Yash19 ಅಕ್ಟೋಬರ್‌ನಲ್ಲಿ ಯಶ್‌ ಹೊಸ ಚಿತ್ರ ಘೋಷಣೆ?

ಬಹುನಿರೀಕ್ಷಿತ ಯಶ್‌ ಅವರ 19ನೇ ಸಿನಿಮಾ ಘೋಷಣೆ ಬಗ್ಗೆ ನಿರ್ಧಾರವಾಗಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಅಕ್ಟೋಬರ್‌ನಲ್ಲಿ ಯಶ್‌ ಅವರ ಮುಂದಿನ ಚಿತ್ರದ ಘೋಷಣೆ ಹೊರಬೀಳಲಿದೆ.
 

much awaited Yash 19 announcement to arrive in October san

ಬೆಂಗಳೂರು (ಸೆ.25): ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಕೆಜಿಎಫ್‌ ಪಾರ್ಟ್‌ 2 ಬಂದು ಈಗಾಗಲೇ ಒಂದೂವರೆ ವರ್ಷವಾಗಿದೆ, ಹಾಗಿದ್ದರೂ ಯಶ್‌ ಮುಂದಿನ ಚಿತ್ರ ಯಾವುದು ಎನ್ನುವುದರ ಬಗ್ಗೆ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಈಗ ಬಂದಿರುವ ಮಾಹಿತಿಗಳ ಪ್ರಕಾರ ಯಶ್‌ ತಮ್ಮ 19ನೇ ಚಿತ್ರವನ್ನು ಮುಂದಿನ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖ್ಯಾತ ಸಿನಿಮಾ ವಿಮರ್ಶಕ ಮನೋಬಾಲ ವಿಜಯಬಾಲನ್ ಟ್ವೀಟ್‌ ಮಾಡಿದ್ದಾರೆ. ಸುಂಟರಗಾಳಿಯ ಗ್ರಾಫಿಕ್‌ ಚಿತ್ರದೊಂದಿಗೆ ರಾಕಿಂಗ್‌ ಸ್ಟಾರ್‌ ಯಶ್‌, ಬಿಗ್‌ ಅನೌನ್ಸ್‌ಮೆಂಟ್‌ ಇನ್‌ ಅಕ್ಟೋಬರ್‌ ಎನ್ನುವ ಪೋಸ್ಟರ್‌ಅನ್ನು ಅವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಯಶ್‌ 19 ಸಿನಿಮಾದ ಅನೌನ್ಸ್‌ಮೆಂಟ್‌ ಸುದ್ದಿ ಅಕ್ಟೋಬರ್‌ನಲ್ಲಿ ಬಿತ್ತರವಾಗುವ ಸಾಧ್ಯತೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.

ಮೂಲಗಳ ವರದಿಯ ಪ್ರಕಾರ, ರಾಕಿಂಗ್‌ ಸ್ಟಾರ್ ಯಶ್‌ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಇದೇ ಯಶ್‌ 19 ಸಿನಿಮಾ ಅಗಿ ಘೋಷಣೆಯಾಗುವ ಸಾಧ್ಯತೆ ಇದೆ. ದೊಡ್ಡ ಚಿತ್ರವೊಂದರಲ್ಲಿ ಇವರಿಬ್ಬರೂ ಜೊತೆಯಾಗಲಿದ್ದಾರೆ ಎಂದು ಸಿನಿಮಾ ರಂಗದ ಮೂಲಗಳು ತಿಳಿಸಿವೆ. ಕೆಜಿಎಫ್‌2 ಬಳಿಕ ಯಶ್‌ ಯಾವ ರೀತಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಯೋಚನೆಗಳಿಗೆ ಉತ್ತರ ಎನ್ನುವಂತೆ ಈ ಸಿನಿಮಾ ಇರಲಿದೆ ಎನ್ಉವ ಮಾಹಿತಿಗಳಿವೆ. ಯೋಜನೆಗೆ ಹತ್ತಿರವಿರುವ ಮೂಲಗಳ ಪ್ರಕಾರ, ಯಶ್ ಅಂತಿಮವಾಗಿ ಗೀತು ಮೋಹನ್‌ದಾಸ್ ಅವರೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದಾರೆ ಮತ್ತು ಚಿತ್ರವು ಈ ವರ್ಷದ ಕೊನೆಯಲ್ಲಿ, ಡಿಸೆಂಬರ್‌ನಲ್ಲಿ ಶೂಟಿಂಗ್‌ಗೆ ಹೋಗಲಿದೆ. 



ಹಿಂದಿ ಚಲನಚಿತ್ರ ನಿರ್ಮಾಪಕ ನಿತೇಶ್ ತಿವಾರಿ ಅವರ ರಾಮಾಯಣವು ಯಶ್‌ಗೆ ಸಂಬಂಧಿಸಿದ ಮತ್ತೊಂದು ದೊಡ್ಡ ಯೋಜನೆಯಾಗಿದೆ. ನಟ ಪ್ರಸ್ತುತ ಮಹಾಕಾವ್ಯದಲ್ಲಿ ರಾವಣ ಪಾತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ಚಿತ್ರದಲ್ಲಿ ಯಶ್‌ ರಾವಣ, ರಣಬೀರ್‌ ಕಪೂರ್‌ ರಾಮ ಹಾಗೂ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಬಹುದು ಎನ್ನಲಾಗಿದೆ.

ಭಟ್ಟರ 'ಗರಡಿ' ಟೈಟಲ್ ಸಾಂಗ್'ನಲ್ಲಿ ಹೀರೋ ಸೂರ್ಯ ಫುಲ್ ಮಿಂಚಿಂಗ್!

ಇನ್ನು ಯಶ್‌ 19 ಚಿತ್ರದ ಬಗ್ಗೆ ಹೇಳುವುದಾದರೆ, 1960ರ ದಶಕದ ಗ್ಯಾಂಗ್‌ಸ್ಟರ್‌ ಶೈಲಿನ ಸಿನಿಮಾ ಇದಾಗಿರಲಿದೆ. ಈ ಚಿತ್ರದ ಹೆಚ್ಚಿನ ಶೂಟಿಂಗ್‌ ಗೋವಾದಲ್ಲಿಯೇ ನಡೆಯಲಿದೆ. ರಷ್ಯನ್‌ ಮಾಫಿನಾ ಹಾಗೂ ಇತರ ಡ್ರಗ್‌/ಕ್ರೈಮ್‌ ಸಿಂಡಿಕೇಟ್‌ಗಳ ಬಗ್ಗೆ ಚಿತ್ರಣವನ್ನು ಇದು ಹೊಂದಿರಲಿಲ್ಲ. ಗೀತು ಮೋಹನ್‌ದಾಸ್‌ ಇದರ ಮುಂದಾಳತ್ವ ವಹಿಸಲಿದ್ದಾರೆ.

ಅಭಿಮಾನಿಗಳಿಗೋಸ್ಕರ ಕುಣಿದು ಕುಪ್ಪಳಿಸಿದ ರಾಜ್‌ಕುಮಾರನ ಕುವರ !

Latest Videos
Follow Us:
Download App:
  • android
  • ios