ಅಮ್ಮ ಮತ್ತು ಅತ್ತಿಗೆಯನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜೀವನದ ಗುರಿ ಎಂದು ತರುಣ್ ಸುಧೀರ್ ಹೇಳಿದ್ದಾರೆ. ಆ 7 ವರ್ಷ ಜೀವನ ಹೇಗಿತ್ತು?
90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡುತ್ತಿದ್ದ ನಟ ಹಾಗೂ ಖಳನಟ ಸುಧೀರ್ 1999ರಲ್ಲಿ ಅಸ್ತಮಾದಿಂದ ಕೊನೆಯುಸಿರೆಳೆಯುತ್ತಾರೆ. ಆಗಷ್ಟೇ ಕಾಲೆಜ್‌ಗೆ ಕಾಲಿಟ್ಟಿದ್ದ ತರುಣ್ ಸುಧೀರ್ ಮತ್ತು ನಂದಕಿಶೋರ್ ನಾಯಕ್ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ. ಸುಧೀರ್ ಪತ್ನಿ ಮಾಲತಿ ಮತ್ತೊಮ್ಮೆ ನಾಟಕ ಕಂಪನಿ ಆರಂಭಿಸಿ ಹೇಗೆ ಜೀವನ ಕಟ್ಟಲು ಶುರು ಮಾಡಿದ್ದರು ಎಂದು ತರುಣ್ ಸುಧೀರ್ ಹಂಚಿಕೊಂಡಿದ್ದಾರೆ.
'ಸ್ಕೂಲ್‌ನಲ್ಲಿ ಇದ್ದಾಗ ತಂದೆಯನ್ನು ಕಳೆದುಕೊಂಡಿದ್ದು ಜೀವನದ ದೊಡ್ಡ ಶಾಕ್ ಅದಾಗಿತ್ತು. ಅವರನ್ನು ಕಳೆದುಕೊಂಡ ನೋವು ತುಂಬಾ ಇದೆ. ಏಕೆಂದರೆ ತುಂಬಾ ಆರೋಗ್ಯವಾಗಿದ್ದರು ಶೂಟಿಂಗ್ ಮತ್ತು ನಾಟಕ ಮುಗಿಸಿಕೊಂಡು ಬಂದವರು. ಅವರಿಗೆ ಯಾವ ಕಾಯಿಳೆ ಇರಲಿಲ್ಲ ಚಿಕ್ಕ ಆಸ್ತಮಾ ಇತ್ತು ಅಷ್ಟೆ.ಆಸ್ತಮಾದಿಂದ ಅವರನ್ನು ಕಳೆದುಕೊಳ್ಳುವ ಮಟ್ಟಕೆ ಪರಿಣಾಮ ಇದೆ ಅನ್ನೋ ಐಡಿಯಾ ನನಗೆ ಇರಲಿಲ್ಲ. ಅಗ ನನಗೆ 16 ವರ್ಷ ಫಸ್ಟ್ ಪಿಯುಸಿ ಓದುತ್ತಿದ್ದೆ. ಸಹೋದರ ನಂದಾ ಡಿಗ್ರಿ ಕೊನೆ ವರ್ಷ. ಹೀಗೆ ಆದಾಗ ಆ ಶಾಕ್‌ನಿಂದ ಹೊರ ಬರಲು ಆಗಲಿಲ್ಲ ನಮಗೆ. ನನ್ನ ತಾಯಿ ಗೃಹಿಣಿ...ಥಿಯೇಟರ್ ಮಾಡುತ್ತಿದ್ದರು ಆದರೆ ಮದುವೆ ಆದ ಮೇಲೆ ಅದನ್ನು ಬಿಟ್ಟಿದ್ದರು. ಮನೆಯಲ್ಲಿ ತಾಯಿ ನಮ್ಮನ್ನು ಕೆಲಸಕ್ಕೆ ಕಳುಹಿಸುವಷ್ಟು ದೊಡ್ಡವರು ಆಗಿರಲಿಲ್ಲ ಮಕ್ಕಳು ಅಥವಾ ತೀರಾ ಚಿಕ್ಕವರು ಅಲ್ಲ. ಆ ಸಮದಯಲ್ಲಿ ನನ್ನ ತಾಯಿ ತುಂಬಾ ಕಷ್ಟ ಪಟ್ಟಿದ್ದರು. ಮತ್ತೆ ಡ್ರಾಮಾ ಕಂಪನಿ ಕಟ್ಟುವುದಕ್ಕೆ ಮುಂದಾಗುತ್ತಾರೆ ಅಲ್ಲಿಂದ ಜರ್ನಿ ಶುರು ಮಾಡುತ್ತಾರೆ' ಎಂದು ತರುಣ್ ಸುಧೀರ್ ಕನ್ನಡದ ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Golden Gang ವೇದಿಕೆ ಮೇಲೆ ನಿರ್ದೇಶಕ Tarun Sudhirಗೆ ವಧು ಹುಡುಕಾಟ!
