ಇಷ್ಟ ಬಂದಿದ್ದು ತರ್ಸ್ಕೊಂಡು ತಿನ್ಬೋದಿತ್ತು, ದೇವತೆ ರೀತಿ ಇದ್ದೆ; ತಂದೆ ನೆನೆದು ಕಣ್ಣೀರಿಟ್ಟ ನಟಿ ವಿಜಯಲಕ್ಷ್ಮಿ
ತಂದೆಯನ್ನು ನೆನೆದು ಭಾವುಕರಾದ ನಟಿ ವಿಜಯಲಕ್ಷ್ಮಿ. ದೇವತೆ ರೀತಿ ನೋಡಿಕೊಂಡ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು ಶೃಂಗೇರಿಯಲ್ಲಿ.....
ನಾಗಮಂಡಲ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿಜಯಲಕ್ಷ್ಮಿ, ಸ್ಟಾರ್ ನಟರಿಗೆ ಜೋಡಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜೋಡಿ ಹಕ್ಕಿ,ಭೂಮಿ ತಾಯಿ, ಹಬ್ಬ, ಅರುಣೋಧಯ, ಸೂರ್ಯ ವಂಶ, ಜೋಗುಳ, ಕನಕಾಂಬರಿ ಸೇರಿಂದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಮಿಂಚಿದ್ದಾರೆ. ವಿಜಯಲಕ್ಷ್ಮಿ ಬಣ್ಣದ ಜರ್ನಿಗೆ ಸಾಥ್ ಕೊಟ್ಟ ವ್ಯಕ್ತಿನೇ ಅವರ ತಂದೆ. ತಂದೆಯನ್ನು ಕಳೆದುಕೊಂಡಾಗ ಎಷ್ಟು ಕಷ್ಟ ಆಯ್ತು ಎಂದು ಹೇಳಿದ್ದಾರೆ.
ತಂದೆಯ ಮುದ್ದಿನ ದೇವತೆ:
'ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ನನ್ನ ತಂದೆಗೆ ನಾನು ದೇವತೆ ರೀತಿ. ತಂದೆ ನನ್ನನ್ನು ಎಷ್ಟು ಪ್ರೀತಿ ಮಾಡುತ್ತಿದ್ದರು ಅಂದ್ರೆ ಅವರಷ್ಟು ಪ್ರೀತಿ ಮಾಡುವ ಬೇರೆ ವ್ಯಕ್ತಿ ನನಗೆ ಸಿಗುವುದಿಲ್ಲ. ಜೀವನದಲ್ಲಿ ನೋವು ಅಂದ್ರೆನೇ ಏನೂ ಎಂದು ಗೊತ್ತಾಗದಂತೆ ಬೆಳೆಸಿದ ವ್ಯಕ್ತಿ ನನ್ನ ತಂದೆ. ಚಿಕ್ಕಮಗಳು ಆಗಿರುವ ಕಾರಣ ತುಂಬಾ ಪ್ಯಾಂಪರ್ ಮಾಡುತ್ತಿದ್ದರು, ನನಗೆ ಏನು ಬೇಕು ಅಂತ ಹೇಳಿದ್ದರೆ ಸಾಕು ರೆಡಿಯಾಗಿಡುತ್ತಿದ್ದರು. ಚಿಕ್ಕ ವಯಸ್ಸಿನಿಂದ ನಾನು ಹಾರ್ಡ್ ವರ್ಕ್ ಮಾಡುತ್ತಿದ್ದೆ ಎಂದು ಅವರಿಗೆ ಗೊತ್ತಿದೆ. ನಾನು ಬಾಲನಟಿಯಾಗಿದ್ದಾಗ ಯಾವುತ್ತೂ ಯಾವುದರಿಂದ ಎಷ್ಟು ಹಣ ಬಂದಿದೆ ಎಂದು ಕೇಳುತ್ತಿರಲಿಲ್ಲ, ಅವೆನ್ಯೂ ರಸ್ತೆಯಲ್ಲಿ ಸಿಗುತ್ತಿದ್ದೆ ಇಡ್ಲಿ ಮತ್ತು ಚಟ್ನಿಯನ್ನು ಕೊಡಿಸಬೇಕಿತ್ತು. ನಾನು ಡ್ಯಾನ್ಸ್ ಮಾಡಿದರೆ ನನಗೆ ಇಡ್ಲಿ ಸಿಗುತ್ತದೆ ಅನ್ನೋದು ಅಷ್ಟೇ ನನ್ನ ಜೀವನ' ಎಂದು ಆರ್‌ಜೆ ರಾಜೇಶ್ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಮಾತನಾಡಿದ್ದಾರೆ.
