ಆರಂಭದಿಂದ ಕೊನೆಯವರೆಗೂ ವೀಡಿಯೋ ಕಾಲ್‌ ಮೂಲಕವೇ ನಡೆಯುವ ವರ್ಚ್ಯುವಲ್ ಚಿತ್ರ 'ಮೇಡ್‌ ಇನ್‌ ಚೈನಾ'. ಪ್ರಿಯಾಂಕಾ ತಿಮ್ಮೇಶ್‌ ಹಾಗೂ ನಾಗಭೂಷಣ್‌ ನಟನೆಯ ಈ ಚಿತ್ರವನ್ನು ಪ್ರೀತಂ ತೆಗ್ಗಿನಮನೆ ನಿರ್ದೇಶಿಸಿದ್ದಾರೆ. 

ಆರಂಭದಿಂದ ಕೊನೆಯವರೆಗೂ ವೀಡಿಯೋ ಕಾಲ್‌ ಮೂಲಕವೇ ನಡೆಯುವ ವರ್ಚ್ಯುವಲ್ ಚಿತ್ರ 'ಮೇಡ್‌ ಇನ್‌ ಚೈನಾ' (Made in China). ಪ್ರಿಯಾಂಕಾ ತಿಮ್ಮೇಶ್‌ (Priyanka Thimmesh) ಹಾಗೂ ನಾಗಭೂಷಣ್‌ (Nagabhushan) ನಟನೆಯ ಈ ಚಿತ್ರವನ್ನು ಪ್ರೀತಂ ತೆಗ್ಗಿನಮನೆ (Preetham Tegginamane) ನಿರ್ದೇಶಿಸಿದ್ದಾರೆ. ಈ ಹಿಂದೆ ಮಲಯಾಳಂನಲ್ಲಿ (Malayalam) ಬಂದಿದ್ದ 'ಸೀ ಯೂ ಸೂನ್‌' (see you soon) ಮಾದರಿಯ ಚಿತ್ರವಿದು. ಕನ್ನಡದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗ ನಡೆಯುತ್ತಿದೆ.

ಚಿತ್ರದ ಬಗ್ಗೆ ವಿವರ ನೀಡಿದ ನಿರ್ದೇಶಕ ಪ್ರೀತಮ್‌ ತೆಗ್ಗಿನಮನೆ, ‘ಇದೊಂದು ಪ್ರಯೋಗಶೀಲ ಚಿತ್ರ. ಈವರೆಗೆ ಇಂಥಾ ಚಿತ್ರವನ್ನು ಥಿಯೇಟರ್‌ನಲ್ಲಿ ರಿಲೀಸ್‌ ಮಾಡಿದ ಉದಾಹರಣೆ ಇಲ್ಲ. ನಾವು ಆ ಸಾಹಸಕ್ಕೆ ಮುಂದಾಗಿದ್ದೇವೆ. ಇದು ಲಾಕ್‌ಡೌನ್‌ ಕಾಲದ ಫ್ಯಾಮಿಲಿ ಡ್ರಾಮಾ. ಗರ್ಭಿಣಿ ಪತ್ನಿ ಭಾರತದಲ್ಲಿರುತ್ತಾಳೆ, ಪತಿ ಚೀನಾದಲ್ಲಿರುತ್ತಾನೆ. ಇವರಿಬ್ಬರ ನಡುವಿನ ವೀಡಿಯೋ ಕಾಲ್‌ ಮಾತುಕತೆಯಲ್ಲೇ ಚಿತ್ರವಿದೆ’ ಎಂದರು.

ಇತ್ತೀಚೆಗೆ 'ಮೇಡ್​ ಇನ್​ ಚೈನಾ' ಸಿನಿಮಾದ ಟೀಸರ್ ​(Teaser) ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಇದರಲ್ಲಿ ತೋರಿಸಲಾಗಿದೆ. ಚಿತ್ರದ ಕತೆ ಒಂಥರ ಇಂಟ್ರೆಸ್ಟಿಂಗ್ ಆಗಿದ್ದು, ನಾಯಕ-ನಾಯಕಿಯ ವರ್ಚುವಲ್ ಭೇಟಿಗೆ ಅಡಿಯಾಗುವ ಕೆಲವು ಸನ್ನಿವೇಶಗಳು ಸಖತ್ ಫನ್​ ಇದೆ. ಅದರ ಒಂದು ಝಲಕ್ ಚಿತ್ರದ ಟೀಸರ್‌ನಲ್ಲಿ ಚಿತ್ರಪ್ರೇಮಿಗಳಿಗೆ ದರ್ಶನವಾಗಿದೆ. ಅಲ್ಲದೆ ಚಿತ್ರದ ಟೀಸರ್ ನೋಡಿದ ಮೇಲೆ ಪ್ರೇಕ್ಷಕರಲ್ಲಿ 'ಮೇಡ್ ಇನ್ ಚೈನಾ' ಮೇಲೆ ನಿರಿಕ್ಷೇ ಹೆಚ್ಚಾಗಿದೆ.

