ಮೇಘನಾ ರಾಜ್ ಮೇಕಪ್ ಬ್ರಶ್‌ನ ಎಸ್ಕೇಪ್ ಮಾಡಿದ ಪುತ್ರ; ಕಾರಲ್ಲಿ ಮೇಕಪ್ ಮಾಡಿಕೊಂಡ ನಟಿ ವಿಡಿಯೋ ವೈರಲ್!
ಪುಟ್ಟ ಮಗ ಮನೆಯಲ್ಲಿದ್ದಾಗ ಮೇಕಪ್ ಹೇಗೆ ಮಾಡಿಕೊಳ್ಳುತ್ತಾರೆ ಮೇಘನಾ? ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟ ನಟಿ...
ಚಂದನವನದ ಸುಂದರ ನಟಿ ಮೇಘನಾ ರಾಜ್ ಇತ್ತೀಚಿಗೆ ಯುಟ್ಯೂಬ್ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಲೈಫ್‌ಸ್ಟೈಲ್, ಸಿನಿಮಾ, ಸ್ನೇಹಿತರು, ಮನೆ ಮತ್ತು ಮಗ ಹೀಗೆ ಒಂದೊಂದೆ ವಿಚಾರಗಳ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಯುಟ್ಯೂಬ್ ಚಾನೆಲ್ ತೆರೆದು ಒಂದು ವರ್ಷ ಆಗಿಲ್ಲ ಆಗಲೇ ಸಿಲ್ವರ್ ಪ್ಲೇ ಬಟನ್ ಪಡೆದುಕೊಂಡಿದ್ದಾರೆ, ಅದನ್ನು ಕೂಡ ವೀಕ್ಷಕರಿಗೆ ತೋರಿಸಿದ್ದಾರೆ. ಈಗ ಕಾರಿನಲ್ಲಿ ಮೇಪಕ್ ಮಾಡಿಕೊಳ್ಳುವುದು ಹೇಗೆಂದು ತೋರಿಸಿದ್ದಾರೆ.
ಹೌದು! ವಿಡಿಯೋ ಆರಂದಲ್ಲಿ ಮೇಘನಾ ಮೇಕಪ್ ಮಾಡಿಕೊಳ್ಳಲು ಕಿಟ್ ಹುಡುಕುತ್ತಿರುವಾಗ ರಾಯನ್ ರಾಜ್ ಸರ್ಜಾ ಬ್ರಶ್‌ಗಳ ಜೊತೆ ಆಟವಾಡುತ್ತಾನೆ. ರಾಯನ್ ಎಲ್ಲಿ ನನ್ನ ಮೇಕಪ್ ಪ್ರಶ್ ಎಂದು ಪ್ರಶ್ನೆ ಮಾಡಿದಾಗ ಎಲ್ಲಿದೆ ನನಗೆ ಗೊತ್ತಿಲ್ಲ ರೂಮ್‌ನಲ್ಲಿ ನೋಡಿ ಎಂದು ಹಾಸ್ಯ ಮಾಡುತ್ತಾನೆ ಹೊರತು ಬ್ರಶ್ ಮಾತ್ರ ಕೈಗೆ ಕೊಡುವುದಿಲ್ಲ. ಅಲ್ಲಿಂದ ಸಂಪೂರ್ಣ ಬ್ರಶ್‌ಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಮೇಘನಾ ಕಾರಿನಲ್ಲಿ ಹೊರಡುತ್ತಾರೆ. ಸ್ನೇಹಿತೆಯ ಮನೆ ಗೃಹಪ್ರವೇಶಕ್ಕೆ ಹೋಗಬೇಕು ಎಷ್ಟು ಸಿಂಪಲ್ ಆಗಿ ಕಡಿಮೆ ಮೇಕಪ್ ಬಳಸಿ ಮೇಕಪ್ ಮಾಡಿಕೊಳ್ಳುತ್ತೀನಿ ನೋಡಿ ಎಂದು ತೋರಿಸಿದ್ದಾರೆ.
