2021ರ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ಪೊಗರು' ನಿರ್ದೇಶಕ ನಂದಕಿಶೋರ್‌ ಸತತ ನಾಲ್ಕು ವರ್ಷಗಳಿಂದ ಸಿನಿಮಾ ಚಿತ್ರೀಕರಣ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು.  ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಚಿತ್ರ ತೆರೆ ಕಾಣುವ ದಿನಾಂಕ ನಿಗದಿ ಮಾಡುವುದು ಬಾಕಿ ಉಳಿದಿದೆ. ಈ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಂದಕಿಶೋರ್ ವರ್ಕೌಟ್ ಶುರು ಮಾಡಿದ್ದಾರೆ. 

ಧ್ರುವ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್; ಇದು ಹೊ ಸಿನಿಮಾ ದುಬಾರಿ! 

ನಿರ್ದೇಶನಕ್ಕೆ ಎಂಟ್ರಿ ಕೊಡುವ ಮುನ್ನ ನಂದಕಿಶೋರ್ ನಟರಾಗಿ ಅಭಿನಯಿಸುತ್ತಿದ್ದರು. ಖ್ಯಾತ ಖಳನಟ ಸುಧೀರ್ ಅವರ ಮೊದಲನೇಯ ಪುತ್ರ ನಂದ. ಬರೋಬ್ಬರಿ 140 ಕೆಜಿ ಇರುವ ನಂದ ಕಿಶೋರ್ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

'ನನಗೆ ಈ ಪ್ರೊಸೆಸ್‌ ಇಷ್ಟವಾಗುತ್ತಿದೆ. ನಾನು ಫಿಟ್‌ ಫಿಲ್ಮಂ ಡೈರೆಕ್ಟರ್‌ ಆಗುವೆ' ಎಂದು ವಿಡಿಯೋ ಶೇರ್ ಮಾಡಿಕೊಂಡು, ಪೋಸ್ಟ್ ಬರೆದಿದ್ದಾರೆ. 'ಶೀಘ್ರದಲ್ಲಿಯೇ ನನ್ನ ಬೆಸ್ಟ್‌ ವರ್ಶನ್ ನೋಡುವಿರಿ,' ಎಂದು ಹೇಳಿದ್ದಾರೆ. ಪೊಗರು ಸಿನಿಮಾ ರಿಲೀಸ್ ಆಗುವ ಮುನ್ನವೇ ಹಲವು ಹಿಸ್ಟರಿ ಕ್ರಿಯೇಟ್ ಮಾಡಿದ್ದು, ನಂದಕಿಶೋರ್ ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 

ಧ್ರುವ ಸರ್ಜಾ ಮನೆ ವಿಳಾಸ ಹುಡುಕುತ್ತಿರುವ ನಿರ್ಮಾಪಕರು! 

ಪೊಗರು ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಂದಕಿಶೋರ್ ಮತ್ತೊಂದು ಚಿತ್ರಕ್ಕೆ ಒಂದಾಗಿದ್ದಾರೆ. ಚಿರಂಜೀವಿ ಸರ್ಜಾ ಹುಟ್ಟು ಹಬ್ಬದ ದಿನವೇ ಸಿನಿಮಾ 'ದುಬಾರಿ' ಶೀರ್ಷಿಕೆ ಬಿಡುಗಡೆ ಮಾಡಲಾಗಿತ್ತು. ಹೇರ್‌ ಸ್ಟೈಲ್‌ ಬದಲಾಯಿಸುರುವ ಧ್ರುವ ಮುಂದಿನ ಸಿನಿಮಾ ಫ್ಯಾಮಿಲಿ ಕತೆ ಎಂದು ಹೇಳಲಾಗುತ್ತಿದೆ.