ಕಿಸ್ಸಿಂಗ್‌ ಸೀನ್‌ ಮಾಡಲು ಪ್ರಜ್ವಲ್‌ ದೇವರಾಜ್‌ಗೂ ಕಂಫರ್ಟ್‌ ಇರಲಿಲ್ಲ: Priyanka Thimmesh

ಇನ್ನು ಲಾಕ್‌ಡೌನ್‌ನಲ್ಲಿ ಫಾರಿನಲ್ಲಿ ಲಾಕ್ ಆಗುವ ನವ ಮದುಮಗನ ಪಾತ್ರದಲ್ಲಿ ನಾಗಭೂಷಣ್ ಕಾಣಿಸಿಕೊಂಡರೆ. ನಾಯಕಿಯಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. 'ಬಡವ ರಾಸ್ಕಲ್' ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಕಾಮಿಡಿಯ ಕಚಗುಳಿ ಇಟ್ಟಿದ್ದ ನಾಗಭೂಷಣ ಈ ಚಿತ್ರದಲ್ಲೂ ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸಲು ತವಕದಲ್ಲಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್​ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ.

'ಮೇಡ್‌ ಇನ್‌ ಚೈನಾ' ವರ್ಚುವಲ್​ ಸಿನಿಮಾವಾದ್ದರಿಂದ ಇದನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನಾಗಭೂಷಣ್​ ಅವರಿಗೆ ಆರಂಭದಲ್ಲಿ ಅನುಮಾನ ಇತ್ತು. ನಂತರ ಅವರ ಮನವೊಲಿಸಿ ಶೂಟಿಂಗ್​ ಮಾಡಿದೆವು. ಈಗ ಔಟ್​ಪುಟ್​ ನೋಡಿ ಅವರು ಖುಷಿಪಟ್ಟಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಮತ್ತು ನಾಗಭೂಷಣ್​ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ. ಫ್ಯಾಮಿಲಿ ಡ್ರಾಮಾ ಕಥೆ ಈ ಚಿತ್ರದಲ್ಲಿದೆ' ಎಂದು ಪ್ರೀತಂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸದ್ಯ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸೆನ್ಸಾರ್​ ಪ್ರಮಾಣ ಪತ್ರ (Censor Certificate) ಕೂಡ ಸಿಗಲಿದೆ. 'ಈ ಸಿನಿಮಾದ ದೃಶ್ಯಗಳು ವಿಡಿಯೋ ಕಾಲ್​ ಮಾದರಿಯಲ್ಲಿ ಇದ್ದರೂ ಕೂಡ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಎಂಜಾಯ್​ ಮಾಡಬಹುದು. ಈ ಹೊಸ ಪ್ರಕಾರಕ್ಕೆ ಹೊಂದಿಕೊಳ್ಳಲು ಪ್ರೇಕ್ಷಕರಿಗೆ 10 ನಿಮಿಷ ಬೇಕಾಗಬಹುದು. ನಂತರ ಸಿನಿಮಾ ಇಷ್ಟ ಆಗುತ್ತದೆ. ಒಟಿಟಿಯಲ್ಲಿ ರಿಲೀಸ್​ ಮಾಡಬೇಕೋ ಅಥವಾ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ನಿರ್ದೇಶಕ ಪ್ರೀತಂ ತಿಳಿಸಿದ್ದಾರೆ.

Ramya: ಸ್ಯಾಂಡಲ್‌ವುಡ್‌ ಕಮ್ ಬ್ಯಾಕ್ ಬಗ್ಗೆ 'ಕುತೂಹಲ ಹೀಗೆ ಉಳಿಸಿಕೊಳ್ಳಿ' ಎಂದ ಮೋಹಕ ತಾರೆ!

ಇನ್ನು 'ಮೇಡ್‌ ಇನ್‌ ಚೈನಾ' ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಕಥೆ ಬರೆದಿದ್ದಾರೆ. ವಿಶೇಷವಾಗಿ ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಕಲನವನ್ನೂ ಚಿತ್ರದ ನಿರ್ದೇಶಕರೇ ನಿಭಾಯಿಸಿದ್ದಾರೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವೀವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

YouTube video player