ಪುಸ್ತಕ ಬರೀತಾರೆ, ಪುಸ್ತಕ ಓದ್ತಾರೆ, ಫುಡ್ ಬ್ಲಾಗರ್, ಹಿಮಾಲಯ ಹತ್ತಿಳಿಯೋ ಟ್ರೆಕ್ಕರ್, ನಟನೆ, ಮಾಡೆಲಿಂಗ್... ಹತ್ತಾರು ಟ್ಯಾಲೆಂಟ್‌ಗಳಿರೋ ಬಹುಮುಖ ಪ್ರತಿಭೆ ಕೃಷ್ಣಾ. ಸವರ್ಣ ದೀರ್ಘ ಸಂದಿ, ಪ್ರಾಯಶಃ, ಹಂಪಿ, ಇಂಗ್ಲೀಶ್ ಸಿನಿಮಾ ‘ಕಿಡ್ ಹ್ಯಾಪಿ" ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟ ರವಿ ಭಟ್ ಮಗಳು, ವಿನಯಾ ಪ್ರಸಾದ್ ಸೊಸೆ. ಮುಂದಿರುವುದು ಕೃಷ್ಣಾ ಮಾತು.

ನಿತ್ತಿಲೆ

- ‘ಪ್ರಾಯಶಃ" ನನ್ನ ಮೊದಲನೇ ಸಿನಿಮಾ. ಸವರ್ಣ ದೀರ್ಘ ಸಂಽಗೂ ಮುಂಚಿನದು. ನಾನು ಕ್ಯಾಮರಾ ಫೇಸ್ ಮಾಡೋದನ್ನ ಕಲಿತಿರೋದೇ ಇಲ್ಲಿ. ಹೀರೋ ರಾಹುಲ್, ನಿರ್ದೇಶಕ ರಂಜಿತ್ ನಟನೆಯ ಪಾಠ ಹೇಳಿದ್ರು. ‘ಪ್ರಾಯಶಃ" ಚಿತ್ರದಲ್ಲಿ ನನ್ನದು ಸುಷ್ಮಾ ಅನ್ನೋ ಪಾತ್ರ. ಕಾಲೇಜ್ ಹುಡುಗಿ. ಅಲ್ಲಿ ಲವ್, ರೊಮ್ಯಾಂಟಿಕ್ ಸನ್ನಿವೇಶಗಳು, ಆಮೇಲೆ ಕ್ರೈಮ್ ಬೇಸ್ ಇರುವ ಕತೆ. ಈ ಸಿನಿಮಾದ ಸಹಜತೆ ಮನಸ್ಸಿಗೆ ಹತ್ತಿರವಾಯ್ತು. ಪಂಪ ಅನ್ನೋ ಎಸ್ ಮಹೇಂದರ್ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಇದರಲ್ಲಿ ಮಹೇಂದರ್ ಮಧ್ಯ ವಯಸ್ಕ ಪ್ರಾಧ್ಯಾಪಕ. ಅವರ ಫ್ಲಾ ಶ್‌ಬ್ಯಾಕ್ ಲವರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಒಂದು ಹಾಡು, ಒಂದು ಸೀನ್ ಇರುವ ಚಿಕ್ಕ, ಆದರೆ ಮಹತ್ವದ ಪಾತ್ರ. ಎಸ್ ಮಹೇಂದರ್ ಸಿನಿಮಾ ಅಂದಕೂಡ್ಲೇ ಒಪ್ಪಿಕೊಂಡೆ. ಮೂರು ದಿನದ ಶೆಡ್ಯೂಲ್‌ನಲ್ಲಿ ಖುಷಿಯಾಗಿ ಅಭಿನಯಿಸಿದೆ.

