- ಇದು ರಿಯಲ್ ಸ್ಟಾರ್ ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ‘ಕಬ್ಜ’ ಚಿತ್ರದ ಹೊಸ ಸುದ್ದಿ. ರಿಯಲ್ ಸ್ಟಾರ್ ಅಭಿಮಾನಿಗಳೇ ಥ್ರಿಲ್ಲಾಗು ವಂತಹ ತಾರಾಗಣದೊಂದಿಗೆ ಅದ್ದೂರಿ ಕ್ಯಾನ್ವಾಸ್‌ನಲ್ಲಿ, ಬಹುಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಬಿಗ್ ಬಜೆಟ್ ಚಿತ್ರದ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಆ ದಿನಗಳ ಭೂಗತ ಲೋಕದ ಹೊಸ ‘ಕಬ್ಜ’!

ಏಳು ಮಂದಿ ಖಳನಾಯಕರು: ಉಪೇಂದ್ರ ನಟನೆಯ ‘ಕಬ್ಜ’ ಚಿತ್ರಕ್ಕಾಗಿ ಬೇರೆ ಬೇರೆ ಭಾಷೆ ಯಿಂದ ಏಳು ಮಂದಿ ಖಳನಾಯಕರು ಆಗಮಿಸುತ್ತಿ ದ್ದಾರೆ. ಕನ್ನಡದ ಪ್ರಕಾಶ್ ರೈ, ತೆಲುಗಿನಿಂದ ಜಗಪತಿ ಬಾಬು, ಜಯಪ್ರಕಾಶ್ ರೆಡ್ಡಿ, ಹಿಂದಿಯಿಂದ ನಾನಾ ಪಾಟೇಕರ್, ಪ್ರದೀಪ್ ರಾವತ್, ಮನೋಜ್ ಬಾಜ್‌ಪೇಯಿ ಹಾಗೂ ತಮಿಳಿನಿಂದ ಸಮುದ್ರ ಖಣಿ ಉಪ್ಪಿ ಮುಂದೆ ಘರ್ಜಿಸಲು ರೆಡಿಯಾಗಿದ್ದಾರೆ.

ಆದರೆ, ಇಷ್ಟೂ ಜನ ಖಳನಾಯಕರಾಗಿಯೇ ನಟಿಸುತ್ತಾರೆಯೇ ಎಂಬುದಕ್ಕೆ ಸದ್ಯ ನಿರ್ದೇಶಕರು ಯಾರ ಪಾತ್ರದ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ, ಇವರೆಲ್ಲ ಆಯಾ ಭಾಷೆಗಳಲ್ಲಿ ಖಳನಾಯಕರಾಗಿಯೇ ಹೆಚ್ಚಾಗಿ ಮಿಂಚಿದವರು. ಇತ್ತೀಚೆಗೆ ನಿರ್ದೇಶಕ ಸಮುದ್ರ ಖಣಿ ಕೂಡ ನೆಗೆಟಿವ್ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಇವರೆಲ್ಲ ‘ಕಬ್ಜ’ದಲ್ಲಿ ಖಳನಾಯಕರಾಗಲಿದ್ದಾರೆ ಎಂಬುದು ಮಾಹಿತಿ.

'51'ರ ಯಂಗ್ ಮ್ಯಾನ್ ಸ್ಯಾಂಡಲ್‌ವುಡ್ ಮಾಸ್ಟರ್ ಮೈಂಡ್!

ಮೂರು ಚಿತ್ರ ಬಿಟ್ಟ ಉಪ್ಪಿ: ‘ಕಬ್ಜ’ ಚಿತ್ರಕ್ಕಾಗಿ ಮೂರು ಬೇರೆ ಚಿತ್ರಗಳನ್ನು ಬಿಟ್ಟು ಒಂದು ವರ್ಷ ಒಂದೇ ಚಿತ್ರಕ್ಕಾಗಿ ಕೆಲಸ ಮಾಡುವುದಕ್ಕೆ ಉಪೇಂದ್ರ ನಿರ್ಧರಿಸಿದ್ದಾರೆ. ಸದ್ಯ ಒಪ್ಪಿಕೊಂಡಿರುವ ‘ಬುದ್ಧಿವಂತ 2’ ಚಿತ್ರೀಕರಣ ಮುಗಿಸಿದ್ದು, 15ರಿಂದ ಆರ್ ಚಂದ್ರು ಚಿತ್ರದ ಶೂಟಿಂಗ್ ಅಡ್ಡಾದಲ್ಲಿ ಪ್ರತ್ಯೇಕ್ಷರಾಗುತ್ತಿ ದ್ದಾರೆ ಉಪ್ಪಿ. ಬಹುಭಾಷೆಯಲ್ಲಿ ಬರುತ್ತಿರುವ ಈ ಚಿತ್ರ ಮಾಡುವಾಗ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳಬಾರದು ಎನ್ನುವ ಕಾರಣಕ್ಕೆ ತಾವೇ ಖುದ್ದಾಗಿ ಕತೆ ಕೇಳಿದ್ದ ಮೂರು ಚಿತ್ರಗಳನ್ನು ಒಪ್ಪಿಕೊಳ್ಳದೆ ಬಿಟ್ಟಿದ್ದಾರೆ.

ಆ ಕಾಲದ ಡಾನ್, ದೇಹ ದಂಡನೆ: ಉಪೇಂದ್ರ ಮೊದಲ ಬಾರಿಗೆ ‘ಕಬ್ಜ’ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿ ಬಾಡಿ ಬಿಲ್ಡ್ ಮಾಡುವುದಕ್ಕೆ ಮುಂದಾಗಿದ್ದಾರೆ. ಯಾಕೆಂದರೆ ಅವರ ಪಾತ್ರವೇ ಆ ರೀತಿ ಇದೆ. ೮೦ರ ದಶಕದಲ್ಲಿ ಕಂಡಿದ್ದ ಭೂಗತ ಲೋಕದ ಡಾನ್ ಒಬ್ಬನ ಕತೆಯಾಗಿದ್ದು, ಆ ಕಾಲದ ಡಾನ್‌ಗಳು ಹೇಗಿದ್ದರು, ಅವರ ಲುಕ್ ಹೇಗಿತ್ತು ಎಂಬುದನ್ನು ಒಂದಿಷ್ಟು ಸ್ಟಡಿ ಮಾಡಿಯೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನ್ಯಾಚುರಲ್ಲಾಗಿ ಗಡ್ಡ, ಮೀಸೆ ಬಿಡಲಿದ್ದಾರೆ.

ಮಾಧ್ಯಮದವರಿಗೆ ಐಡಿಯಾ ಕೊಟ್ಟ ಉಪ್ಪಿ; ಹೀಗ್ಮಾಡಿದ್ರೆ ಏನಾಗುತ್ತೆ?

3 ಹಂತ, 4 ರಾಜ್ಯಗಳು: ನ.15ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ನಂತರ ಬಾಂಬೆ, ಕಲ್ಕತ್ತ, ಚೆನ್ನೈ, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಈ ನಡುವೆ ಮಧುರೈ, ಮಂಗಳೂರಿನಲ್ಲೂ ಶೂಟಿಂಗ್‌ಗೆ ಯೋಜನೆ ಹಾಕಿಕೊಳ್ಳಲಾಗಿದೆ. ನ.10ಕ್ಕೆ ಫೋಟೋಶೂಟ್ ಕೂಡ ಮಾಡಲಾಗುತ್ತಿದೆ.