'ತಂದೆ ಇದ್ದಾಗ ಎಲ್ಲಾ ಚೆನ್ನಾಗಿತ್ತು ಆಮೇಲೆ ಝೋರೋ ಆಯ್ತು ಜೀವನ...ಮತ್ತೆ ಜೀವನ ಕಟ್ಟಿಕೊಂಡಿದ್ದು ನನ್ನ ತಾಯಿ ಅವರಿಂದ. ಅಣ್ಣ ಕೂಡ ನಾಟಕ ಮಾಡಲು ಶುರು ಮಾಡುತ್ತಾನೆ ನಾನು ಡ್ರಾಮಾ ಕಂಪನಿಯಲ್ಲಿ ಕೆಲಸ ಶುರು ಮಾಡಿದೆ. ರಾತ್ರಿ ನಾಟನ ಮಾಡುವುದು ಬೆಳಗ್ಗೆ ರೆಸ್ಟ್ ಮಾಡುವುದು. ಬೆಳಗ್ಗೆ ಎದ್ದು ಜಾಹೀರಾತು ಕೊಡಲು ಹೋಗುತ್ತಿದ್ದೆ ಟಿಕೆಟ್ ಹರಿಯುವುದು ನಾನೇ. ನಂದಾ ಅಲ್ಲಿ ಮ್ಯೂಸಿಕ್ ಬಾರಿಸುತ್ತಿದ್ದ ಹಾಗೂ ಗೇಟ್ ಕಾಯುತ್ತಿದ್ದ. ಅಲ್ಲಿಂದ ಚಿಕ್ಕ ಚಿಕ್ಕ ಪಾತ್ರ ಮಾಡುವುದಕ್ಕೆ ನಾವು ಶುರು ಮಾಡಿದೆವು. ನಮ್ಮಲ್ಲಿ ಯಾರಿಗೂ ಸಿನಿಮಾ ಮಾಡುವ ಪ್ಲ್ಯಾನ್ ಇರಲಿಲ್ಲ' ಎಂದು ತರುಣ್ ಹೇಳಿದ್ದಾರೆ.
5 ಕೋಟಿ ಬೇಡ್ವೇ ಬೇಡ; 10 ವರ್ಷಗಳ ಹಿಂದೆ ಉಪೇಂದ್ರ ಕೊಟ್ಟ ಹೇಳಿಕೆಯನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು!
'16ನೇ ವಯಸ್ಸಿನಿಂದ ಸುಮಾರು 7 ವರ್ಷಗಳ ಕಾಲ ತುಂಬಾ ಕೆಟ್ಟ ಸಮಯವನ್ನು ನಾನು ನೋಡಿರುವೆ, ನಮ್ಮ ತಾಯಿ ನಮಗೆ ಎಷ್ಟು ಸಪೋರ್ಟ್ ಮಾಡಿದರು ಅದು ಗ್ರೇಟ್. ಆ ವಯಸ್ಸಿನಲ್ಲಿ ನಮ್ಮ ತಾಯಿಯನ್ನು ನಾವು ನೋಡಿಕೊಳ್ಳಬೇಕಿತ್ತು ಆದರೆ ಅವರು ನಮ್ಮನ್ನು ನೋಡಿಕೊಳ್ಳುತ್ತಿದ್ದರು. ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಮಯ ಮುಂದೆ ಇದೆ ಅಂತ ದೇವರು ಹೇಳುತ್ತಿದ್ದರು ಅನಿಸುತ್ತದೆ. ನನ್ನ ತಾಯಿ ಮತ್ತು ನಮ್ಮ ಅತ್ತಿಗೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಹೀಗಾಗಿ ಏನೇ ಬರಲಿ ಅವರಿಬ್ಬರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದು ನಮ್ಮ ಗುರಿ. ಆ ಕಷ್ಟ ಸಮಯ ಮುಂದೆ ಸಾಗಿದ ಮೇಲೆ ದೇವರ ನಮ್ಮ ಕೈ ಹಿಡಿಯುವುದಕ್ಕೆ ಶುರು ಮಾಡಿದ. ಇವತ್ತಿಗೂ ನಮ್ಮ ತಲೆಯಲ್ಲಿರುವುದು ನಮ್ಮ ತಾಯಿ ಮತ್ತು ಅತ್ತಿಗೆ ಮಾತ್ರ. ಹಣದ ವಿಚಾರದಲ್ಲಿ ಝೀರೋನೂ ನೋಡಿದ್ದೀನಿ ಪೀಕ್ ನೋಡಿದ್ದೀನಿ ಒಂದು ವೇಳೆ ಕೆಳಗೆ ಬಿದ್ದರೂ ಮತ್ತೊಮ್ಮೆ ಜೀವನ ಶುರು ಮಾಡಲು ದೇವರು ಕಲಿಸಿದ್ದಾನೆ. ಕಷ್ಟ ಬಂದ್ರೆ ಎದುರಿಸುವೆ ಆದರೆ ಸೋಲು ಮಾತ್ರ ಒಪ್ಪಿಕೊಳ್ಳುವುದಿಲ್ಲ'ಎಂದಿದ್ದಾರೆ ತರುಣ್.