- ನ್ಯೂಯಾರ್ಕ್-ಇಂಡಿಯಾ ಮೂಲದ ಕಥೆಯುಳ್ಳ ‘ಕಿಡ್ ಹ್ಯಾಪಿ" ಅನ್ನೋ ಇಂಗ್ಲೀಶ್ ಸಿನಿಮಾದಲ್ಲಿ ನಟಿಸಿದ್ದೇನೆ. ಇದರಲ್ಲಿ ನನ್ನದು ಮಲ್ಲಿಕಾ ಅನ್ನೋ ಧಮ್ ಇರೋ ಹುಡುಗಿ ಪಾತ್ರ. ನ್ಯೂಯಾರ್ಕ್‌ನ ಕ್ರಿಸ್ಟೋಫರ್ ನಿರ್ದೇಶಕರು, ನರೇನ್ ವೈಸ್ ಮುಖ್ಯಪಾತ್ರದಲ್ಲಿದ್ದಾರೆ. ಕಮಲಹಾಸನ್ ಅವರ ವಿಶ್ವರೂಪಂ ಸಿನಿಮಾದಲ್ಲಿ ಒಸಾಮಾ ಬಿನ್ ಲಾಡೆನ್ ಪಾತ್ರ ಮಾಡಿರುವ ಕಲಾವಿದ ಈ ನರೇನ್. ಅಮೆರಿಕಾದಲ್ಲಿ ಹುಟ್ಟಿದ ಭಾರತೀಯ ತಂದೆ, ಅಮೆರಿಕನ್ ತಾಯಿಯ ಮಗ ನನ್ನ ಮೂಲವನ್ನು ಹುಡುಕಿಕೊಂಡು ಭಾರತಕ್ಕೆ ಬರುವ ಕಥೆ, ಆ ಹುಡುಗನ ಮನಸ್ಸಲ್ಲಿ ಭಾರತದ ಬಗೆಗಿದ್ದ ಪೂರ್ವಾಗ್ರಹಗಳನ್ನೆಲ್ಲ ಕಳಚುವ ಪಾತ್ರ ನನ್ನದು.ಇದಲ್ಲದೇ ಇನ್ನೂ ಒಂದಿಷ್ಟು ಸಿನಿಮಾಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಫೈನಲ್ ಆದಮೇಲೆ ತಿಳಿಸ್ತೀನಿ.

- ಕಳೆದ ಬಾರಿ ಲಾಕ್‌ಡೌನ್‌ನಲ್ಲಿ ಒಂದಿಷ್ಟು ಸಣ್ಣ ಕತೆಗಳನ್ನು ಬರೆದು ನಾನೇ ಪುಸ್ತಕದ ಕವರ್ ಪೇಜ್ ಡಿಸೈನ್ ಮಾಡಿ ಪ್ರಕಟಿಸಿದ್ದೆ. ‘ದಟ್ಸ್ ನಾಟ್ ನಾರ್ಮಲ್ ಆಂಡ್ ಅದರ್ ಸ್ಟೋರೀಸ್" ಎಂಬ ಹೆಸರಿನ ಈ ಸಣ್ಣ ಕತೆಗಳ ಪುಸ್ತಕ ಅಮೆಜಾನ್‌ನಲ್ಲಿ ಲಭ್ಯವಿದೆ. ಅಪ್ಪ ಇದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಈ ಬಾರಿಯ ಲಾಕ್‌ಡೌನ್‌ನಲ್ಲಿ ಒಂದು ಕಾದಂಬರಿ ಬರೆಯುತ್ತಿದ್ದೇನೆ. ಮನುಷ್ಯ ಸಂಬಂಧಗಳ ವೈರುಧ್ಯವನ್ನು ಚಿತ್ರಿಸುವ ಕಥಾನಕವಿದು. ನನ್ನ ಅಪ್ಪ ಹಾಗೂ ಅಮ್ಮ ಇಂಗ್ಲೀಷ್ ಸಾಹಿತ್ಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಹೀಗಾಗಿ ಓದುವ ಹವ್ಯಾಸ ಚಿಕ್ಕ ವಯಸ್ಸಿಂದಲೇ ಇದೆ. ಈಗ ‘ಸೇಫಿಯನ್ಸ್" ಅನ್ನೋ ಬೃಹತ್ ಕೃತಿ ಓದುತ್ತಿರುವೆ. ವಂಡರ್‌ಫುಲ್ ರೀಡಿಂಗ್. ಹ್ಯುಮಾನಿಟಿ ಬಗೆಗಿನ ನನ್ನ ಹಲವು ಸಂದೇಹಗಳಿಗೆ ಈ ಕೃತಿಯಲ್ಲಿ ಉತ್ತರ ಸಿಕ್ಕಿದೆ. ಜೊತೆಗೆ ಎಸ್ ಎಲ್ ಭೈರಪ್ಪ ಅವರ ಆವರಣ ಓದುತ್ತಿದ್ದೇನೆ. ಕಾಸರವಳ್ಳಿ ಅವರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಇತ್ತೀಚೆಗೆ ನೋಡಿದ ಸಿನಿಮಾ. ಅನೇಕ ವೆಬ್ ಸೀರೀಸ್‌ಗಳನ್ನೂ ನೋಡುತ್ತಿರುತ್ತೇನೆ. ನೆಟ್‌ಫ್ಲಿಕ್ಸ್‌ನ ‘ಪೀಪಲ್ಸ್ ವರ್ಸಸ್ ಓಜೆ ಸಿಮ್ಸನ್" ನನ್ನಿಷ್ಟದ ಸೀರೀಸ್. ಉಳಿದಂತೆ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣ ಹೊರಬಂದಿದ್ದೇನೆ. ಅದು ಬರೀ ಟೈಮ್ ವೇಸ್ಟ್ ಅನಿಸಿಬಿಟ್ಟಿದೆ.

