ಸುಲಭದ ಪ್ರಶ್ನೆಗೂ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ ರಾಮ್ - 'ಅಯ್ಯೋ ರಾಮ' ಅಂದ ನೆಟ್ಟಿಗರು
ಸೀತಾರಾಮ ಸೀರಿಯಲ್ ಸೀತಾ ಮತ್ತು ರಾಮ್ ಪ್ರಶ್ನೋತ್ತರ ನಡೆಸಿದ್ದಾರೆ. ಇದರಲ್ಲಿ ಸೀತಾ ಕೇಳಿದ ಈಸಿ ಪ್ರಶ್ನೆಗೆ ರಾಮ್ಗೆ ಉತ್ತರ ಬರಲಿಲ್ಲ. ಸೀತಾ ಕೇಳಿದ ಪ್ರಶ್ನೆ ಏನು?
ಸೀತಾರಾಮ ಸೀರಿಯಲ್ನಲ್ಲಿ ಒಂದೆಡೆ ಸೀತಾ ಮತ್ತು ರಾಮರ ಎಂಗೇಜ್ಮೆಂಟ್ ಆಗಿದೆ. ಇದರ ಸಂಭ್ರಮದಲ್ಲಿ ಇಡೀ ಕುಟುಂಬವಿದೆ. ಇನ್ನೇನು ಮದುವೆಯೊಂದೇ ಬಾಕಿ. ಅದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್ ಮಾಡುತ್ತಾರೆ. ಟೈಂ ಸಿಕ್ಕಾಗಲೆಲ್ಲಾ ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್ ಮಾಡುತ್ತಾರೆ. ಬಿಜಿ ಷೆಡ್ಯೂಲ್ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮೂಡಿಗೆ ಬರುತ್ತದೆ ಟೀಂ. ಇದೀಗ ಇಡೀ ಟೀಂ ಪ್ರಶ್ನೋತ್ತರದಲ್ಲಿ ತೊಡಗಿದೆ. ಮೊದಲಿಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು, ರಾಮ್ ಪಾತ್ರಧಾರಿ ಗಗನ್ ಅವರಿಗೆ ಒಂದು ಈಸಿ ಪ್ರಶ್ನೆ ಕೇಳಿದ್ದಾರೆ. ಅದರೆ ಅದಕ್ಕೆ ಉತ್ತರ ಹೇಳಲು ಆಗದೇ ಗಗನ್ ಪರದಾಡಿದ್ದು, ಛೇ ಇಷ್ಟು ಈಸಿ ಪ್ರಶ್ನೆಗೂ ಉತ್ತರ ಬರಲಿಲ್ವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಗಗನ್ ಅವರಿಗೆ ಒಂದು ತುಂಬಾ ಈಸಿಯಾಗಿರೋ ಪ್ರಶ್ನೆ ಇದು. ಅದೇನೆಂದರೆ ಸೀತಾಗೆ ಆರು ವರ್ಷ ಇದ್ದಾಗ ಅವರ ತಮ್ಮಂಗೆ ಮೂರು ವರ್ಷ ವಯಸ್ಸಾಗಿತ್ತು. ಹಾಗಿದ್ದ ಮೇಲೆ ಸೀತಾಗೆ 40 ವರ್ಷ ವಯಸ್ಸಾದಾಗ ತಮ್ಮಂಗೆ ಎಷ್ಟು ವರ್ಷ ವಯಸ್ಸು ಎಂದು? ನೀವು ಈ ಪ್ರಶ್ನೆ ಕೇಳಿದ್ರೆ ಥಟ್ ಅಂತ ಏನು ಹೇಳ್ತೀರಾ? ಹಿಂದೆ ಮುಂದೆ ಯೋಚ್ನೆ ಮಾಡದೇ ಇದ್ರೆ 20 ಅಂತಾನೇ ಹೇಳೋದು. ಆದ್ರೆ ಸ್ವಲ್ಪನಾದ್ರೂ ಬುದ್ಧಿ ಉಪಯೋಗಿಸಿದ್ರೆ ಉತ್ತರ ಅಷ್ಟೇ ಸುಲಭದಲ್ಲಿ ಸಿಗುತ್ತೆ ಅಲ್ವಾ? ಈ ಪ್ರಶ್ನೆಗೆ ನಿಮ್ಮ ಉತ್ತರ ಏನು? ಕೆಲವರಿಗೆ ಇದೆಂಥ ಚಿಕ್ಕ ಮಕ್ಕಳ ಪ್ರಶ್ನೆ ಎಂದು ಅನ್ನಿಸಿರಲಿಕ್ಕೂ ಸಾಕು. ಆದರೆ ರಾಮ್ನಂಥವರು ಇದಕ್ಕೂ ಬೇರೆಯವರ ಬಳಿ ಕೇಳೋ ಪ್ರಮೇಯ ಬಂದಿದೆ. ಸೀತಾ ಆರು ವರ್ಷ ಇರುವಾಗ, ತಮ್ಮ 3 ವರ್ಷ ಅಂದ್ರೆ, ಇಬ್ಬರಿಗೂ ಮೂರು ವರ್ಷ ಗ್ಯಾಪ್. ಅಂದ ಮೇಲೆ ಸೀತಾಗೆ 40 ವರ್ಷ ಆದಾಗ, ತಮ್ಮನಿಗೆ ಸಹಜವಾಗಿ 37 ವರ್ಷ ಆಗಿರುತ್ತದೆ. ಆದರೆ ರಾಮ್ 20 ವರ್ಷ ಎನ್ನುವ ಮೂಲಕ ಅಯ್ಯೋ ರಾಮ ಎನ್ನುತ್ತಿದ್ದಾರೆ ನೆಟ್ಟಿಗರು.
