ನಾಲ್ಕು ಅಂಶಗಳನ್ನಿಟ್ಟು ದ್ವಾರಕೀಶ್‌ ಸಿನಿಮಾ ಮಾಡ್ತಿದ್ರು ಅಂದ್ರು ಹಂಸಲೇಖ; ಏನದು ಚೌಕಾಬಾರಾ?

ದ್ವಾರಕೀಶ್ ಹಾಗು ನಾನು ಇಬ್ಬರೂ ಆರ್ಟಿಸ್ಟ್‌ಗಳು. ಇಬ್ಬರೂ ಎಂಟರ್‌ಟೈನರ್‌ಗಳು. ಅವರು ಹುಟ್ಟಿನಿಂದ ಎಂಟರ್‌ಟೈನರ್‌ ಆಗಿದ್ದರೆ ನಾನು ನಾಟಕದಿಂದ ಮನರಂಜನೆ ನೀಡಲು ಪ್ರಾರಂಭಿಸಿದವನು. ಲಕ್ಕಿಲಿ, ನಾನು ಮತ್ತು ದ್ವಾರಕೀಶ್ ಸರ್ ಇಬ್ಬರೂ ನಾಟಕದಲ್ಲಿ ಕೆಲಸ ಮಾಡಿದವರು..

Music director Hamsalekha speaks on the late actor cum producer Dwarakish srb

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕರಾದ ದ್ವಾರಕೀಶ್ (Dwarakish) ಅವರು ಇತ್ತೀಚೆಗೆ ನಮ್ಮನ್ನಗಲಿರುವುದು ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 50 ಸಿನಿಮಾಗಳನ್ನು ನಿರ್ಮಾಣ ಮಾಡಿ, 20 ಸಿನಿಮಾ ನಿರ್ದೇಶನ ಹಾಗೂ ಸುಮಾರು 300 ಸಿನಿಮಾಗಳಲ್ಲಿ ನಟನೆ ಮಾಡಿ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು ದ್ವಾರಕೀಶ್. ಅವರು ಇಹಲೋಕ ತ್ಯಜಿಸಿದಾಗ ಸಹಜವಾಗಿಯೇ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು ಹಾಗು ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರು ಅವರ ಅಗಲುವಿಕೆಗಾಗಿ ಕಂಬನಿ ಮಿಡಿದಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಹಾಗೇ, ಬಹಳಷ್ಟು ಜನರು ದ್ವಾರಕೀಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. 

ನಟ ದ್ವಾರಕೀಶ್ ಅವರನ್ನು ಬಲ್ಲವರು, ಆತ್ಮೀಯರು ಹಾಗು ಅವರ ಕುಟುಂಬದವರನ್ನು ಮಾತನಾಡಿಸಿ ಅವರ ಬಗ್ಗೆ ಹೊರಜಗತ್ತಿಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಈಗ ತಿಳಿದುಕೊಳ್ಳಲಾಗಿದೆ. ಹಾಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರನ್ನು ಮಾತನಾಡಿಸಿದಾಗ ಅವರು ದಿವಂಗತ ದ್ವಾರಕೀಶ್ ಅವರ ಬಗ್ಗೆ ಹಲವು ಸಂಗತಿಗಳನ್ನು ಹೇಳಿದ್ದಾರೆ. ಅವರಿಬ್ಬರೂ ನಾಟರಂಗದಲ್ಲಿ ಸಕ್ರಿಯರಾಗಿದ್ದಂಥವರು. ಹಾಗಿದ್ದರೆ, ಹಂಸಲೇಖ ಅವರು ದ್ವಾರಕೀಶ್ ಬಗ್ಗೆ ಏನು ಹೇಳಿದ್ದಾರೆ? 

ವೀರ ಯೋಧನಾದ ಸೂಪರ್ ಹೀರೋ, ಅಶೋಕ ಚಕ್ರವರ್ತಿಯ 9 ರಹಸ್ಯಕಥೆ ಹೇಳಲಿರುವ ತೇಜ್ ಸಜ್ಜಾ!

