Asianet Suvarna News Asianet Suvarna News

ಪತ್ನಿಗೆ ಮುಜುಗರ ತರಿಸಿದ್ರಾ ಡಾರ್ಲಿಂಗ್ ಕೃಷ್ಣ! ಮಿಲನಾ ಮಾಡಿರೋ ಕಮೆಂಟ್‌ ನೋಡಿ..

ಸ್ಯಾಂಡಲ್‌ವುಡ್‌ನ ಲವ್ಲೀ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಇದೀಗ ಈ ಜೋಡಿಯ ನಡುವೆ ನಡೆದಿರೋ ಸಂಭಾಷಣೆಯೊಂದು ವೈರಲ್‌ ಆಗಿದೆ. ಹಾಗಿದ್ರೆ ಹೆಂಡತಿಗೆ ಮುಜುಗರ ತರಿಸೋ ಕೆಲಸ ಮಾಡಿದ್ರಾ ಡಾರ್ಲಿಂಗ್ ಕೃಷ್ಣ?

Milana Nagaraj Darling krishna new story
Author
First Published Dec 22, 2022, 3:47 PM IST

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮದುವೆ ಆಗಿ ವರ್ಷಗಳೇ ಕಳೆದಿದೆ. ಒಂದಿಷ್ಟು ವರ್ಷಗಳಿಂದ ಲವ್‌ ಮಾಡ್ತಿದ್ದ ಈ ಜೋಡಿ ಮದುವೆಯಾಗಿ ಹೊಸ ಮನೆ ಕಟ್ಟಿ ನಾಯಿಮರಿ ಸಾಕುತ್ತಾ ಆರಾಮಾಗಿದ್ದಾರೆ. ಜೊತೆಗೆ ಒಂದಿಷ್ಟು ಸಿನಿಮಾದಲ್ಲೂ ಇವರಿಬ್ಬರು ನಟಿಸುತ್ತಿದ್ದಾರೆ. ಈ ಕ್ಯೂಟ್‌ ಜೋಡಿ ಕಂಡರೆ ಕನ್ನಡಿಗರಿಗೂ ಭಲೇ ಇಷ್ಟ. ಈ ಜೋಡಿಯ ಲವ್‌ ಮಾಕ್‌ಟೇಲ್ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹವಾ ಸೃಷ್ಟಿಸಿತು. ಲವ್‌ ಮಾಕ್‌ಟೇಲ್‌ ಮೂರನೇ ಭಾಗವೂ ಬರುತ್ತಿದೆ ಅಂತಿರುವಾಗಲೇ ಮತ್ತೊಂದು ಸುದ್ದಿ ಬಂದಿದೆ. ಅಂದರೆ ಈ ಜೋಡಿ ಇದೀಗ ಯಡವಟ್ಟು ಮಾಡಿಕೊಂಡು ಸಿಕ್ಕಿಬಿದ್ದಿದೆ. ಈ ಸಿಚ್ಯುವೇಶನ್ ನಟಿ ಮಿಲನಾಗೆ ಮುಜುಗರ ತರಿಸಿದೆ. ಗಂಡ ಕೃಷ್ಣನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಖತ್ ಫನ್ನಿಯಾಗಿರೋ ಈ ಸಂಗತಿಯನ್ನು ನೆಟಿಜನ್ಸ್ ಮಜವಾಗಿ ತಗೊಳ್ತಿದ್ದಾರೆ. ಈ ದಂಪತಿ ನಡುವಿನ ಹುಸಿಮುನಿಸಿಗೆ ನಸು ನಗುತ್ತಿದ್ದಾರೆ.

ಅಷ್ಟಕ್ಕೂ ಇಷ್ಟೆಲ್ಲ ಸೀನ್ ಕ್ರಿಯೇಟ್ ಆಗೋದಕ್ಕೆ ಕಾರಣ ಒಂದು ವೀಡಿಯೋ. ಇದರಲ್ಲಿ ಮಿಲನಾ ನಾಗರಾಜ್ ಸುಬ್ಬಲಕ್ಷ್ಮಿ ಹುಕ್ ಸ್ಟೆಪ್ ಮಾಡೋಕೆ ತುಂಬಾ ಪ್ರಯತ್ನಪಟ್ಟಿದ್ದಾರೆ. ನಿಮಗೆ ಸುಬ್ಬಲಕ್ಷ್ಮಿ ಹುಟ್​ಸ್ಟೆಕ್ ಮಾಡಬಹುದಾ? ಎಂದು ಡಾರ್ಲಿಂಗ್ ಕೃಷ್ಣ ಅವರು ಇನ್​​ಸ್ಟಾಗ್ರಾಮ್​ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಂಡ್ತಿ ಡ್ಯಾನ್ಸ್ ಕಲಿಯೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಿಸ್ಟರ್ ಬ್ಯಾಚುರಲ್ ಸಿನಿಮಾದಲ್ಲಿ ಆಲ್ ಓಕೆ, ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್, ಮೊದಲಾದವರು ನಟಿಸಿದ್ದಾರೆ. ಅದರಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಈ ಸೂಪರ್ ಲಿರಿಕಲ್ ಸಾಂಗ್​ನಲ್ಲಿ ಒಂದು ಸ್ಟೈಲಿಷ್ ಹುಕ್​ಸ್ಟೆಪ್ ಇದ್ದು ಇದು ರೀಲ್ಸ್ ಮಾಡೋರಿಗೆ ಬಹಳ ಇಷ್ಟವಾಗಿದೆ.

