Asianet Suvarna News Asianet Suvarna News

ಕೊಲೆ ಆರೋಪ ಪ್ರಕರಣ: ದರ್ಶನ್‌ಗೆ ವಿಚ್ಛೇದನ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?

ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರಿಗೆ ಪತ್ನಿ ವಿಜಯಲಕ್ಷ್ಮೀ ಅವರು ವಿಚ್ಛೇದನ ಕೊಡಲಿದ್ದಾರೆ ಎನ್ನುವ ಊಹಾಪೋಹ ಕೇಳಿ ಬರುತ್ತಿದೆ.
 

Murder Allegation Case Vijayalakshmi divorces Darshan Thoogudeepa gvd
Author
First Published Jun 13, 2024, 8:12 AM IST

ಬೆಂಗಳೂರು (ಜೂ.13): ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರಿಗೆ ಪತ್ನಿ ವಿಜಯಲಕ್ಷ್ಮೀ ಅವರು ವಿಚ್ಛೇದನ ಕೊಡಲಿದ್ದಾರೆ ಎನ್ನುವ ಊಹಾಪೋಹ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಜೊತೆಗಿದ್ದ ಡಿಪಿಯನ್ನು ಡಿಲೀಟ್‌ ಮಾಡಿದ್ದಾರೆ. ಜೊತೆಗೆ ಅನ್‌ಫಾಲೋ ಕೂಡ ಮಾಡಿದ್ದಾರೆ. ಈಗಾಗಲೇ ಪವಿತ್ರಾ ಗೌಡ ಅವರ ವಿಚಾರದಲ್ಲಿ ಸಾಕಷ್ಟು ಬಾರಿ ಹಿಂಸೆ, ನೋವು, ಸಂಕಷ್ಟಗಳನ್ನು ಮೌನವಾಗಿಯೇ ಎದುರಿಸುತ್ತಾ ಬಂದಿರುವ ವಿಜಯಲಕ್ಷ್ಮೀ ಅವರಿಗೆ ದರ್ಶನ್‌ ಅವರ ಬಂಧನ ಪ್ರಕರಣ ದಿಕ್ಕು ತೋಚದಂತೆ ಮಾಡಿದೆ. 

ವಿಜಯಲಕ್ಷ್ಮೀ ಅವರು ಈಗ ತಮ್ಮ ಪತಿಯಿಂದ ದೂರ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆರೋಪ ಸಾಬೀತು ಆದರೆ ತಮ್ಮ ಪತಿ ದರ್ಶನ್‌ ಅವರಿಗೆ ವಿಜಯಲಕ್ಷ್ಮೀ ಅವರು ಡಿವೋರ್ಸ್‌ ಕೊಡುವುದು ಖಾತ್ರಿ ಎನ್ನಲಾಗುತ್ತಿದೆ. ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ದರ್ಶನ್‌ ಅವರು ಜೈಲಿಗೆ ಹೋದ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಿಂದ ದರ್ಶನ್‌ ಅವರನ್ನು ಅನ್‍ಫಾಲೋ ಮಾಡುವ ಜತೆಗೆ ದರ್ಶನ್‌ ಅವರೊಂದಿಗೆ ಇದ್ದ ಫೋಟೋವನ್ನೂ ಸಹ ಡಿಲೀಟ್‌ ಮಾಡಿದ್ದಾರೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮೀ ಅವರು ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್‍ಫಾಲೋ ಮಾಡಿದ್ದಾರೆ.

ಇದೀಗ ತನ್ನ ಅಭಿಮಾನಿಯದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಕಾನೂನು ತಜ್ಞರು ಹೇಳುವ ಪ್ರಕಾರ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇಲ್ಲೂ ಏನೂ ತಪ್ಪು ಮಾಡದ ವಿಜಯಲಕ್ಷ್ಮೀ ವಿನಾಕಾರಣ ಬಲಿಪಶುವಾದಂತಾಗಿದೆ. ಮೃತಪಟ್ಟ ರೇಣುಕಾಸ್ವಾಮಿಗೆ ತಾನು ಅಭಿಮಾನಿಸುವ ದರ್ಶನ್ ಫ್ಯಾಮಿಲಿ ಚೆನ್ನಾಗಿರಬೇಕು, ತನ್ನ ನೆಚ್ಚಿನ ನಟ ಆತನ ಪತ್ನಿಯ ಜೊತೆಗೆ ಚೆನ್ನಾಗಿ ಬದುಕಬೇಕು ಎಂಬ ತೀವ್ರ ಆಸೆ ಇತ್ತು, ಅದಕ್ಕಾಗಿ ಈತ ತನ್ನ ನೆಚ್ಚಿನ ನಟನ ಬದುಕನ್ನು ಹಾಳು ಮಾಡಿದಳು ಎಂದು ಪವಿತ್ರಾ ಗೌಡನಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ.

ಹೊಡೆದು ಕೊಂದ ದರ್ಶನ್‌ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್‌

ಆದರೆ ಚಿತ್ರದುರ್ಗದ ಯಾವುದೋ ಮೂಲೆಯಲ್ಲಿ ಕೂತು ತಾನು ಮಾಡುವ ಮೆಸೇಜ್ ತನ್ನ ಬದುಕನ್ನೇ ಕೊನೆಗೊಳಿಸುತ್ತದೆ ಎಂಬ ಸಣ್ಣ ಕಲ್ಪನೆಯೂ ಆತನಿಗೆ ಇರಲಿಲ್ಲ ಎನ್ನಲಾಗಿದೆ. ಆದರೆ ಆತನ ಈ ದುಷ್ಕೃತ್ಯವೇ ನೆಪವಾಗಿ ಆತನ ಕೊಲೆಯಾಗಿದೆ. ಇತ್ತ ಕೊಲೆ ಮಾಡಿದವರು ಜೈಲುಪಾಲಾಗಿದ್ದಾರೆ. ತನ್ನ ಲೈಫು ಇಂದಲ್ಲ ನಾಳೆ ಚೆನ್ನಾಗಾಗಬಹುದು ಎಂಬ ಆಸೆಯಲ್ಲಿ ದಿನ ದೂಡುತ್ತಿದ್ದ ವಿಜಯಲಕ್ಷ್ಮೀ ಅಂಥವರಿಗೆ ಮತ್ತೆ ನೋವು ಮುಂದುವರಿಕೆಯಾಗಿದೆ.

Latest Videos
Follow Us:
Download App:
  • android
  • ios