ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆಯಾಗಿ ಏಳು ವರ್ಷ ಕಳೆದಿದೆ. ಏಪ್ರಿಲ್ 29, 2018 ರಂದು ಕ್ರೈಸ್ತ ಸಂಪ್ರದಾಯದಂತೆ ಮತ್ತು ಮೇ 2, 2018 ರಂದು ಹಿಂದೂ ಸಂಪ್ರದಾಯದಂತೆ ಈ ಜೋಡಿ ವಿವಾಹವಾದರು. ಆನಿವರ್ಸರಿ ಸಂದರ್ಭದಲ್ಲಿ ಚಿರು ಜೊತೆಗಿರುವ ಅಪರೂಪದ ಫೋಟೋಗಳನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ (Sandalwood actress Meghana Raj) ಹಾಗೂ ಚಿರಂಜೀವಿ ಸರ್ಜಾ (Chiranjeevi Sarja) ಮದುವೆಯಾಗಿ ಏಳು ವರ್ಷ ಕಳೆದಿದೆ. ಏಪ್ರಿಲ್ ಇಪ್ಪತ್ತೊಬ್ಬತ್ತರಂದು ಮೇಘನಾ ರಾಜ್, ಕ್ರಿಶ್ಚಿಯನ್ ಸಂಪ್ರದಾಯ (Christian tradition)ದಂತೆ ನಟ ಚಿರಂಜೀವಿ ಸರ್ಜಾ ಮನದೊಡತಿಯಾಗಿದ್ರು. ಮೇ 2, 2018ರಂದು ಹಿಂದೂ ಸಂಪ್ರದಾಯದಂತೆ ಇಬ್ಬರ ಮದುವೆ ನೆರವೇರಿತ್ತು. ಈ ವಿಶೇಷ ದಿನದಂದು ಮೇಘನಾ ರಾಜ್, ಚಿರಂಜೀವಿ ಜೊತೆಗಿರುವ ಅಪರೂಪದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೀವನಪೂರ್ತಿ ಎನ್ನುವ ಅರ್ಥ ಬರುವಂತೆ ಶೀರ್ಷಿಕೆ ಹಾಕಿರುವ ಮೇಘನಾ ರಾಜ್, ಚಿರು ಜೊತೆಗಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಹಗ್ ಮಾಡಿಕೊಂಡಿದ್ದು, ಇಬ್ಬರ ಹಿಂಭಾಗ ಕಾಣ್ತಿದೆ. ಚಿರುಗೆ, ಮೇಘನಾ ಮುತ್ತಿಡ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಚಿರು ಹಾಗೂ ಮೇಘನಾ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಕೊನೆಯ ಫೋಟೋದಲ್ಲಿ ಮೇಘನಾ ಸೀರೆಯುಟ್ಟಿದ್ರೆ ಚಿರು ಲುಂಗಿಯುಟ್ಟು ಮಿಂಚುತ್ತಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು, ಚಿರು ನಮ್ಮ ಜೊತೆಯಲ್ಲಿಲ್ಲ ಎನ್ನುವ ಬೇಸರದಲ್ಲಿದ್ರೂ, ಇಬ್ಬರ ಜೋಡಿ ತುಂಬಾ ಸುಂದರವಾಗಿತ್ತು ಅಂತ ಕಮೆಂಟ್ ಮಾಡಿದ್ದಾರೆ. ಸ್ಯಾಂಡಲ್ವುಡ್ ಬೆಸ್ಟ್ ಕಪಲ್, ಮೇಘನಾ ಹಾಗೂ ಮಗನ ಮೇಲೆ ನಮ್ಮ ಪ್ರೀತಿ ಸದಾ ಇರುತ್ತೆ ಎನ್ನುವ ಕಮೆಂಟ್ ಗಳು ಬಂದಿವೆ.