'ಪ್ರಪಂಚದಾದ್ಯಂತ ಧ್ವನಿ ಕಂಡುಕೊಳ್ಳುತ್ತದೆ';Oscar ರೇಸ್‌ಗೆ ಕಾಂತಾರ ಸಲ್ಲಿಸಿದ ರಿಷಬ್ ಶೆಟ್ಟಿ

ಈ ವೀಡಿಯೋದಲ್ಲಿ ತನ್ನ ಹೆಂಡತಿ ಮಿಲನಾ ನಾಗರಾಜ್‌ಗೆ ಈ ಹುಕ್​ಸ್ಟೆಪ್ ಹೇಳಿಕೊಟ್ಟಿದ್ದಾರೆ ಡಾರ್ಲಿಂಗ್ ಕೃಷ್ಣ. ಸ್ವಲ್ಪ ಟಫ್ ಎನಿಸುವ ಈ ಸ್ಟೆಪ್ ಮಿಲನಾ ಅವರಿಗೆ ತುಂಬಾ ಕಷ್ಟವಾಗಿದೆ. ನಟಿ ಸ್ಟೆಪ್ ಟ್ರೈ ಮಾಡಿ ಮಾಡಲಾಗದೆ ಯಡವೋದು, ಬೀಳೋದು, ನಡು ನಡುವೆ ಕೃಷ್ಣ ಪತ್ನಿಯನ್ನು ಮುದ್ದಾಡೋದು, ಇಬ್ಬರೂ ಜೋರಾಗಿ ನಗುವುದನ್ನು ಕಾಣಬಹುದು. ಇದೀಗ ಇವರ ಕ್ಯೂಟ್ (Cute) ವಿಡಿಯೋ ಈಗ ವೈರಲ್ ಆಗಿದೆ. ಕೃಷ್ಣ ಪೋಸ್ಟ್(Post) ಮಾಡಿರೋ ಈ ವೀಡಿಯೋ ಮಿಲನಾಗೆ ಹುಸಿಮುನಿಸು ತರಿಸಿದೆ. ಅವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಪತಿ ಪೋಸ್ಟ್ ಮಾಡಿದ ವಿಡಿಯೋಗೆ ಅಯ್ಯೋ ನನ್ನನ್ನು ಎಂಬರಾಸ್ ಮಾಡೋಕೆ ಇಂಥಾ ವಿಡಿಯೋ ಎಲ್ಲ ಶೂಟ್ ಮಾಡ್ತೀರಾ ಎಂದು ಕೇಳಿ ಡಾರ್ಲಿಂಗ್ ಕೃಷ್ಣ ಅವರನ್ನು ಟ್ಯಾಗ್ ಮಾಡಿದ್ದಾರೆ.

ಪತಿಪತ್ನಿ ನಡುವಿನ ಈ ಸರಸ, ಹುಸಿಮುನಿಸನ್ನ ಜನರೂ ಎನ್‌ಜಾಯ್ ಮಾಡ್ತಿದ್ದಾರೆ. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈ ಜೋಡಿ ತಮ್ಮ ಅಭಿಮಾನಿಗಳ ಜೊತೆ ಸಿನಿಮಾದ ಹಾಗೂ ಪರ್ಸನಲ್ ಲೈಫ್ ಅಪ್ಡೇಟ್​ಗಳನ್ನು(Updates) ಅಭಿಮಾನಿಗಳ ಜೊತೆ ಶೇರ್ ಮಾಡುತ್ತಾರೆ. ಇಬ್ಬರಿಗೂ ಸೋಷಿಯಲ್ ಮೀಡಿಯಾ(Social media)ದಲ್ಲಿ ಸಖತ್ ಫ್ಯಾನ್ಸ್ ಇದ್ದಾರೆ. ಕೃಷ್ಣ ಪೋಸ್ಟ್ ಮಾಡಿದ ವಿಡಿಯೋಗೆ ಸಾವಿರಾರು ಲೈಕ್ಸ್ ಬಂದಿದೆ. ಬಹಳ ಜನರು ವಿಡಿಯೋ ಎಂಜಾಯ್ ಮಾಡಿ ಕಾಮೆಂಟ್ ಮಾಡಿದ್ದಾರೆ.ಟ್ರಾವೆಲ್ ಮಾಡೋದ್ರಲ್ಲೂ ಈ ಜೋಡಿ ಮುಂದು. ಸಿನಿಮಾ ಕೆಲಸಗಳನ್ನೂ ಜೊತೆಯಾಗಿ ಮಾಡ್ತಾರೆ. ಈ ಕ್ಯೂಟ್ ಜೋಡಿಯ ಹೊಸ ಸಿನಿಮಾಗಳು ಬರಲಿ ಅಂತ ಜನ ಎದುರು ನೋಡುತ್ತಿದ್ದಾರೆ. 

ಶಾರುಖ್‌ ಖಾನ್‌ ಪುತ್ರಿ ಆವತಾರ ಸಖತ್‌ ಟ್ರೋಲ್‌; ಹೇಗೆ ಕಾಮೆಂಟ್‌ ಮಾಡಿದ್ದಾರೆ ನೋಡಿ ನೆಟಿಜನ್ಸ್!

Follow Us:
Download App:
  • android
  • ios