನ್ನೂ 2 - 3 ದಿನ ತೀವ್ರ ಚಳಿ ಇರಲಿದೆ ಎನ್ನಲಾಗಿದೆ. 

ದಕ್ಷಿಣ ಭಾರತದ ರಾಜ್ಯಗಳನ್ನು ಕಾಡುತ್ತಿರುವ ಈ ಚಂಡಮಾರುತಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹೆಸರು ನೀಡಿದೆ. ವಿಶ್ವ ಹವಾಮಾನ ಸಂಸ್ಥೆಯ ಸದಸ್ಯನಾಗಿರುವ ಯುಎಇ 2020 ರಲ್ಲಿ ಈ ಹೆಸರು ನೀಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವಿಟ್ಟರ್‌ನಲ್ಲಿ ಲಿಸ್ಟ್‌ ಅನ್ನು ಪೋಸ್ಟ್ ಮಾಡಿದೆ. ಹಾಗೆ, ಮ್ಯಾಂಡೌಸ್‌ ಅನ್ನೋ ಪದಕ್ಕೆ ಅರೇಬಿಕ್ ಭಾಷೆಯಲ್ಲಿ 'ನಿಧಿ ಪೆಟ್ಟಿಗೆ' (Treasure Box) ಎಂದರ್ಥ ಮತ್ತು ಇದನ್ನು 'ಮ್ಯಾನ್-ಡೌಸ್' ಎಂದು ಉಚ್ಚರಿಸಲಾಗುತ್ತದೆ ಎಂದೂ ತಿಳಿದುಬಂದಿದೆ. 

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ..!

ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರು ಸಖತ್ ಅಕ್ಟಿವ್:

ಸಮಾಜದ ಅನೇಕ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಮಂಸೋರೆ ಚರ್ಚೆ ಮಾಡುತ್ತಾರೆ. ಚಾರ್ಲಿ 777 ಚಿತ್ರಕ್ಕೆ ಮಾತ್ರ ಯಾಕೆ ತೆರಿಗೆ ವಿನಾಯಿತಿ ಎಂದು ಮುಖ್ಯಮಂತ್ರಿನಗಳನ್ನು ಪ್ರಶ್ನಿಸಿದ್ದರು.  Omicron ಎಫೆಕ್ಟ್‌ನಿಂದ ಮಲ್ಟಿಫ್ಲೆಕ್ಸ್‌ಗಳಿಗೆ ತಂದ ಹೊಸ ರೂಲ್ಸ್‌ ಬಗ್ಗೆ ಪ್ರಶ್ನೆ ಮಾಡಿದ್ದರು. ಅಪ್ಪು ಸರ್‌ನ ಮತ್ತೊಂದು ವಿಭಿನ್ನ ಪಾತ್ರದಲ್ಲಿ ನೋಡಬೇಕು ಎಂದು ಆಸೆ ಪಟ್ಟಿದ್ದರು ಆ ಲುಕ್‌ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಗಲಿದೆ ಆಪ್ತ ಗೆಳೆಯ ಸಂಚಾರಿ ವಿಜಯ್ ಬಗ್ಗೆ ಬರೆದುಕೊಂಡಿದ್ದರು. 

 

Follow Us:
Download App:
  • android
  • ios