ಮುಂಬೈ ಪ್ರತಿಭಾವಂತರಿಗೆ ಒಳ್ಳೆಯ ಜಾಗ: ಹಿತಾ ಚಂದ್ರಶೇಖರ್ 

- ನಾನು ಓದಿದ್ದು ಹೊಟೇಲ್ ಮ್ಯಾನೇಜ್‌ಮೆಂಟ್. ಆದರೆ ಕುಕ್ಕಿಂಗ್ ಕಡೆ ಗಮನವೇ ಇಟ್ಟಿರಲಿಲ್ಲ. ಬರೀ ಬ್ಯುಸಿನೆಸ್ ಬಗ್ಗೆ ಮಾತ್ರ ಆಸಕ್ತಿಯಿಂದ ತಿಳಿದುಕೊಳ್ಳುತ್ತಿದ್ದೆ. ಆದರೆ ಈಗ ಫುಡ್ ಬ್ಲಾಗರ್ ಆಗಿದ್ದೀನಿ. ‘ಮೈ ಫುಡ್ ಸ್ಟೋರಿ" ಬ್ಲಾಗ್‌ನಲ್ಲಿ ಕಂಟೆಂಟ್ ರೈಟರ್ ಆಗಿದ್ದೀನಿ. ನನ್ನ ಎಷ್ಟೋ ರೆಸಿಪಿಗೆ ವಿಶ್ವಾದ್ಯಂತದ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇತ್ತೀಚೆಗೆ ‘ಫಡ್ಜೀ ಚಾಕೊಲೇಟ್ ಪುಡ್ಡಿಂಗ್ ಕೇಕ್" ಅನ್ನೋ ಮನೇಲಿ ಮಾಡಬಹುದಾದ ರೆಸಿಪಿಗೆ ಸಖತ್ತಾದ ರೆಸ್ಪಾನ್ಸ್ ಬಂತು. ಈ ಫೀಲ್ಡ್‌ನಲ್ಲಿ ಇನ್ನೂ ಮುಂದುವರಿಯುವ ಆಸಕ್ತಿ ಇದೆ.

