Asianet Suvarna News Asianet Suvarna News

ನಟಸಾರ್ವಭೌಮ ನಟಿ ಅನುಪಮಾಗೆ ಹೀಗೊಂದು ವಿಚಿತ್ರ ರೀತಿಯಲ್ಲಿ ಮಸಾಜ್​ ಮಾಡಿಸಿಕೊಳ್ಳೋ ಆಸೆಯಂತೆ!

ನಟಸಾರ್ವಭೌಮ ನಟಿ ಅನುಪಮಾಗೆ ಹೀಗೊಂದು ವಿಚಿತ್ರ ರೀತಿಯಲ್ಲಿ ಮಸಾಜ್​ ಮಾಡಿಸಿಕೊಳ್ಳೋ ಆಸೆಯಂತೆ. ಏನದು?  
 

Natasarwabhouma actress Anupama Parameswaran Wants Roll Ride Massage suc
Author
First Published Jun 6, 2024, 4:42 PM IST

ಗುಂಗುರು ಕೂದಲಿನ  ಸುಂದರಿ ಅನುಪಮಾ ಪರಮೇಶ್ವರನ್​ ಇದಾಗಲೇ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೋಟಿ ಕೊಟ್ಟರೂ ತಾವು ಇಂಥ ದೃಶ್ಯಗಳಲ್ಲಿ ನಟಿಸಲ್ಲ ಎಂದು ಕೆಲ ವರ್ಷಗಳ ಹಿಂದೆ ನಟಿ ಹೇಳಿದ್ದರು. ಇದಕ್ಕಾಗಿ ಸಿನಿ ಪ್ರಿಯರಿಂದ ಭೇಷ್​ ಭೇಷ್​ ಎನಿಸಿಕೊಂಡಿದ್ದರು. ಆದರೆ ಇದೀಗ ಸುದೀರ್ಘ ಲಿಪ್​ಲಾಕ್​  ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ‘ಟಿಲ್ಲು ಸ್ಕ್ವೇರ್’. ಇದರಲ್ಲಿ ಕಾರಿನಲ್ಲಿ ನಟನ ಜೊತೆ ಲಿಪ್​ಲಾಕ್​ ಮಾಡಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಳಿಕ ಬೇಡಿಕೆಯನ್ನೂ ಕುದುರಿಸಿಕೊಂಡಿರೋ ನಟಿ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ವಿಚಿತ್ರ ರೀತಿಯ ಮಸಾಜ್​ ಬೇಡಿಕೆಯೊಂದನ್ನು ನಟಿ ಶೇರ್​  ಮಾಡಿಕೊಂಡಿದ್ದಾರೆ. ತಮಗೆ ಬೆನ್ನು ನೋವಿದೆ, ಅದಕ್ಕಾಗಿ ಮಸಾಜ್​ ಬೇಕಿದೆ ಎಂದಿರುವ ನಟಿ ಅನುಪಮಾ, ತಮಗೆ ಯಾವ ರೀತಿಯ ಮಸಾಜ್​ ಬೇಕು ಎನ್ನುವ ಚಿತ್ರವೊಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು ರೋಡ್​ ರೋಲರ್​ ಒಂದು ಮನುಷ್ಯನ ಬೆನ್ನ ಮೇಲೆ ಹೋಗ್ತಿರೋ ಫೋಟೋ ಇದೆ. ಅದೇ ರೀತಿ ಮಸಾಜ್​ ಬೇಕಂತೆ ಈ ನಟಿಗೆ! ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತದೆ. 

ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...

