Asianet Suvarna News Asianet Suvarna News

ಇತ್ತೀಚಿಗೆ ಸೆಲ್ಫಿನೇ ಕ್ಲಿಕ್ ಮಾಡಿಲ್ಲ; ಕಾಲೇಜ್‌ ದಿನಗಳನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ

ಬಿಗ್ ಸ್ಮೈಲ್ ಮಾಡುತ್ತಿರುವ ಸೆಲ್ಫಿ ಹಂಚಿಕೊಂಡ ರಶ್ಮಿಕಾ ಮಂದಣ್ಣ. ಕಾಲೇಜ್‌ಗಳನ್ನು ಮಿಸ್‌ ಮಾಡಿಕೊಳ್ಳುತ್ತಿರುವುದು ನಿಜವೇ ಎಂದ ನೆಟ್ಟಿಗರು..... 

Mission Majnu Rashmika Mandanna share selfie recalls college days vcs
Author
First Published Jan 20, 2023, 12:09 PM IST

ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆಗಿರುವ ನಟಿಯಲ್ಲಿ ಪಟ್ಟಿಯಲ್ಲಿ ಮೊದಲ ಅಗ್ರಸ್ಥಾನ ರಶ್ಮಿಕಾ ಮಂದಣ್ಣಗೆ ಸೇರುತ್ತದೆ. ಕೈ ತುಂಬಾ ಸಿನಿಮಾ ಮತ್ತು ಜಾಹೀರಾತು ಪ್ರಾಜೆಕ್ಟ್‌ಗಳಿದ್ದರೂ ರಶ್ಮಿಕಾ ಕೆಲಸಕ್ಕಿಂತ ಹೆಚ್ಚಾಗಿ ಸುದ್ದಿಯಾಗಿರುವುದು ಕಾಂಟ್ರವರ್ಸಿಗಳಿಂದ. ಪರ ಭಾಷೆ ಮಾತನಾಡಿದ್ದರೂ ಸಮಸ್ಯೆ, ಹೊರ ರಾಜ್ಯದಲ್ಲಿ ಮನೆ ಖರೀದಿಸಿದ್ದರೂ ಸಮಸ್ಯೆ, ಶ್ವಾನ ಮುದ್ದಾಡಿದ್ದರೂ ಸಮಸ್ಯೆ....ಒಟ್ಟಾರೆ ರಶ್ಮಿಕಾ ಏನೇ ಮಾಡಿದ್ದರೂ ಅದನ್ನು ಸಮಸ್ಯೆ ರೀತಿ ನೋಡುವವರೇ ಹೆಚ್ಚು. ಯಾರು ಎಷ್ಟೇ ಟ್ರೋಲ್ ಮಾಡಲಿ ನಾನು ಸದಾ ಸುದ್ದಿಯಲ್ಲಿರುವ ಎನ್ನುವ ರಶ್ಮಿಕಾ ಮಂದಣ್ಣ ಸೆಲ್ಫಿ ಹಂಚಿಕೊಂಡಿದ್ದಾರೆ.

'ಈ ನಡುವೆ ನಾನು ಸೆಲ್ಫಿಗಳನ್ನು ಕ್ಲಿಕ್ ಮಾಡಿಕೊಳ್ಳುತ್ತಿಲ್ಲ. ಆದರೆ ಈ ರೀತಿ ಸೆಲ್ಫಿಗಳನ್ನು ಕಾಲೇಜ್‌ ದಿನಗಳಲ್ಲಿ ಕ್ಲಿಕ್ ಮಾಡಿಕೊಳ್ಳುತ್ತಿದ್ದ ನೆನಪುಗಳು ಹೆಚ್ಚಿದೆ' ಎಂದು ಬರೆದುಕೊಂಡಿದ್ದಾರೆ. ತುಂಬಾ ಕ್ಲೋಸಪ್‌ನಲ್ಲಿ ಮೂರು ಸೆಲ್ಫಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೇಕಪ್ ಇಲ್ಲದೆ ಎಷ್ಟು ಕ್ಯೂಟ್ ಆಗಿ ಕಾಣಿಸುತ್ತಾರೆಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಇದು ಕೋಲ್ಗೇಟ್ ಜಾಹೀರಾತು, ನಿಮ್ಮ ಕ್ಲಾಸಲ್ಲಿ ಓದುತ್ತಿದ್ದವರಿಗೆ ಫುಲ್ ಅಟೆಂಡೆನ್ಸ್ ಇತ್ತಾ? ಓವರ್ ಆಕ್ಟಿಂಗ್ ಮಾಡುವ ಹುಡುಗಿ'ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ವೈನ್‌ ಆರೋಗ್ಯಕ್ಕೆ ಒಳ್ಳೆಯದು, 1 ಲೀಟರ್‌ ನೀರು ಕುಡಿಯಬೇಕು; ರಶ್ಮಿಕಾ ಮಂದಣ್ಣ ಡಯಟ್‌ ಸೀಕ್ರೆಟ್ ರಿವೀಲ್