ಗಿಡ ಬೆಳಿಯದೇ ಇರುವ ಕಾಡು ಯಾವುದು ಎಂದು ಪ್ರಶ್ನಿಸಿ ಟ್ರೋಲಾದ ಸೀತಾರಾಮ ಸೀತಾ!
ಈ ಹಿಂದೆಯೇ ವೈಷ್ಣವಿ ಪ್ರಶ್ನೆ ಕೇಳಿ ಟ್ರೋಲ್ಗೆ ಒಳಗಾಗಿದ್ದರು. ಇದಕ್ಕೆ ಕಾರಣ, ಪ್ರಶ್ನೆಗೂ ಉತ್ತರಕ್ಕೂ ತಾಳಮೇಳ ಇಲ್ಲ ಎನ್ನುವುದು. ಅಷ್ಟಕ್ಕೂ ಸೀತಾ ಅರ್ಥಾತ್ ವೈಷ್ಣವಿ ಅವರು ರಾಮ್ ಅಂದರೆ ಗಗನ್ ಅವರಿಗೆ ಕೇಳಿದ ಪ್ರಶ್ನೆ ಏನೆಂದರೆ, ಗಿಡ ಬೆಳೆಯದ ಕಾಡು ಯಾವುದು ಎನ್ನುವುದು. ಇದಕ್ಕೆ ತಲೆ ಕೆಡಿಸಿಕೊಂಡ ರಾಮ್ ಬಾಲ್ಕನಿ ಸೇರಿದಂತೆ ಕೆಲವು ಉತ್ತರ ಕೊಟ್ಟಿದ್ದರು. ಅಲ್ಲಿದ್ದ ಸೀತಾರಾಮ ಸಿಬ್ಬಂದಿ ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದಕ್ಕೆ ಉತ್ತರ ಹೇಳಿದ ಸೀತಾ, ಅದು ಸಿಮ್ ಕಾರ್ಡ್ ಎಂದಿದ್ದರು. ಇದಕ್ಕೇ ಸಕತ್ ಟ್ರೋಲ್ ಆದರು. ಉತ್ತರ ಏನೆಂದು ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳು ಉತ್ತರ ಕೇಳಿ ಥೂ ಎಂದಿದ್ದರು.
ಏಕೆಂದರೆ ಸೀತಾ ಕೇಳಿದ್ದು ಕಾಡು ಎಂದು ಇದು ಸಿಮ್ ಕಾರ್ಡು. ಕಾಡಿಗೂ ಕಾರ್ಡಿಗೂ ವ್ಯತ್ಯಾಸ ಇಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಎಷ್ಟೊಂದು ಪ್ರಶ್ನೆಗಳು ಇರುವಾಗ ತಾಳಮೇಳ ಇಲ್ಲದ ಪ್ರಶ್ನೆಗಳನ್ನು ಕೇಳುವುದು ಏಕೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಇಡೀ ಟೀಂ ಹಲವಾರು ಪ್ರಶ್ನೋತ್ತರಗಳನ್ನು ಆಡಿತ್ತು. ಮೊದಲಿಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು, ಎರಡು ಮಾವಿನ ಹಣ್ಣನ್ನು ಮೂರು ಮಂದಿ ಸಮನಾಗಿ ತಿನ್ನಬೇಕು ಹೇಗೆ ಎಂದು ಕೇಳಿದ್ದರು. ಅದಕ್ಕೆ ಪ್ರಿಯಾ ಮತ್ತು ರಾಮ್ ಪಾತ್ರಧಾರಿಗಳು ಒಂದಷ್ಟು ಉತ್ತರ ಹೇಳಿದರೂ ಅದ್ಯಾವುದೂ ಸರಿ ಇರುವುದಿಲ್ಲ. ನಂತರ ವೈಷ್ಣವಿ, ಅದು ಹೇಗೆಂದರೆ ಮೂವರು ಜ್ಯೂಸ್ ಮಾಡಿ ಕುಡಿಯುತ್ತಾರೆ ಎಂದಿದ್ದರು. ಇದಾದ ಬಳಿಕ ಪುಟಾಣಿ ಸಿಹಿಗೆ ಸೀತಾ, ಕಾಲಿಲ್ಲದ ಟೇಬಲ್ ಯಾವುದು ಎಂದು ಕೇಳುತ್ತಾರೆ. ಸಿಹಿ ಯಾವ್ಯಾವುದೊ ಉತ್ತರ ಕೊಡುತ್ತಾಳೆ. ಎಲ್ಲ ಉತ್ತರಗಳೂ ತಪ್ಪಾಗಿದ್ದರಿಂದ ಸರಿಯುತ್ತರ ಎಂದರೆ ಟೈಂ ಟೇಬಲ್ ಎಂದು ವೈಷ್ಣವಿ ಹೇಳುತ್ತಾರೆ. ಅದೇ ರೀತಿ, ಮೀನಿಗೆ ಯಾವ ಡೇ ತುಂಬಾ ಕಷ್ಟ ಎಂದರೆ ಫ್ರೈ ಡೇ ಎಂಬ ಉತ್ತರ ಬರುತ್ತದೆ. ಹೀಗೆ ಹಲವಾರು ತಮಾಷೆಯ ಪ್ರಶ್ನೋತ್ತರಗಳನ್ನು ಇದರಲ್ಲಿ ನೋಡಬಹುದು.
ಹೆಣ್ಮಕ್ಳಿಗೆ ಅರ್ಧ ಹೋದ್ರೆ ನೋವಾಗತ್ತೆ, ಪೂರ್ತಿ ಹೋದ್ರೆ ಖುಷಿಯಾಗತ್ತೆ: ಸೀತಾರಾಮ ಟೀಂನಿಂದ ಹೀಗೊಂದು ಪ್ರಶ್ನೆ...