ರಾಯನ್ ಜೊತೆ ಧ್ರುವ ಸರ್ಜಾ ಪುತ್ರಿ; ಸೀಮಂತದಲ್ಲಿ ಮೇಘನಾ ಇಲ್ಲ, ನೆಟ್ಟಿಗರ ಪ್ರಶ್ನೆಗೆ ಉತ್ತರವೇ ಇಲ್ಲ!
ಸಖತ್ ವೈರಲ್ ಆಯ್ತು ಅಣ್ಣ ತಂಗಿ ಫೋಟೋ. ಆದರೂ ಸೀಮಂತದಲ್ಲಿ ಅತ್ತಿಗೆ ಯಾಕಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ಫ್ಯಾನ್ಸ್....
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ತಿಂಗಳು ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಲಿದೆ. ಕೆಲವು ದಿನಗಳ ಹಿಂದೆ ತಮ್ಮ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿದ್ದರು. ಪ್ರೇರಣಾ ಮತ್ತು ಮಗಳು ಒಂದೇ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದರು. ಕೃಷ್ಣ ಥೀಮ್‌ನಲ್ಲಿ ಇಡೀ ಫಾರ್ಮ್ ಹೌಸ್‌ನ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಅಣ್ಣ ಚಿರಂಜೀವಿ ಸರ್ಜಾ ಪಕ್ಕದಲ್ಲಿ ಇದೆಲ್ಲಾ ನಡೆಯಬೇಕು ಎಂದು ಧ್ರುವ ಫ್ಯಾಮಿಲಿ ಆಸೆ ಪಟ್ಟಿದ್ದರು. ಇದೇ ಸಮಯದಲ್ಲಿ ಅನ್ಸುತ್ತೆ ಧ್ರುವ ಅಣ್ಣನ ಸಮಾಧಿ ಪಕ್ಕದಲ್ಲಿ ವಿಶ್ರಾಂತಿ ಮಾಡುತ್ತಿದ್ದು, ಆಗ ಅಲ್ಲಿದ್ದ ವ್ಯಕ್ತಿ ಯಾರೋ ವಿಡಿಯೋ ಮಾಡಿ, ವೈರಲ್ ಆಗಿದ್ದು.
ಪ್ರೇರಣಾ ಎರಡನೇ ಮಗುವಿನ ಸೀಮಂತದಲ್ಲಿ ಮೇಘನಾ ರಾಜ್ ಕುಟುಂಬದವರು ಯಾರೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಪುಟ್ಟ ಕಂದಮ್ಮ ರಾಯನ್ ಕೂಡ ಇರಲಿಲ್ಲ ಎಂದು ನೆಟ್ಟಿಗರು ಗಮನಿಸಿದ್ದಾರೆ. ಧ್ರುವ ಸರ್ಜಾ ಜೀವನ ಮುಖ್ಯ ಗಳಿಗೆ ಇದಾಗಿದ್ದು ಮೇಘನಾ ರಾಜ್ ಸಪೋರ್ಟ್ ಮಾಡಬೇಕು ಕೇವಲ ಒಂದೆರಡು ಗಂಟೆ ಬಂದು ಹೋಗಬೇಕಿತ್ತು ಎನ್ನುವ ಮಾತುಗಳು ಮತ್ತು ಕಾಮೆಂಟ್‌ಗಳನ್ನು ಗಮನಿಸಬಹುದು. ಹೀಗೆ ಜನರು ಚರ್ಚೆ ಮಾಡುತ್ತಿರುವ ನಡುವೆ ಮಕ್ಕಳ ಫೋಟೋ ವೈರಲ್ ಆಗಿದೆ.
ಮಗನಿಗೆ ರಜನಿಕಾಂತ್-ಧ್ರುವ ಸರ್ಜಾ ಡೈಲಾಗ್ ಹೇಳಿಕೊಟ್ಟ ಮೇಘನಾ ರಾಜ್; ತಮಿಳು ಬೇಡ ಕನ್ನಡ ಕಲಿಸಿ ಎಂದ ನೆಟ್ಟಿಗರು!