ಪಾರ್ಕ್‌ನಲ್ಲಿ ಹಾಟ್ ಪೋಸ್ ಕೊಟ್ಟ ಸೋನು ; ಡೀಪ್ ಜಾಸ್ತಿ ಆಯ್ತು, ಟಾಪ್ ತುಂಡ ಆಯ್ತು ಎಂದು
ಬೇಕಿದ್ದು ತಿನ್ನಬೋದಿತ್ತು:
'ತಮ್ಮ ಜೀವನ ಕೊನೆಯ ಕ್ಷಣದವರೆಗೂ ನನ್ನ ಜೊತೆಗಿದ್ದರು, ಹಿಂದಿನ ದಿನ ಚಿತ್ರೀಕರಣ ಮಾಡುವಾಗ ಅವರೇ ಕಾರು ಓಡಿಸಿಕೊಂಡು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಸೆಟ್‌ನಲ್ಲಿ ನಾನು ಯಾರನ್ನೂ ಊಟ ಕೇಳಬಾರದು..ನನಗೆ ಏನು ಬೇಕು ಅದನ್ನು ತರಿಸಿಕೊಂಡು ತಿನ್ನುವ ಸಪೋರ್ಟ್ ತಂದೆ ಕೊಟ್ಟಿದ್ದರು. ಹೃದಯಾಘಾತದಿಂದ 2005ರಲ್ಲಿ ತಂದೆ ಅಗಲಿದರು, ಆಗ ನನಗೆ ಕೇವಲ 25 ವರ್ಷ. ಮೂರು ವರ್ಷಗಳ ನಂತರ ಈಗ ನಾನು ಕಮ್ ಬ್ಯಾಕ್ ಮಾಡುತ್ತಿದ್ದೀನಿ, ಸೆಟ್‌ನಲ್ಲಿ ನನ್ನ ಪ್ರೋಮೋಶೂಟ್ ಆಗುತ್ತಿರುವಾಗ ಕ್ಯಾಮೆರಾ ಹಿಂದೆ ತಂದೆ ನಿಂತು ನೋಡುತ್ತಿದ್ದಾರೆ ಅನ್ನೋ ಭಾವನೆ ಬರುತ್ತಿದೆ' ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
33 ವರ್ಷಕ್ಕೆ ಬೆಂಗಳೂರಿನಲ್ಲಿ ಮನೆ ಮಾಡಿದ್ದೀನಿ, ಡೆಲಿವರಿ ಹುಡುಗರಿಗೆ 'ನಮ್ಮನೆ'ಗೆ ಬನ್ನಿ ಅಂದ್ರೆ
'ನಾನು ಒಂದು ಟೇಕ್ ಮೇಲೆ ಸೀನ್ ಮಾಡಬಾರದು ಎಂದು ತಂದೆ ಹೇಳುತ್ತಿದ್ದರು, ಒಂದು ವೇಳೆ ಸೀನ್ ತಡವಾದರೂ ಅವರೇ ನನ್ನನ್ನು ಕರೆದು ಏನಾಗಿದೆ ಏನಾಗುತ್ತಿದೆ ಎಂದು ಮಾತನಾಡಿಸಿ ಸೀನ್ ಪರ್ಫೆಕ್ಟ್ ಬರುವಂತೆ ಮಾಡುತ್ತಿದ್ದರು. ತಂದೆ ತೀರಿ ಹೋಗುವ ದಿನ ಮನಸ್ಸಿನಲ್ಲಿ ಏನೋ ಕಳವಳ ಏನೋ ಆಗುತ್ತಿದೆ ಅನಿಸುತ್ತಿತ್ತು ಅದಿಕ್ಕೆ ನಾನೇ ಅವರಿಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಇಟ್ಟಿದ್ವಿ. ತಂದೆಗೆ ಬೆಂಗಳೂರು ಅಂದ್ರೆ ತುಂಬಾನೇ ಇಷ್ಟ ಚೆನ್ನೈ ಅಂದ್ರೆ ಅಷ್ಟಾಗಿ ಇಷ್ಟ ಆಗುತ್ತಿರಲಿಲ್ಲ. ಸದಾ ಹೇಳುತ್ತಿದ್ದರು ನಾನು ಸತ್ತರೂ ಕರ್ನಾಟಕದಲ್ಲಿ ಸಾಯಬೇಕು ಹಾಗೂ ಅಂತಿಮ ಸಂಸ್ಕಾರವನ್ನು ಶೃಂಗೇರಿಯಲ್ಲಿ ಮಾಡಬೇಕು ಎನ್ನುತ್ತಿದ್ದರು'ಎಂದಿದ್ದಾರೆ ವಿಜಯಲಕ್ಷ್ಮಿ.