'ಲವ್ ಮಾಕ್ಟೇಲ್' ಖ್ಯಾತಿಯ ಅಮೃತಾ ಅಯ್ಯಂಗಾರ್ ಈಗ ಕಥೆ, ಪಾತ್ರಗಳನ್ನು ಬರೆಯುತ್ತಿದ್ದಾರೆ. ಚಿತ್ರರಂಗದಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸರಿಯಾಗಿ ಚಿತ್ರಿಸದಿರುವುದು, ಮಹಿಳಾ ಪಾತ್ರಗಳ ಭಾವನೆಗಳನ್ನು ಸೂಕ್ಷ್ಮವಾಗಿ ತೋರಿಸದಿರುವುದು ಹಾಗೂ ಸ್ವಂತ ಅವಕಾಶ ಸೃಷ್ಟಿಸಿಕೊಳ್ಳುವ ಪ್ರೇರಣೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ತಾಯಿಯ ಬದುಕೇ ತಮಗೆ ಸ್ಫೂರ್ತಿ ಎನ್ನುತ್ತಾರೆ.
ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೃತಾ ಅಯ್ಯಂಗಾರ್ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಸ್ಯಾಂಡಲ್‌ವುಡ್ ಕರೀನಾ ಕಪೂರ್ ಅಂತಲೇ ಕಿರೀಟ ಪಡೆದಿರುವ ಅಮೃತಾ ಈಗ ಕಥೆ ಮತ್ತು ಪಾತ್ರಗಳನ್ನು ಬರೆಯಲು ಮುಂದಾಗಿದ್ದಾರೆ. ನಮಗೆ ನಾವೇ ಅವಕಾಶಗಳು ಕೆಲಸಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಅಮೃತಾ ಈ ನಿರ್ಧಾರ ಮಾಡಿದ್ದಾರೆ. ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ನನ್ನ ಸಿನಿಮಾ ಇಂಡಸ್ಟ್ರಿಯಲ್ಲಿ ಮೆಂಟಲ್ ಇಲ್‌ನೆಸ್‌ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಅಥವಾ ತಪ್ಪಾಗಿ ತೋರಿಸಿದ್ದಾರೆ. ಸಿನಿಮಾದಲ್ಲಿ ಮಹಿಳಾ ಪಾತ್ರ ಕೋಪಗೊಂಡಾಗ ಆ ನೋವು ಆ ಗಾಯದ ಆಳವನ್ನು ತೋರಿಸಬೇಕಾದ ರೀತಿಯಲ್ಲಿ ತೋರಿಸುವುದಿಲ್ಲ' ಎಂದು ಅಮೃತಾ ಹೇಳಿದ್ದಾರೆ.
'ಚಿಕ್ಕವಳಿಂದ ನಾನು ಸಾಕಷ್ಟು ಜನರನ್ನು ನೋಡಿಕೊಂಡು ಬೆಳೆದಿರುವ ಹೀಗಾಗಿ ನನ್ನ ಯೋಚನೆಯಲ್ಲಿ ಹೇಳದೆ ಇರುವ ಅದೆಷ್ಟೋ ಕಥೆಗಳು ಇದೆ. ಆದರೆ ನಾನು ಅಂದುಕೊಂಡ ರೀತಿಯಲ್ಲಿ ಪಾತ್ರವನ್ನು ಪ್ರದರ್ಶಿಸಲು ಅವಕಾಶ ಸಿಗಲಿಲ್ಲ. ಮಿಲನಾ-ಕೃಷ್ಣ ಮತ್ತು ಧನಂಜಯ್ ಜೊತೆ ಕೆಲಸ ಮಾಡುವಾಗ ನನಗೆ ಒಂದು ಅರ್ಥವಾಗಿದ್ದು ಏನೆಂದರೆ ಇವರು ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ. ಅವಕಾಶಗಳು ಕಡಿಮೆ ಆದಾಗ ಅವರೇ ಕೆಲಸ ಸೃಷ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿರುವುದು ಲವ್ ಮಾಕ್ಟೇಲ್ ಮತ್ತು ಬಡವ ರಾಸ್ಕಲ್ ಸಿನಿಮಾ. ಹೀಗಾಗಿ ನಾನೇ ಪಾತ್ರ ಬರೆಯಲು ಶುರು ಮಾಡಿದೆ' ಎಂದು ಟೈಮ್ಸ್ ಅಫ್ ಇಂಡಿಯಾ ಸಂದರ್ಶನದಲ್ಲಿ ಅಮೃತಾ ಮಾತನಾಡಿದ್ದಾರೆ.
ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನ್ಸುತ್ತೆ: ದಿನಕರ್ ತೂಗುದೀಪ ಬೇಸರ
'ನನ್ನ ತಾಯಿ ಜೊತೆ ನಾನು ತುಂಬಾನೇ ಕ್ಲೋಸ್ ಆಗಿರುವೆ. ಆಕೆ ಶಾಲಾ ಶಿಕ್ಷಕಿ...ನಾನು ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಇದ್ದಾಗ ಆಕೆಗೆ ಹೇಳಿಕೊಡುತ್ತಿದ್ದಿದ್ದು. ಆಕ್ಟಿಂಗ್ ಶುರು ಮಾಡಿದ ಮೇಲೂ ಒಂದು ಪಾತ್ರದ ಭಾವನೆಯನ್ನು ಹೇಗೆ ವ್ಯಕ್ತ ಪಡಿಸುವುದು ಎಂದು ತಾಯಿಯಿಂದ ಹೇಳಿಸಿಕೊಳ್ಳುತ್ತಿದ್ದೆ. ಆಕೆ ಜೀವನದಲ್ಲಿ ತುಂಬಾ ನೋಡಿದ್ದಾರೆ. ಈಗ ಸೊಸೈಟಿ ಇರುವಂತೆ ಆಗ ಇರಲಿಲ್ಲ...ಆಗ ಡಿವೋರ್ಸ್ ಪಡೆದಿರುವ ಮಹಿಳೆಯರನ್ನು ನೋಡುವ ರೀತಿನೇ ಬೇರೆ ಇತ್ತು. 26 ವರ್ಷಗಳ ಕಾಲ ನನ್ನನ್ನು ಬೆಳೆಸಲು ತುಂಬಾ ಗಟ್ಟಿಯಾಗಿ ನಿಂತರು. ಮನೆಯಲ್ಲಿಯೇ ಒಳ್ಳೆಯ ಉದಾಹರಣೆ ಇರುವಾ ನಾನು ಸ್ಫೂರ್ತಿ ಪಡೆಯಲು ಎಲ್ಲಿಯೂ ಹುಡುಕುವುದು ಬೇಡ' ಎಂದಿದ್ದಾರೆ ಅಮೃತಾ.