ಹೌದು! ವ್ಯಕ್ತಿಯೊಬ್ಬ ಒಂದು ಕಡೆ ರಾಯನ್ ರಾಜ್ ಸರ್ಜಾ ಮತ್ತೊಂದು ಕಡೆ ಧ್ರುವ ಸರ್ಜಾ ಪುತ್ರಿಯನ್ನು ಎತ್ತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. ಮಕ್ಕಳಿಬ್ಬರೂ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ರಾಯನ್ ಕ್ಯಾಮೆರಾ ನೋಡುತ್ತಿದ್ದರೆ ಧ್ರುವ ಪುತ್ರಿ ರಾಯನ್‌ನ ನೋಡುತ್ತಿದ್ದಾಳೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಣ್ಣ ತಂಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಇವರಿಬ್ಬರ ಬಾಂಡಿಂಗ್ ಚೆನ್ನಾಗಿರಲಿ ಎಂದು ವಿಶ್ ಮಾಡಿದ್ದಾರೆ.
ಅಣ್ಣ ಚಿರು ಸಮಾಧಿಯಲ್ಲಿ ಮಲಗಿದ ಧ್ರುವ ಸರ್ಜಾ; ವಿಡಿಯೋ ವೈರಲ್
ಇನ್ನು! ಸೀಮಂತ ವಿಚಾರಕ್ಕೆ ಬಂದರೆ ಅಭಿಮಾನಿಗಳೇ ನೆಗೆಟಿವ್ ಕಾಮೆಂಟ್‌ಗೆ ಉತ್ತರ ಕೊಟ್ಟಿದ್ದಾರೆ. ಧ್ರುವ ಸರ್ಜಾ ಪತ್ನಿ ಸೀಮಂತ ಖಂಡಿತ ಜೀವನದ ಮುಖ್ಯವಾದ ಗಳಿಗೆ ಯಾರೂ ಕೂಡ ಮಿಸ್ ಮಾಡುವುದಿಲ್ಲ ಆದರೆ ಮೇಘನಾ ರಾಜ್ ಕಮ್ ಬ್ಯಾಕ್ ಸಿನಿಮಾ ಕೂಡ ಅವರ ಜೀವನದಲ್ಲಿ ಒಳ್ಳೆಯ ಗಳಿಗೆ ಅದನ್ನು ಹೇಗೆ ಮಿಸ್ ಮಾಡಲು ಸಾಧ್ಯ? ಸಿನಿಮಾ ಪ್ರಚಾರ ಸಂದರ್ಶನದಲ್ಲಿ ತೊಡಗಿಸಿಕೊಂಡರೆನೇ ಆಕೆ ಮತ್ತೆ ಚಿತ್ರರಂಗದಲ್ಲಿ ಹೆಸರು ಮಾಡುವುದು ನೆಲೆ ಕಾಣಲು ಸಾಧ್ಯ. ಈ ವಿಚಾರವನ್ನು ಸ್ವತಃ ಧ್ರುವನೇ ಅರ್ಥ ಮಾಡಿಕೊಂಡು ಸುಮ್ಮನಿದ್ದಾರೆ ಅಷ್ಟೇ ಯಾಕೆ ಮೇಘನಾ ಸಿನಿಮಾ ಪ್ರೀಮಿಯರ್ ಶೋಗೂ ಆಗಮಿಸಿದ್ದರು ಎಂದು ಸ್ಪಷ್ಟನೆ ಕೊಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸಾಕಷ್ಟು ಸಲ ಮೇಘನಾ ಮತ್ತು ಧ್ರುವ ಸ್ಪಷ್ಟನೆ ಕೊಟ್ಟಿದ್ದಾರೆ ಯಾರೂ ಸುಮ್ಮನಿರದೆ ಪದೇ ಪದೇ ಕೆಣಕಿ ಪ್ರಶ್ನೆ ಮಾಡಿದರೆ ಯಾರು ಉತ್ತರ ಕೊಡುತ್ತಾರೆ ಹೇಳಿ?