ನಟಿ ಶುಭಾ ಪೂಂಜಾ ಚಿತ್ರೀಕರಣದ ವೇಳೆ ಅಪರಿಚಿತರಿಂದ ಕಿಡಿಗೇಡಿ ಕೃತ್ಯ, ಶೂಟಿಂಗ್ ನಿಲ್ಲಿಸಿದ ತಂಡ
ಚಿತ್ರನಟಿ ಶುಭಾ ಪೂಂಜಾರೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತನೆ ನಡೆಸಿರುವ ಘಟನೆ ನಡೆದಿದೆ. ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದ್ದು ಶೂಟಿಂಗ್ ಸೆಟ್ ಧ್ವಂಸಗೊಳಿಸಿದ್ದಾರೆ.

ಚಿಕ್ಕಮಗಳೂರು(ಅ.28): ಚಿತ್ರನಟಿ ಶುಭಾ ಪೂಂಜಾರೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತನೆ ನಡೆಸಿರುವ ಘಟನೆ ನಡೆದಿದೆ. ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿದ್ದು ಶೂಟಿಂಗ್ ಸೆಟ್ ಧ್ವಂಸಗೊಳಿಸಿದ್ದಾರೆ. ಕುದುರೆಮುಖದ ಮೈದಾಡಿಗುಡ್ಡ ಪ್ರದೇಶದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುತ್ತಿದ್ದರು.
ನಟಿ ಶುಭಾ ಪೂಂಜಾ ಅವರು ಡ್ಯಾನ್ಸ್ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದಿದೆ. ಯುವಕರ ಅಸಭ್ಯ ವರ್ತನೆಯಿಂದ ಚಿತ್ರತಂಡ ತಕ್ಷಣ ಹಾಡಿನ ಚಿತ್ರೀಕರಣ ನಿಲ್ಲಿಸಿದೆ.
ಇದು ಕನ್ನಡದ ಹೆಮ್ಮೆ, 54ನೇ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕಾಂತಾರ ಆಯ್ಕೆ
ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದ್ದು, ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ಈ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖದ ಮೈದಾಡಿಗುಡ್ಡ ಎಂಬಲ್ಲಿ ಘಟನೆ ನಡೆದಿದ್ದು ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಘಟನೆ ಬಗ್ಗೆ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ಕೋಟಿ ಸಂಭಾವನೆ ಪಡೆಯುತ್ತಿದ್ದ ಭಾರತದ ಮೊದಲ ಗಾಯಕಿ, ಮೈಸೂರು ಆಸ್ಥಾನ ಕಲಾವಿದೆಯಾಗಿ ಪ್ರಾಣಬಿಟ್ಟಳು!
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಿರ್ದೇಶಕ ಸುಧೀರ್ ಅತ್ತಾವರ ಹೇಳಿಕೆ ನೀಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದ ಘಟನೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ರು ಎಂದಿದ್ದಾರೆ.