ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಕೇಂದ್ರದ ವಿಳಂಬ ನೀತಿಗೆ ವಿರೋಧ | ಕೇಂದ್ರವನ್ನು ಸಮರ್ಥಿಸುವ ಭರದಲ್ಲಿ ಬಿಜೆಪಿ ಸಂಸದರ ಎಡವಟ್ಟು | ಮಾಧ್ಯಮದವರಿಗೆ ಉಪೇಂದ್ರ ಸಲಹೆ 

ಈ ಬಾರಿಯ ವರುಣರಾಯನ ಅಬ್ಬರಕ್ಕೆ ಇಡೀ ಕರುನಾಡು ತತ್ತರಿಸಿದೆ. ಆಸ್ತಿ, ಮನೆಗಳನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ. ಬಹುತೇಕ ಮಂದಿ ಇರಲು ಒಂದು ಸೂರೂ ಇಲ್ಲದೇ ನಿರ್ಗತಿಕರಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ನೀಡಿಲ್ಲ. ವಿಳಂಬ ನೀತಿ ಅನುಸರಿಸುತ್ತದೆ ಎನ್ನುವ ವಿಚಾರ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 

ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್ ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!

ಉತ್ತರ ಬಾರತದಲ್ಲಿ ಪ್ರವಾಹ ಬಂದಿದ್ದು ಪ್ರಧಾನಿ ಮೋದಿ ನಿಮ್ಮ ನೆರವಿಗೆ ನಾವಿದ್ದೇವೆ ಎಂದು ಬಿಹಾರವನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಗೆ ಕನ್ನಡಿಗರು ಕೆಂಡಾಮಂಡಲವಾಗಿದ್ದರು. ಕರ್ನಾಟಕದ ಬಗ್ಗೆ ಪ್ರಧಾನಿ ಮೌನವನ್ನು ಕನ್ನಡಿಗರು ಪ್ರಶ್ನೆ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವಿಟರ್ ವಾರ್ ಸಿಕ್ಕಾಪಟ್ಟೆ ಚರ್ಚೆಯಾಗಿದೆ. ಜೊತೆಗೆ ಪ್ರತಾಪ್ ಸಿಂಹ ಹೇಳಿಕೆ ಕೂಡಾ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈ ಎಲ್ಲಾ ಪ್ರಹಸನಗಳನ್ನು ನೋಡಿ ರಿಯಲ್ ಸ್ಟಾರ್ ಉಪೇಂದ್ರ ಮಾಧ್ಯಮದವರನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ. 

Scroll to load tweet…

ಎಲ್ಲಾ ಮಾದ್ಯಮಗಳ ಗಮನಕ್ಕೆ..... ತಾವೆಲ್ಲರೂ ರಾಜಕಾರಿಣಿಗಳನ್ನು ಸಂಪೂರ್ಣವಾಗಿ ತ್ಯಜಿಸಿ,ನಿಷೇದಿಸಿ ಪ್ರಜೆಗಳ ಸುದ್ದಿಗಳನ್ನು ಮಾತ್ರ ಬಿತ್ತರಿಸಲು, ಪ್ರಕಟಿಸಲು ಶುರುಮಾಡಿದರೆ ಏನಾಗಬಹುದು ?ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೆಟ್ಟಿಗರು ತಮಾಷೆ ಮಾಡಿದ್ದು ಹೀಗೆ

Scroll to load tweet…
Scroll to load tweet…