- ನನ್ನ ಅಮ್ಮ ಡೇರ್ ಡೆವಿಲ್ ಲೇಡಿ. ಅವರು ಫ್ರೆಂಡ್ಸ್ ಜೊತೆಗೆ ಹಿಮಾಲಯದ ನಾನಾ ಶಿಖರಗಳನ್ನು ಹತ್ತಿಳಿದು ಬರುತ್ತಾರೆ. ೮ ನೇ ಕ್ಲಾಸ್‌ನಲ್ಲಿದ್ದಾಗ ಅಮ್ಮನ ಜೊತೆಗೆ ಹಿಮಾಲಯ ರೇಂಜ್‌ನಲ್ಲಿ ಕಸೋಲ್‌ನ ಸರ್ಪಾಸ್ ಟ್ರೆಕ್ ಮಾಡಿದ್ದೆ. ಆಮೇಲೆ ಒಂದಿಷ್ಟು ಬೆಟ್ಟ ಹತ್ತಿದ್ದೇನೆ. ಉಳಿದಂತೆ ಕುಮಾರ ಪರ್ವತ, ತಡಿಯಂಡಮೋಳ್, ಸಾವನದುರ್ಗ ಹೀಗೆ ನಮ್ಮ ರಾಜ್ಯದ ಹೆಚ್ಚಿನ ಬೆಟ್ಟವೇರಿದ ಖುಷಿ ಇದೆ.

ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್ 

- ಏನು ತಿಂದರೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ತಿಂದು ದಪ್ಪಗಾಗಿದ್ದು ಅಂತಿಲ್ಲ. ಮನೆ ಊಟ ತಿಂಡಿ, ಹೊರಗಿನ ತಿಂಡಿಗಳು, ಐಸ್‌ಕ್ರೀಮ್, ಚಾಕೊಲೇಟ್ ಎಲ್ಲ ತಿಂತೀನಿ. ಆದರೆ ಎಣ್ಣೆ ಪದಾರ್ಥ, ಕೋಕ್, ಸೋಡ ಇತ್ಯಾದಿಗಳಿಂದ ದೂರ. ಅವು ನನಗೆ ರುಚಿಸೋದೂ ಇಲ್ಲ. ಜೊತೆಗೆ ಬಿಸಿ ಬಿಸಿ ನೀರು ಕುಡೀತಾ ಇರ್‍ತೀನಿ. ಬೆಳಗ್ಗೆ ಬಿಸಿ ನೀರು ಕುಡಿದ ಬಳಿಕವೇ ನನ್ನ ದಿನಚರಿ ಶುರುವಾಗೋದು.

- ವರ್ಕೌಟ್ ನನಗೆ ಬಹಳ ಇಷ್ಟ. ಲಾಕ್‌ಡೌನ್‌ಗೂ ಮೊದಲು ಜಿಮ್‌ಗೆ ಹೋಗ್ತಿದ್ದೆ. ಈಗ ಮನೆಯಲ್ಲೇ ಬೆಳಗ್ಗೆ 1 ಗಂಟೆ ಯೋಗ, ವರ್ಕೌಟ್, ವೈಟ್ ಟ್ರೈನಿಂಗ್ ಮಾಡ್ತೀನಿ, ಸಂಜೆ ೧ ಗಂಟೆ ಬೇಸಿಕ್ ವರ್ಕೌಟ್ ಮಾಡ್ತೀನಿ. ಈ ಲಾಕ್‌ಡೌನ್‌ನಲ್ಲಿ ಹಲವರು ಎಮೋಶನಲ್ ಈಟಿಂಗ್ ಸಮಸ್ಯೆಗೆ ಸಿಲುಕಿ ಹೆಚ್ಚೆಚ್ಚು ತಿನ್ನುತ್ತಾರೆ. ಅದು ತಪ್ಪಲ್ಲ. ಆದರೆ ಅದನ್ನು ಕರಗಿಸೋದು ಬಹಳ ಮುಖ್ಯ. ಚೆನ್ನಾಗಿ ತಿನ್ನಿ, ಆದರೆ ತಿಂದಿದ್ದನ್ನು ಕರಗಿಸಿ.