ಧ್ರುವ ಸರ್ಜಾಗೂ ಇದ್ದಾರೆ ಅಪರೂಪದ ತಂಗಿ; ಇವರ ಹಿಂದಿದೆ ಮನಮಿಡಿಯುವ ಕಥೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾಗೆ ಇದ್ದಾರೆ ವಿಶೇಷ ಅಭಿಮಾನಿ. ಧ್ರುವಾ ಮದುವೆಗೆ ಬಂದ ಈ ಅಭಿಮಾನಿಯನ್ನು ಮೇಘನಾ ಆತ್ಮೀಯವಾಗಿ ಬರಮಾಡಿಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. 

Meghana Raj greets Dhruva Sarja Special fan photo goes Viral

 ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಮದುವೆಯಲ್ಲಿ ಅತ್ತಿಗೆ ಮೇಘನಾ ರಾಜ್ ನಡೆದುಕೊಂಡ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಜಾ ಕುಟುಂಬಕ್ಕೆ ಹೇಳಿ ಮಾಡಿಸಿದ ಸೊಸೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಗಮನ ಸೆಳೆದ ಆ ವಿಚಾರ ಯಾವುದು ಅಂತೀರಾ? ಇಲ್ಲಿದೆ ನೋಡಿ. 

ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು

ಧ್ರುವಾ ಸರ್ಜಾ ಮದುವೆಗೆ ಶುಭ ಹಾರೈಸಲು ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು.  ಅವರನ್ನು ಆತ್ಮೀಯವಾಗಿ ಉಪಚರಿಸಿದ್ದಾರೆ ಮೇಘನಾ. ಜೊತೆಗೆ ಸೆಲ್ಫಿಯನ್ನೂ ನೀಡಿದ್ದಾರೆ. ಯಾವುದೇ ಹಮ್ಮು ಬಿಮ್ಮು ಇಲ್ಲದೇ ಡೌನ್ ಟು ಅರ್ತ್ ಆಗಿ ಅಭಿಮಾನಿ ಜೊತೆ ನಡೆದುಕೊಂಡ ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Meghana Raj greets Dhruva Sarja Special fan photo goes Viral

ಯಾರು ಈ ಅಭಿಮಾನಿ? 

ಇವರ ಹೆಸರು ಪುಪ್ಷಾ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.  ಮನೆಯಲ್ಲಿ ಸೀಮೆಎಣ್ಣೆ ಸ್ಟೌವ್ ಸಿಡಿದು ಅಮ್ಮ ಅಮ್ಮನನ್ನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡರು. ಅವಗಢದಲ್ಲಿ ಇವರ ಮುಖವೂ ವಿಕಾರವಾಯಿತು.  ಸಣ್ಣ ವಯಸ್ಸಿನಿಂದಲೇ ದರ್ಶನ್, ಧ್ರುವ ಸಿನಿಮಾಗಳನ್ನು ನೋಡುತ್ತಲೇ ಅವರ ಅಭಿಮಾನಿಯಾದರು. ಒಮ್ಮೆ ದರ್ಶನ್‌ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಇವರ ಕಥೆ ಕೇಳಿದ ದರ್ಶನ್ ತಂಗಿಯಂತೆ ನೋಡುತ್ತಾರೆ.  ಪ್ರತಿವರ್ಷ ಪುಪ್ಷಾ ದರ್ಶನ್‌ಗೆ ರಾಖಿ ಕಟ್ಟುತ್ತಾರೆ.

 


 

Latest Videos
Follow Us:
Download App:
  • android
  • ios