'ದ್ವಾರಕೀಶ್ ಹಾಗು ನಾನು ಇಬ್ಬರೂ ಆರ್ಟಿಸ್ಟ್‌ಗಳು. ಇಬ್ಬರೂ ಎಂಟರ್‌ಟೈನರ್‌ಗಳು. ಅವರು ಹುಟ್ಟಿನಿಂದ ಎಂಟರ್‌ಟೈನರ್‌ ಆಗಿದ್ದರೆ ನಾನು ನಾಟಕದಿಂದ ಮನರಂಜನೆ ನೀಡಲು ಪ್ರಾರಂಭಿಸಿದವನು. ಲಕ್ಕಿಲಿ, ನಾನು ಮತ್ತು ದ್ವಾರಕೀಶ್ ಸರ್ ಇಬ್ಬರೂ ನಾಟಕದಲ್ಲಿ ಕೆಲಸ ಮಾಡಿದವರು. ಬಿಸಿನೆಸ್‌ ಕರೆಕ್ಟಾಗಿ ಪ್ಲಾನ್ ಮಾಡೋರು. ಸಿನಿಮಾ ಅಂದ್ರೆ ಅದು ಕಾಮನ್‌ ಮ್ಯಾನ್ ನೋಡೋದು ಅಂತ ಅವ್ರಿಗೆ ಗೊತ್ತಿತ್ತು. ಕಾಮನ್ ಮ್ಯಾನ್ ಇಷ್ಟಪಡೋದು ಯಾವ್ದು? ನಗು, ಹಾಡು, ಪ್ರಣಯ ಮತ್ತು ಡಾನ್ಸ್‌. ಇದೇ ನಾಲ್ಕು ಅಂಶಗಳು ಕಾಮನ್ ಮ್ಯಾನ್‌ಗೆ ಇಷ್ಟವಾಗೋದು ಅಂತ ದ್ವಾರಕೀಶ್‌ಗೆ ಗೊತ್ತಿತ್ತು. 

ನಟ ಕುಮಾರ್ ಗೋವಿಂದ್‌ಗೆ 'ಓಂ' ಸಿನಿಮಾ ಕೈ ತಪ್ಪಿಸಿದ್ಯಾರು, 'ಶ್' ಸಿನಿಮಾ ಮಾಡುವಂತಾಗಿದ್ದು ಯಾಕೆ?

ಈ ನಾಲ್ಕು ಅಂಶಗಳು ಇಲ್ದೇ ಅವ್ರು ಸಿನಿಮಾ ಮಾಡ್ತಾನೇ ಇರ್ಲಿಲ್ಲ. ಜನಕ್ಕೆ ತಲುಪಬೇಕು, ತಲುಪೋದಕ್ಕೆ ಏನ್ ಮಾಡ್ಬೇಕು? ಮೊದ್ಲು ಪ್ರೊಡಕ್ಷನ್ ಸಿಸ್ಟಮ್ಯಾಟಿಕ್ ಆಗಿರ್ಬೇಕು. ಅದಕ್ಕೆ ಫಂಡಿಂಗ್ ಇರ್ಬೇಕು, ಫಂಡಿಂಗ್ ಬರ್ಬೇಕು ಅಂದ್ರೆ ಸಿನಿಮಾಗೆ ಒಂದು ಹೈಪ್ ಕ್ರಿಯೇಟ್ ಆಗ್ಬೇಕು. ಕನ್ನಡ ಸಿನಿಮಾರಂಗದಲ್ಲಿ ಸಿನಿಮಾ ಮೇಕಿಂಗ್ ಹಂತದಲ್ಲಿರುವಾಗ ಅದಕ್ಕೊಂದು ಹೈಪ್ ಕ್ರಿಯೇಟ್ ಮಾಡ್ಬೇಕು ಅಂತ ತೋರಿಸಿದ್ದೇ ದ್ವಾರಕೀಶ್ ಅವ್ರು. ಅದಾದಮೇಲೆ ರವಿಚಂದ್ರನ್ ಸರ್ ಬಂದಿದ್ದು. ಇವ್ರಿಬ್ರ ಸಿನಿಮಾಗಳು ಅನೌನ್ಸ್‌ ಮಾಡಿದ್ರೆನೇ ಬಿಸಿನೆಸ್ ಆಗೋದು. ಯಾಕೆ ಅಂದ್ರೆ, ಅದ್ರಲ್ಲಿ ಭರವಸೆ ತುಂಬಿಸಿರೋರು' ಎಂದಿದ್ದಾರೆ ಹಂಸಲೇಖ. 

ಅಂಬರೀಷ್ ಕೈ ತಪ್ಪಿ 'ಬಂಧನ' ಸಿನಿಮಾ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ, ಘಟನೆ ಹಿಂದಿನ ಅಸಲಿಯತ್ತೇನು ?

ದ್ವಾರಕೀಶ್ ಅವರು ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿರಬಹುದು. ಆದರೆ, ಅವರೊಬ್ಬ ಯಶಸ್ವಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ಸಿನಿಮಾ ಪ್ರೀತಿಗೆ ಅವರು ನಟ, ನಿರ್ಮಾಪಕ ಹಾಗು ನಿರ್ದೇಶಕರಾಗಿ ಸಿನಿಮಾರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವುದೇ ಸಾಕ್ಷಿ. ಇಂದು ದ್ವಾರಕೀಶ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಕೊಟ್ಟ ಕೊಡುಗೆಯಿಂದ ಬೆಳೆದುಬಂದಿರುವ ಚಿತ್ರರಂಗ ಎಂದಿಗೂ ಅವರನ್ನು ಮರೆಯಲು ಸಾಧ್ಯವಿಲ್ಲ. 

Latest Videos
Follow Us:
Download App:
  • android
  • ios