ಮೂಲತಃ ಕೂರ್ಗ್‌ನವರಾಗಿರುವ ರಶ್ಮಿಕಾ ಮಂದಣ್ಣ ಜರ್ನಲಿಸಂನಲ್ಲಿ ಪದವಿ ಪಡೆಯಲು ಬೆಂಗಳೂರರಿಗೆ ಬಂದರು. ' ನಾನು ಬೆಂಗಳೂರಿನಲ್ಲಿ ಇದಷ್ಟು ದಿನ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿರುವೆ. ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಪ್ರತಿಯೊಂದನ್ನು ಎಂಜಾಯ್ ಮಾಡುವಂತೆ ಮಾಡುತ್ತದೆ. ಓದಲು ಇಲ್ಲಿಗೆ ಬರುವವರಿಗೆ ತುಂಬಾ ಆಯ್ಕೆಗಳು ಇರುತ್ತದೆ. ಕಾಲೇಜುಗಳು ಅವರು ನೀಡುವ ಶಿಕ್ಷಣಕ್ಕೆ ಮಾತ್ರ ಹೆಸರಾಗಿಲ್ಲ, ಆದರೆ ವ್ಯಕ್ತಿಗಳಾಗಿ ನಿಮ್ಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕಾಲೇಜ್‌ ದಿನಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅಭಿಮಾನಿಗಳು ಈಗಲೂ ಅ  ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ' ಎಂದು ರಶ್ಮಿಕಾ ಹಲವು ವರ್ಷಗಳ ಹಿಂದೆ ಕಾಲೇಜ್‌ ದಿನಗಳ ಬಗ್ಗೆ ಮಾತನಾಡಿದ್ದರು. 

ರಶ್ಮಿಕಾ ಮಂದಣ್ಣ ಒಂದು ದಿನವೂ ಕ್ಲಾಸ್ ಬಂಕ್ ಮಾಡಿಲ್ಲ ಎನ್ನುತ್ತಾರೆ. 'ಲಂಚ್ ಬ್ರೇಕ್ ಅಥವಾ ಕಾಲೇಜ್‌ ಮುಗಿದ ನಂತರ ಸ್ನೇಹಿತರ ಜೊತೆ ಹೊರ ಹೋಗುತ್ತಿದ್ದೆ. ನನ್ನ ಕಾಲೇಜ್‌ ಹಿಂದೆ ಸಿಗುತ್ತದೆ ಕೋಲ್ಡ್‌ ಹಾಲು ಹೆಚ್ಚಿಗೆ ಕುಡಿಯುತ್ತಿದ್ದೆ. ಅಲ್ಲಿ ಸ್ನೇಹಿತರ ಜೊತೆ ಕುಳಿತುಕೊಂಡು ಎಂಜಾಯ್ ಮಾಡುತ್ತಿದ್ದೆ' ಎಂದಿದ್ದರು.

ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್

ರಕ್ಷಿತ್ - ರಿಷಬ್ ನೆನಪಿಸಿಕೊಂಡ ರಶ್ಮಿಕಾ:

ರಕ್ಷಿತ್ ಮತ್ತು ರಿಷಬ್ ಚಿತ್ರರಂಗದ ದಾರಿ ತೋರಿಸಿದವರು. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇವತ್ತಿಗೂ ನಾನು ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳ ಜೊತೆ ಕಲೆಸ ಮಾಡಿದ್ದೀನಿ' ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತು ಕನ್ನಡ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ರಿಷಬ್ ಮತ್ತು ರಕ್ಷಿತ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ದಿಢೀರ್ ಬದಲಾವಣೆ ಯಾಕೆ ಎಂದು ಕೇಳುತ್ತಿದ್ದಾರೆ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಬೆಲೆ ಗೊತ್ತಾಯಿತಾ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ರಿಷಬ್ ಮತ್ತು ರಕ್ಷಿತ್ ಬಗ್ಗೆ ಮಾತನಾಡಿದ್ದು ಎಂದು ಹೇಳುತ್ತಿದ್ದಾರೆ. 

 

Follow Us:
Download App:
  • android
  • ios