- Home
- Entertainment
- Sandalwood
- ದಪ್ಪ ಆದ್ರೆ ರೇಶ್ಮೆ ಸೀರೆ ಹಾಕೋದಾ?; ರಚ್ಚು ನಿಂಗೆ ಸೀರೆನೆ ಅಚ್ಚುಮೆಚ್ಚು ಎಂದ ಪಡ್ಡೆಹೈಕ್ಳು
ದಪ್ಪ ಆದ್ರೆ ರೇಶ್ಮೆ ಸೀರೆ ಹಾಕೋದಾ?; ರಚ್ಚು ನಿಂಗೆ ಸೀರೆನೆ ಅಚ್ಚುಮೆಚ್ಚು ಎಂದ ಪಡ್ಡೆಹೈಕ್ಳು
ವೈರಲ್ ಆಯ್ತು ರಚಿತಾ ರಾಮ್ ಸಿಂಪಲ್ ಸೀರೆ ಲುಕ್...ಪದೇ ಪದೇ ಸೀರೆ ಧರಿಸೋದು ಯಾಕೆ?

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ನೇರಳೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಚಿತಾ ಮತ್ತು ಶ್ರೀನಗರ ಕಿಟ್ಟಿ ನಟಿಸುತ್ತಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರೆಸ್ ಮೀಟ್ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಟೈಲ್ ನೆಟ್ಟಿಗರ ಗಮನ ಸೆಳೆದಿದೆ.
ನೆರಳೆ ಬಣ್ಣದ ಬ್ಲೌಸ್‌ಗೆ ಹಸಿರು-ನೇರಳ ಕಾಂಬಿನೇಷನ್ ರೇಶ್ಮೆ ಸೀರೆಯಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ರಚ್ಚು ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.
ಅತಿ ಹೆಚ್ಚು ಸೀರೆ ಧರಿಸುವ ನಟಿಯಲ್ಲಿ ರಚಿತಾ ರಾಮ್ ಟಾಪ್ ಸ್ಥಾನ ಪಡೆಯುತ್ತಾರೆ. ಯಾಕೆ ಪದೇ ಪದೇ ಸೀರೆಯಲ್ಲಿ ಬರ್ತೀರಾ ಅಂತಾನೂ ನೆಟ್ಟಿಗರು ಪ್ರಶ್ನೆ ಹಾಕಿದ್ದರು.
ದಪ್ಪಗಾದ್ರೆ ಸೀರೆ ಹಾಕೋಂಡು ಕವರ್ ಮಾಡ್ಕೊಳ್ತಾರೆ, ಸೀರೆ ಜಾಸ್ತಿ ಇರ್ಬೇಕು, ಕ್ಯಾಮೆರಾ ಮುಂದೆ ಸೀರೆ ಬೇರೆ ಟೈಮ್‌ನಲ್ಲಿ ಮಾಡರ್ನ್ ಎಂದು ಕಾಲೆಳೆದಿದ್ದಾರೆ.
ರಮ್ಯಾ ಸ್ಥಾನಕ್ಕೆ ರಚಿತಾ ರಾಮ್ ಎಂಟ್ರಿ ಕೊಟ್ಟಿರುವುದು ಶಾಕಿಂಗ್ ವಿಚಾರ ಆದರೆ ಗೀತಾ ಪಾತ್ರಕ್ಕೆ ಎಷ್ಟರ ಮಟ್ಟಕ್ಕೆ ಜೀವ ತುಂಬುತ್ತಾರೆಂದು ಕಾದು ನೋಡಬೇಕಿದೆ ಅಂತಾರೆ ಸಿನಿ ರಸಿಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.