ಮೇಘನಾ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆ ಆದವರು. ಹತ್ತು ವರ್ಷ ಪ್ರೀತಿಯಲ್ಲಿದ್ದ ಜೋಡಿ ಅಕ್ಟೋಬರ್ 22, 2017 ರಂದು ನಿಶ್ಚಿತಾರ್ಥ ಮಾಡ್ಕೊಂಡಿದ್ರು. ಮೇ 2, 2018 ರಂದು ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಆದ್ರೆ ವಿಧಿ ಬರಹ ಬೇರೆಯದನ್ನೇ ಬರೆದಿತ್ತು. ಇಬ್ಬರ ಮುದ್ದು ಜೋಡಿಗೆ ಅದ್ಯಾವ ಕೆಟ್ಟ ದೃಷ್ಟಿ ತಗಲ್ತೋ ಗೊತ್ತಿಲ್ಲ. ಖುಷಿಯಾಗಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು. ಕುಟುಂಬವನ್ನೇ ಜೀವ ಅಂದ್ಕೊಂಡಿದ್ದ, ಕುಟುಂಬವನ್ನು, ಮೇಘನಾರನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು. 2020 ಮೇಘನಾ ರಾಜ್ ಗೆ ಮರೆಯಲಾಗದ ವರ್ಷವಾಯ್ತು. ಜೂನ್ ಏಳರಂದು ಮೇಘನಾ ರಾಜ್, ತಮ್ಮ ಸರ್ವಸ್ವವಾಗಿದ್ದ ಚಿರು ಅವರನ್ನು ಕಳೆದುಕೊಂಡ್ರು. ಗರ್ಭಿಣಿಯಾಗಿದ್ದ ಮೇಘನಾ ನೋವು, ಕಣ್ಣೀರು ಕನ್ನಡಿಗರ ನೋವಾಗಿದೆ. ಕರ್ನಾಟಕದ ಪ್ರತಿಯೊಬ್ಬರೂ ಮೇಘನಾ ಜೊತೆ ಸದಾ ನಿಂತಿದ್ದಾರೆ. ಚಿರು ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ ಕಳೆದಿದೆ. ಆದ್ರೆ ಚಿರು ದೈಹಿಕವಾಗಿ ಮಾತ್ರ ಇಲ್ಲ. ಮೇಘನಾ ಮನಸ್ಸಿನಲ್ಲಿ ಸದಾ ಚಿರು ಚಿರಂಜೀವಿ. ಮೇಘನಾ ರಾಜ್, ಚಿರಂಜೀವಿ ನನ್ನ ಜೊತೆ ಸದಾ ಇದ್ದಾರೆ ಅಂದ್ಕೊಂಡಿದ್ದಲ್ಲದೆ, ತಮ್ಮ ಮಗ ರಾಯನ್ ನಲ್ಲಿ ಚಿರುವನ್ನು ಕಾಣ್ತಿದ್ದಾರೆ. ರಾಯನ್ ಈಗ ಮೇಘನಾ ಪ್ರಪಂಚವಾಗಿದ್ದಾನೆ.
ಚಿರಂಜೀವಿ ಸರ್ಜಾರ ಪ್ರೀತಿಯ ನೆನಪುಗಳೊಂದಿಗೆ ಮೇಘನಾ ರಾಜ್ ಮುಂದಿನ ಹೆಜ್ಜೆ ಇಡ್ತಿದ್ದಾರೆ. ರಿಯಾಲಿಟಿ ಶೋಗಳು, ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ ಮೇಘನಾ ರಾಜ್. ಕನ್ನಡಕ್ಕಿಂತ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ಆಫರ್ ಬರ್ತಿದೆ. ರಾಯನ್ ಪಾಲನೆ ಜೊತೆ ವೃತ್ತಿಗೂ ಮೇಘನಾ ರಾಜ್ ಸಮಯ ನೀಡ್ತಿದ್ದಾರೆ. ಕೆಲ ದಿನಗಳ ಹಿಂದೆ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಸ್ವಂತ ಮನೆ ಮಾಡ್ಬೇಕು ಎನ್ನುವ ಚಿರಂಜೀವ ಸರ್ಜಾ ಕನಸನ್ನು ಮೇಘನಾ ರಾಜ್ ನನಸು ಮಾಡಿದ್ದಾರೆ.
ಮೇಘನಾ ರಾಜ್ ಇನ್ನೊಂದು ಮದುವೆ ಆಗ್ತಾರೆ ಎನ್ನುವ ಮಾತು ಕೇಳಿ ಬರ್ತಿತ್ತು. ಆದ್ರೆ ಚಿರು ಮರೆಯಲು ಸಾಧ್ಯವೇ ಇಲ್ಲ ಅಂತ ಆಗಾಗ ಮೇಘನಾ ರಾಜ್ ಹೇಳಿದ್ದಿದೆ. ಈಗ ಪ್ರತಿ ಜೀವಿತಾವಧಿಯಲ್ಲಿ ಎನ್ನುವ ಶೀರ್ಷಿಕೆ ನೀಡುವ ಮೂಲಕ ಮತ್ತೊಮ್ಮೆ ಮೇಘನಾ ರಾಜ್, ಎರಡನೇ ಮದುವೆ ಸುದ್ದಿಯನ್ನು ಅಲ್ಲಗಳೆದಂತಿದೆ.


