Asianet Suvarna News Asianet Suvarna News

ಇದು ಕನ್ನಡದ ಹೆಮ್ಮೆ, 54ನೇ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕಾಂತಾರ ಆಯ್ಕೆ

2022ರಲ್ಲಿ ಬಿಡುಗಡೆಯಾಗಿ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.  ಗೋವಾದಲ್ಲಿ ನ.28ರಿಂದ  ಚಿತ್ರೋತ್ಸವದಲ್ಲಿ ಪ್ರದರ್ಶನ ನಡೆಯಲಿದೆ.

Kantara Rakes In Official Selection Of The 54th International Film Festival Of India gow
Author
First Published Oct 28, 2023, 10:04 AM IST

ನವದೆಹಲಿ (ಅ.28): 2022ರಲ್ಲಿ ಬಿಡುಗಡೆಯಾಗಿ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಈ ಮೂಲಕ ಜಾಗತಿಕ ವೇದಿಕೆಯನ್ನು ಕನ್ನಡದ ಸಿನಿಮಾವೊಂದು ಮತ್ತೊಮ್ಮೆ ಅಲಂಕರಿಸಲಿದೆ. ನ.20ರಿಂದ 28ರವರೆಗೆ ಗೋವಾದಲ್ಲಿ ನಡೆಯುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಾಡಾದ್ದು, ಅಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಚರಿತ್ರೆಗೆ ರೆಡಿ ನೆಲ್ಸನ್! ಈ ಸಿನಿಮಾ ಕಥೆಯ ಹೀರೋ ಯಾರು ?

ಇದು ಕರ್ನಾಟಕದ ಮಣ್ಣಿನ ಸೊಗಡನ್ನು ಹೊಂದಿರುವ ಸಿನಿಮಾವಾಗಿದ್ದು, ತನ್ನ ವಿಭಿನ್ನ ಕಥಾಹಂದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಈ ಮೂಲಕ ಬ್ಲಾಕ್‌ಬಸ್ಟರ್‌ ಆಫ್‌ ಇಯರ್‌ ಎಂಬ ಖ್ಯಾತಿಯನ್ನು ಗಳಿಸಿಕೊಂಡಿತ್ತು. 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಜಾನಪದ ಸೊಗಡು, ಭೂತಾರಾಧನೆ, ಕಂಬಳ ಮತ್ತು ದೈವ ನಂಬಿಕೆ ಪ್ರಧಾನವಾಗಿದೆ. ಕರಾವಳಿಯ ಕೆರಾಡಿಯಲ್ಲಿ ಸೆಟ್ ಹಾಕಿ ಈ ಚಲನಚಿತ್ರ ಚಿತ್ರೀಕರಿಸಲಾಗಿದೆ. ಪ್ರಧಾನ ಛಾಯಾಗ್ರಹಣ ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು. ಕ್ಯಾಮೆರಾವನ್ನು ಅರವಿಂದ್ ಎಸ್. ಕಶ್ಯಪ್ ನಿರ್ವಹಿಸಿದ್ದಾರೆ, ಬಿ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕಾಂತಾರ ಚಿತ್ರವು 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಯಿತು. ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದರೆ, ಅಚ್ಚುತ್‌ , ಕಿಶೋರ್‌ , ಮಾನಸಿ ಸುಧೀರ್ ,  ಸ್ವರಾಜ್ ಶೆಟ್ಟಿ ಸೇರಿದಂತೆ ಹಲವು ತಾರಾಗಣವಿತ್ತು. ಕರ್ನಾಟಕ ಸರ್ಕಾರವು, ಈ ಚಲನಚಿತ್ರದ ಕಾರಣದಿಂದಾಗಿ, 60 ವರ್ಷ ಮೇಲ್ಪಟ್ಟ ಭೂತ ಕೋಲ ಕಲಾವಿದರಿಗೆ ಮಾಸಿಕ ಭತ್ಯೆಯನ್ನು ಕೂಡ ಘೋಷಿಸಿತ್ತು.

Bedroom ಫೋಟೋ ಹಂಚಿಕೊಂಡ ಲವ್ ಮಾಕ್ಟೇಲ್ 2 ನಟಿ: ಅರೆರೆ ರಚೆಲ್‌ಗೆ ಏನಾಯ್ತು ಅನ್ನೋದಾ ನೆಟ್ಟಿಗರು!

'ಕಾಂತಾರ' ಚಿತ್ರವು ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ಈಗ  54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ  ಆಯ್ಕೆಯಾಗುವ ಮೂಲಕ ತನ್ನ ಹೆಸರಿಗೆ ಮತ್ತೊಂದು ಪ್ರತಿಷ್ಠೆಯನ್ನು ತಂದಿದೆ. ಕಾಂತಾರ ಸಿನಿಮಾಗೆ ಹೂಡಿಕೆ ಮಾಡಿದ್ದು ಬರೀ 16 ಕೋಟಿ. 14 ಕೋಟಿಯಲ್ಲಿ ಮಾಡಲು ಉದ್ದೇಶಿಸಿದ್ದ ಸಿನಿಮಾಗೆ ಸ್ವಲ್ಪ ಹೆಚ್ಚು ಖರ್ಚಾಗಿತ್ತು. ಆದರೆ ಬ್ಲಾಕ್‌ ಬ್ಲಸ್ಟರ್ ಹಿಟ್‌ ಆಗಿ ಚಿತ್ರಮಂದಿರದಲ್ಲಿ ಕೊಳ್ಳೆ ಹೊಡೆಯಿತು. ಈಗ ಕಾಂತಾರ 2 ಚಿತ್ರೀಕರಣ ನಡೆಯುತ್ತಿದೆ.

Follow Us:
Download App:
  • android
  • ios