‘ನೀ ಸಿಗೋವರೆಗೂ’ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಡ್ಯುಯೆಟ್‌ ಹಾಡುವವರು ತೆಲುಗು ನಟಿ ಮೆಹ್ರಿನ್‌ ಕೌರ್‌ ಪೀರ್‌ಝಾದ. ಪಂಚಾಬಿ ಮೂಲಕದ ಈಕೆಗೆ ಇದು 20ನೇ ಸಿನಿಮಾ. ‘ಶಿವರಾಜ್‌ ಕುಮಾರ್‌ ಅವರನ್ನ ಇನ್ಮೇಲೆ ಶಿವಣ್ಣ ಅನ್ನಲ್ಲ, ಡಾರ್ಲಿಂಗ್‌ ಸರ್‌ ಅಂತ ಕರೀತೇನೆ’ ಅನ್ನೋ ತುಂಟ ಹುಡುಗಿಯ ನಾಲ್ಕು ಮಾತುಗಳು ಇಲ್ಲಿವೆ. 

ಪ್ರಿಯಾ ಕೆರ್ವಾಶೆ

- ‘ನೀ ಸಿಗೋವರೆಗೂ’ ಚಿತ್ರದಲ್ಲಿ ಆರೋಹಿ ಅನ್ನೋದು ಪಾತ್ರದ ಹೆಸರು. ಬಹಳ ಸ್ಟ್ರಾಂಗ್‌ ಸಬೆಕ್ಟ್, ಪಾತ್ರವೂ ಚಾಲೆಂಜಿಂಗ್‌.

- ಶಿವರಾಜ್‌ ಕುಮಾರ್‌ ಅವರ ಜೊತೆ ನಟಿಸೋದಕ್ಕೆ ನರ್ವಸ್‌ ಇಲ್ಲ. ಎಕ್ಸೈಟ್‌ಮೆಂಟ್‌ ಇದೆ. ಅವರು ದೊಡ್ಡ ಸ್ಟಾರ್‌ ಅಂತೆಲ್ಲ ಗೊತ್ತಿತ್ತು. ಆದರೆ ಇಷ್ಟುಸಿಂಪಲ್ಲಾಗಿ ಇರ್ತಾರೆ ಅಂತ ಗೊತ್ತಿರಲಿಲ್ಲ. ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನಗೆಲ್ಲುವ ವಿಶ್ವಾಸ ಇದೆ.

- ಈ ಸಿನಿಮಾ ಮುಗಿಯೋವರೆಗೂ ಶಿವರಾಜ್‌ ಕುಮಾರ್‌ ಅವ್ರನ್ನ ಡಾರ್ಲಿಂಗ್‌ ಸರ್‌ ಅಂತಲೇ ಕರೆಯೋದು, ಶಿವಣ್ಣ ಅನ್ನಲ್ಲ (ನಗು). ಮೊದಲು ಶಿವಣ್ಣ ಅಂತ ಹೇಳಿದ್ದೆ. ಆಗ ನನ್ನ ಪಕ್ಕ ಕೂತಿದ್ದ ಸುದೀಪ್‌ ಸರ್‌ ಹೇಳಿದ್ರು, ಅವ್ರನ್ನ ಅಣ್ಣ ಅಂತ ಕರೀಬೇಡ, ಇದು ರೊಮ್ಯಾಂಟಿಕ್‌ ಸಿನಿಮಾ, ಅಣ್ಣ ತಂಗಿ ಸಿನಿಮಾ ಅಲ್ಲ. ಅದರ ಬದಲು ಡಾರ್ಲಿಂಗ್‌ ಅಂತ ಕರೀಬಹುದು ಅಂತ ಸಜೆಸ್ಟ್‌ ಮಾಡಿದ್ರು. ಅದಕ್ಕೆ ಈ ನಿರ್ಧಾರ.

ಶಿವರಾಜ್‌ಕುಮಾರ್ 124ನೇ ಚಿತ್ರ 'ನೀ ಸಿಗೋವರೆಗೂ' ಶೂಟಿಂಗ್ ಶುರು!

- ನಾನು ಶಿವರಾಜ್‌ ಕುಮಾರ್‌ ಅವರ ‘ಟಗರು’ ಸಿನಿಮಾ ನೋಡಿದ್ದೀನಿ. ಅದಕ್ಕೂ ಮೊದಲು ಸುದೀಪ್‌ ಸರ್‌ ಮಾಡಿರೋ ‘ಈಗ’ ನೋಡಿದ್ದೆ. ಫ್ರೆಂಡ್ಸ್‌ ಜೊತೆಗೆ ಬೆಂಗಳೂರಿಗೆ ಬರ್ತಾ ಇದ್ದೆ. ನಾಡಿದ್ದು ಒಂದು ತೆಲುಗು ಸಿನಿಮಾ ಶೂಟಿಂಗ್‌ ಮೈಸೂರಲ್ಲಿದೆ. ಚಿಕ್ಕಮಗಳೂರಿಗೂ ಹೋಗಿದ್ದೀನಿ. ಕರ್ನಾಟಕ ನನಗೆ ಹೊಸತಲ್ಲ.

- ಕೋವಿಡ್‌ ಅಲೆ ಹೆಚ್ಚಾಗ್ತಿದೆ, ಕೆರಿಯರ್‌ ದೃಷ್ಟಿಯಿಂದ ದೊಡ್ಡ ಹಿನ್ನಡೆ ಅಂತ ಅನಿಸ್ತಿಲ್ಲ. ನಟಿಯಾಗಿ ನನ್ನ ನಟನೆಯ ಬಗ್ಗೆ ನನಗೆ ಆತ್ಮವಿಶ್ವಾಸ ಇದ್ದರೆ ವಯಸ್ಸು ಒಂದು ಲೆಕ್ಕ ಆಗುವುದಿಲ್ಲ. ಅದು ಮಿಥ್‌ ಅಷ್ಟೇ. ಅಷ್ಟಾಗಿಯೂ ಕೊನೇ ತನಕ ನಾಯಕಿಯಾಗಿಯೇ ಉಳಿಯುತ್ತೇನೆ ಅನ್ನುವ ಭ್ರಮೆಯೂ ನನಗಿಲ್ಲ.