ಚಿರು ಸಹಿ ಇನ್ನೂ ಉಳಿದಿದೆ; ಬೆಡ್‌ರೂಮ್ ವಿಡಿಯೋ ರಿವೀಲ್ ಮಾಡಿದ ಮೇಘನಾ ರಾಜ್!
'ತುಂಬಾ ಸಲ ಶೂಟಿಂಗ್‌ಗೆ ಲೇಟ್ ಆದಾಗ ನಾನು ಈ ರೀತಿ ಕಾರಿನಲ್ಲಿ ಕೇವಲ 5 ಪ್ರಾಡೆಕ್ಟ್‌ಗಳನ್ನು ಬಳಸಿಕೊಂಡು ಮಾಡಿಕೊಳ್ಳುವೆ. ತುಂಬಾ ಸುಲಭವಾಗಿ ಮಾಡಿಕೊಳ್ಳಲು ಲಿಪ್‌ಸ್ಟಿಕ್, ಕಾಜಲ್, ಕನ್ಸೀಲರ್, ಮಸ್ಕಾರ ಹಾಗೂ ಕನ್ಸೀಲರ್ ಬಳಸುವೆ. ಮೊದಲು ಕನ್ಸೀಲರ್‌ನ ಕಣ್ಣಿನ ಕೆಳಗೆ ಹಾಕಿಕೊಳ್ಳಬೇಕು ಏನೇ ಮಾರ್ಕ್ ಇದ್ದರೂ ಕಾಣಿಸುವುದಿಲ್ಲ. ಆನಂತರ ಲಿಪ್‌ಸ್ಟಿಕ್ ಧರಿಸಬೇಕು, ಬ್ಲಶ್ ಕಡಿಮೆ ಹಾಕಿಕೊಳ್ಳಬೇಕು ಇಲ್ಲದಿದ್ದರೆ ಜಾತ್ರೆ ಗೊಂಬೆ ರೀತಿ ಇರ್ತೀವಿ. ಕಾಜಲ್‌ನ ಡಾರ್ಕ್ ಅಥವಾ ಲೈಟ್ ಆಗಿ ಬಳಸಬಹುದು. ಐ ಲೈನರ್‌ನ ಹೆಚ್ಚಿಗೆ ಬಳಸುವುದಿಲ್ಲ' ಎಂದು ಮೇಘನಾ ಹೇಳಿದ್ದಾರೆ.
ಶಾಲೆಗೆ ಕಾಲಿಟ್ಟ ರಾಯನ್ ಸರ್ಜಾ; ಭಾವುಕರಾದ ಮೇಘನಾ ರಾಜ್!
'ನಾನು ಟ್ರೈ ಮಾಡಿ ನಾನೇ ಎಕ್ಸಪರಿಮೆಂಟ್ ಮಾಡಿ ನನ್ನ ಸ್ಕಿನ್‌ಗೆ ವರ್ಕ್ ಅಗುತ್ತೆ ಅಂತ ಟ್ರೈ ಮಾಡಿದನ್ನು ನಿಮಗೆ ತೋರಿಸುವೆ. ಮನೆಯಲ್ಲಿ ಸಿಗುವ ಸಿಂಪಲ್ ಪದಾರ್ಥಗಳನ್ನು ಬಳಸಿ ಮಾಡಿರುವುದೆ. ಕಾಫಿ ಪುಡಿ, ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸೆ ಮಿಸ್ಕ್ ಮಾಡಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು ವಾರಕ್ಕೆ ಒಂದು ಅಥವಾ ಎರಡು ದಿನ ಮಾಡಿಕೊಳ್ಳಬೇಕು. 10ರಿಂದ 30 ಸೆಕೆಂಡ್ ಮುಖ ಉಜ್ಜ ಬೇಕು ಆನಂತರ ಐಸ್ ಕ್ಯೂಬ್ ರಬ್ ಮಾಡಬೇಕು ಈ ರೀತಿ ಮಾಡುವುದರಿಂದ ಮುಖ ಪಳ ಪಳ ಎನ್ನತ್ತದೆ.