ಅಷ್ಟಕ್ಕೂ ನಟಿ ಹಾಟ್​ ಸೀನ್​ ಮಾಡಿ ಸಕತ್​ ಟ್ರೋಲ್​ಗೂ ಒಳಗಾದವರು. ಇದಕ್ಕೆ  ಬೇಸರದ ಜೊತೆ ಕಿಡಿ ಕಾರಿದ್ದ ನಟಿ,  ಏನೋ ಅಪರಾಧ ಮಾಡಿದವರ ರೀತಿಯಲ್ಲಿ ಮಾತನಾಡುತ್ತೀರಲ್ಲ.  ಲಿಪ್ ಲಾಕ್ ದೃಶ್ಯವನ್ನು ಮಾಡಿ ನಾನು ಅನ್ಯಾಯ ಮಾಡಿದ್ದೇನಾ?   18 ವರ್ಷದವಳಿದ್ದಾಗ ಚುಂಬನ ಮತ್ತು ದಪ್ಪ ದೃಶ್ಯಗಳ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದ್ದೆ. ಆಗ ಆ ರೀತಿ ಹೇಳಿಕೆ ಕೊಟ್ಟಿದ್ದೆ ಅಷ್ಟೆ. ಆದರೆ ಈಗ ಪರಿಪೂರ್ಣ ನಟಿಯಾಗಿದ್ದೇನೆ.  ಕಥೆಗೆ ಅಗತ್ಯವಿರುವ ದೃಶ್ಯಗಳನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರಬೇಕು ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನನಗೆ ಎನಿಸುತ್ತಿದೆ ಎಂದಿದ್ದರು. ಸ್ಟೀರಿಯೊಟೈಪಿಕಲ್ ಪಾತ್ರಗಳನ್ನು ಮಾಡಲು ಬೇಸರಗೊಂಡು ಈ ರೀತಿ ಮಾಡಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. 

ಇದೇ ವೇಳೆ ಮೊದಲ ಬಾರಿಗೆ ಲಿಪ್​ಲಾಕ್​ ಅನುಭವ ಹಂಚಿಕೊಂಡ ನಟಿ, ಕಾರಿನಲ್ಲಿ ತಮಗೆ ಲಿಪ್ ಲಾಕ್ ಮಾಡಲು ಕಷ್ಟವಾಯಿತು ಎಂದಿದ್ದರು. ನೂರಾರು ಜನರ ಎದುರು, ಅದೂ ಕಾರಿನಲ್ಲಿ  ಅಂತಹ ದೃಶ್ಯ ಮಾಡುವಾಗ ಬೇರೆಯದ್ದೇ ಮನಸ್ಥಿತಿ ಬೇಕಾಗುತ್ತದೆ. ಹಾಗಾಗಿ ಆ ದೃಶ್ಯದಲ್ಲಿ ನಟಿಸುವಾಗ ನನಗೆ ತೀರಾ ಕಷ್ಟವಾಯಿತು. ಆದರೆ, ಅದು ಬೇರೆಯದ್ದೇ ರೀತಿಯ ಪಾತ್ರವಾಗಿದ್ದರಿಂದ ಮಾಡಿದೆ ಎಂದು ಅನುಪಮಾ ಮಾತನಾಡಿದ್ದರು.  ಅಷ್ಟಕ್ಕೂ ನಟಿ ಮಲಯಾಳಂ ಬಳಿಕ ತೆಲುಗಿಗೆ ಕಾಲಿಟ್ಟವರು. ತೆಲುಗು ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿತು. ಟಾಲಿವುಡ್​ನಿಂದ ಕಾಲಿವುಡ್​ ಪ್ರವೇಶಿಸಿದ್ದ ನಟಿ, ಅಲ್ಲಿಂದ  ಪುನೀತ್‌ ರಾಜ್‌ಕುಮಾರ್‌ ಜೊತೆ ನಟಸಾರ್ವಭೌಮದಲ್ಲಿಯೂ  ನಟಿಸಿದರು.  

ಸುಲಭದ ಪ್ರಶ್ನೆಗೂ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ ರಾಮ್​ - 'ಅಯ್ಯೋ ರಾಮ' ಅಂದ ನೆಟ್ಟಿಗರು
 

Natasarwabhouma actress Anupama Parameswaran Wants Roll Ride Massage suc

Latest Videos
Follow Us:
Download App:
  • android
  • ios