ನಾಗತಿಹಳ್ಳಿ 'ಅಮೆರಿಕಾ ಅಮೆರಿಕಾ' ಸಿನಿಮಾ ಸೂಪರ್ ಹಿಟ್ ಆಗಿದ್ದು ಹೇಗೆಂಬ ಗುಟ್ಟು ರಟ್ಟಾಯ್ತು..!

ಈ ಸಿನಿಮಾ ಬಿಡುಗಡೆಯಾಗಿ 27 ವರ್ಷಗಳು ಕಳೆದು ಹೋಗಿವೆ. ಆದರೆ, ಈ ಸಿನಿಮಾವನ್ನು ಮಾತ್ರ ಯಾವೊಬ್ಬ ಕನ್ನಡಿಗರೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ 70-80ರ ದಶಕದ ಜನರೇಶನ್ ಸಿನಪ್ರೇಕ್ಷಕರು. ಏಕೆಂದರೆ, ಅಂದು ಅವರೆಲ್ಲರೂ ಯುವಕಯುವತಿಯರು ಆಗಿದ್ದರು...

Nagathihalli chandrashekhar movie America America success secret revealed srb

ತೊಂಬತ್ತರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ (Nagatahihalli Chandrashekhar)ನಿರ್ದೇಶನದ ಅಮೆರಿಕಾ ಅಮೆರಿಕಾ (America America) ಸಹ ಒಂದು. ಈ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಹಾಗು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರದ ಹಾಡುಗಳು ಕೂಡ ತುಂಬಾ ಫೇಮಸ್ ಆಗಿದ್ದವು. 'ನೂರು ಜನ್ಮಕೂ..' ಹಾಡಂತೂ ಅಂದಿನ ಯುವಕಯುವತಿಯರ ಫೇವರೆಟ್ ಸಾಂಗ್ ಎನಿಸಿತ್ತು. 1997 ಈ ಚಿತ್ರ ಬಿಡುಗಡೆ ಆಗಿತ್ತು. 

ಇದೀಗ ಈ ಸಿನಿಮಾ ಬಿಡುಗಡೆಯಾಗಿ 27 ವರ್ಷಗಳು ಕಳೆದು ಹೋಗಿವೆ. ಆದರೆ, ಈ ಸಿನಿಮಾವನ್ನು ಮಾತ್ರ ಯಾವೊಬ್ಬ ಕನ್ನಡಿಗರೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ 70-80ರ ದಶಕದ ಜನರೇಶನ್ ಸಿನಪ್ರೇಕ್ಷಕರು. ಏಕೆಂದರೆ, ಅಂದು ಅವರೆಲ್ಲರೂ ಯುವಕಯುವತಿಯರು ಆಗಿದ್ದರು. ಹೀಗಾಗಿ ಬಹುತೇಕ ಎಲ್ಲರೂ ಈ ಅಮೆರಿಕಾ ಅಮೆರಿಕಾ ಸಿನಿಮಾವನ್ನು ನೋಡಿದ್ದರು. ಈ ರೊಮಾಂಟಿಕ್-ಸೆಂಟಿಮೆಂಟ್ ಸಿನಿಮಾ ನೋಡಿ ಕಣ್ಣೀರು ಹಾಕದವರು ತುಂಬಾ ಕಡಿಮೆ ಎನ್ನಬಹುದು. 

ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡೋದ್ರಲ್ಲಿ ಅರ್ಥವೇ ಇಲ್ಲ; ರಮೇಶ್ ಅರವಿಂದ್!

ಈ ಸಿನಿಮಾ ಅಮದು ಸೂಪರ್ ಹಿಟ್ ಆಗಲು ಮುಖ್ಯ ಕಾರಣ ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ನಾಗತಿಹಳ್ಳಿ ಅವರ ಸತ್ವಯುತವಾದ ನಿರ್ದೇಶನ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಆ ಚಿತ್ರದ ಯಶಸ್ಸಿಗೆ ಇಂಪಾದ ಹಾಗು ಅರ್ಥಗರ್ಭಿತವಾದ ಹಾಡುಗಳು ಕೂಡ ಅಷ್ಟೇ ಮುಖ್ಯ ಎನಿಸಿದ್ದವು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮನೋಮೂರ್ತಿ ಅವರು ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಅಮೋಘ ಸಂಗೀತ ಮತ್ತು ಹಾಡುಗಳನ್ನು ಕೊಟ್ಟಿದ್ದರು.

ಅಂದು ಚಿತ್ರ ನೋಡಿದ ಎಲ್ಲರೂ ಸಿನಿಮಾ ಜೊತೆಗೆ ಹಾಡುಗಳನ್ನು ಕೂಡ ತುಂಬಾನೇ ಮೆಚ್ಚಿಕೊಂಡಿದ್ದರು. ಅಂದಹಾಗೆ, ಈ ಚಿತ್ರಕ್ಕೆ 16ಜನರ ಟೀಮ್ ಕಟ್ಟಿಕೊಂಡು ನಾಗತಿಹಳ್ಳಿ ಚಂದ್ರಶೇಖರ್ ಅವರು 45 ದಿನಗಳ ಕಾಲ ಶೂಟಿಂಗ್ ಮಾಡಿದ್ದರು. ಕನ್ನಡ ಪ್ರೇಕ್ಷಕರಿಗೆ ಅಮೆರಿಕಾ ದೇಶವನ್ನು ಚೆನ್ನಾಗಿ ಪರಿಚಯಿಸಿ ಖುಷಿಯಾಗಿಸಿದ್ದರು ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್. ಮನೋಮೂರ್ತಿ ಅವರು ತಮ್ಮ ಮೊದಲ ಚಿತ್ರದ ಸಂಗೀತ ನಿರ್ದೇಶನದಲ್ಲೇ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟಿದ್ದರು.

ವ್ಯಾನಿಟಿ ವ್ಯಾನ್‌ನಲ್ಲಿ ನಟಿಯರ ನೇಕೆಡ್ ಚಿತ್ರೀಕರಣ ಮಾಡ್ತಾರೆ: ರಾಧಿಕಾ ಶರತ್‌ಕುಮಾರ್ ಗಂಭೀರ ಆರೋಪ  

Latest Videos
Follow Us:
Download App:
  • android
  • ios