ಅಣ್ಣ ಚಿರು ಸಮಾಧಿಯಲ್ಲಿ ಮಲಗಿದ ಧ್ರುವ ಸರ್ಜಾ; ವಿಡಿಯೋ ವೈರಲ್
ಅಣ್ಣನ ಸಮಾಧಿ ಬಳಿ ಮಲಗಿಕೊಂಡ ಧ್ರುವ ಸರ್ಜಾ. ಎಲ್ಲೆಡೆ ವಿಡಿಯೋ ವೈರಲ್..
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಕನಕಪುರದ ಫಾರ್ಮ್‌ಹೌಸ್‌ನಲ್ಲಿ ಅಣ್ಣ ಚಿರಂಜೀವಿ ಸರ್ಜಾ ಸಮಾಧಿಯನ್ನು ಅದ್ಧೂರಿಯಾಗಿ ಕಟ್ಟಿಸಿದ್ದಾರೆ. ಸಮಾಧಿ ಎದುರು ಚಿರು ಎಂದು ಇಂಗ್ಲಿಷ್‌ನಲ್ಲಿ ಬರೆಸಿದ್ದಾರೆ. ವರ್ಷದ ಕಾರ್ಯ ಮತ್ತು ಚಿರು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಬಿಡುವಿನ ಸಮಯದಲ್ಲಿ ಎಲ್ಲೋ ಹೋಗದೆ ಅಣ್ಣನ ಸಮಾಧಿಗೆ ಭೇಟಿ ನೀಡುತ್ತಾರೆ.
ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್ ಹಾಕಿಕೊಂಡು ಮಲಗಿದ್ದಾರೆ. ಧ್ರುವ ಎಲ್ಲಿ ಎಂದು ಮನೆಯವರು ಹುಡುಕಿದಾಗ ಅಣ್ಣನ ಸಮಾಧಿ ಬಳಿ ಮಲಗಿದ್ದರು. ಧ್ರುವ ಸರ್ಜಾಗೆ ತಿಳಿಯದ ಹಾಗೆ ಆಪ್ತರು ವಿಡಿಯೋ ಸೆರೆ ಹಿಡಿದಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಧ್ರುವ ಅಭಿಮಾನಿಗಳು 'ಪರಪಂಚ ನೀನೇ ನನ್ನ ಪರಪಂಚ ನೀನೇ....ನೀನೇ ಎಲ್ಲಾ ಬೇರೇನೂ ಇಲ್ಲ ಪರಪಂಚ ನೀನೇ' ಎನ್ನುವ ಹಾಡು ಹಾಕಿದ್ದಾರೆ.
ಬೆಡ್‌ವೆಟ್ ಮಾಡಿಕೊಳ್ತಿದ್ದ ಪುಟ್ಟ ಧ್ರುವ ಸರ್ಜಾ, ಚಿರು ಹೆಲ್ಪ್ ನೆನೆದು ಕಣ್ಣೀರು!
ಅಣ್ಣ ಅಂದ್ರೆ ತುಂಬಾ ಕ್ಲೋಸ್:
'ಮದುವೆಯಾದ ಹೊಸತರಲ್ಲಿ ನಡೆದ ಘಟನೆ. ನಾನು ನನ್ನ ಅಣ್ಣ ಸಖತ್ ಕ್ಲೋಸ್. ಯಾವ ಲೆವೆಲ್‌ಗೆ ಅಂತ ಎಕ್ಸಪ್ರೆಸ್ ಮಾಡೋಕೆ ಆಗಲ್ಲ. ಮದುವೆ ಆದ್ಮೇಲೆ ಅದು ಶುರುವಾಗುತ್ತೆ. ಅಯ್ಯೋ ನಮ್ಮ ಅಣ್ಣ ನನ್ನ ಜೊತೆ ಟೈಂ ಸ್ಪೆಂಡ್ ಮಾಡ್ತಿಲ್ಲ. ಅದು ನಾನು ಹೇಳಲಿಲ್ಲ ಆದರೆ ಅಣ್ಣಂಗೆ ಅರ್ಥ ಆಯ್ತು. ಏನೋ ಕಡ್ಡಿ ನಾನು ನಿನ್ನ ಜೊತೆ ಇಲ್ಲ ಅಂತ ಒಂದು ತರ ಆಗ್ತಿದ್ಯಾ ಅಂತಿದ್ದ. ನನ್ನ ಅತ್ತಿಗೆ ಹುಟ್ಟುಹಬ್ಬ ದಿನ ಅಣ್ಣ ಮತ್ತು ಅಮ್ಮ ಬಂದು ಸ್ವೀಟ್ ಕೊಟ್ಟ ಅಣ್ಣ 'ಮಚ್ಚಾ ಇದು ನನ್ನ ಹೆಂಡ್ತಿ ನಿನಗೆ ಗೊತ್ತಲ್ಲ ಅಂದ ನಾನು ಫುಲ್ ಕನ್ಫ್ಯೂಷನ್‌ನಲ್ಲಿ ನಿಂತುಕೊಂಡೆ. ನನ್ನ ತಾಯಿ ನೋಡಪ್ಪ ಅತ್ತಿಗೆ ಅಂದ್ರೆ ತಾಯಿ ತರ ಇವರು ನಿನಗೆ ಎರಡನೇ ತಾಯಿ ಅಂತ ಪರಿಚಯ ಮಾಡಿಸಿಕೊಟ್ಟರು' ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಹೊಸ ವರ್ಷ ಪಾರ್ಟಿ ಮಾಡೋಲ್ಲ, ನನ್ನ ಲೈಫಲ್ಲಿ ಅದೊಂದು ಮಿಸ್ಸಿಂಗ್: Dhruva Sarja
'ಕೆಲವು ಮಾತುಗಳನ್ನು ನಾವು ನಿಲ್ಲಿಸಿದ್ದೀವಿ. ಹೇಗಿದ್ದೀರಾ ಅಂತ ಕೇಳೋದು ನಿಲ್ಲಿಸಿದ್ದೀವಿ. ಚೆನ್ನಾಗಿದ್ದೀರಾ ಅಂತ ಕೇಳೋದು ನಿಲ್ಲಿಸಿದ್ದೀವಿ. ದಿನೇ ದಿನೇ ಅತ್ತಿಗೆ ಆಗಲಿ ನಾವು ಆಗಲಿ ಚೇತರಿಸಿಕೊಳ್ಳುತ್ತಿದ್ದೀವಿ. ಕಷ್ಟ ಅನ್ನೋದು ಎಲ್ಲರಿಗೂ ಬರುತ್ತೆ. ನಾನು ಅಣ್ಣ 6 ಕ್ಲಾಸ್‌ವರೆಗೂ ಬೋರ್ಡಿಂಗ್‌ನಲ್ಲಿ ಓದುತ್ತಿದ್ವಿ. ನಮಗೆ ವಾರಕ್ಕೆ ಒಂದು ಸಲ ಪಾಕೆಟ್ ಮನಿ ಕೊಡುತ್ತಾರೆ. ನನಗೆ 5 ರೂ ಅಣ್ಣ ದೊಡ್ಡವನು ಅವನಿಗೆ 20 ರೂ. ಅವನು ಹಣ ಇಟ್ಟಿಕೊಳ್ಳುತ್ತಿರಲಿಲ್ಲ ನನಗೆ ಕೊಟ್ಟು ನೀನು ತಗೋ ಅಂತ ಹೇಳುತ್ತಿದ್ದ. ಒಂದು ದಿನ ಅವರು ಕ್ಲಾಸ್ ಪ್ರಮೋಟ್ ಆದ. ನಾವಿಬ್ಬರೂ ಒಟ್ಟಿಗೆ ಒಂದೇ ರೂಮ್‌ನಲ್ಲಿ ಇದ್ವಿ. ಆಗ ನನಗೆ ಕಷ್ಟ ಆಯ್ತು. ನನಗೆ ಹೊಡೆದರೂ ಪರ್ವಾಗಿಲ್ಲ ನನಗೆ ಅಣ್ಣಬೇಕು ಎನ್ನುತ್ತಿದ್ದೆ. ನಾನು ನಾಲ್ಕನೆ ಕ್ಲಾಸ್‌ವರೆಗೂ ಬೆಡ್‌ವೆಟ್ ಮಾಡಿಕೊಳ್ಳುತ್ತಿದ್ದೆ. ಮಾಡಿಕೊಂಡು ಅಣ್ಣನ ಪಕ್ಕ ಬಂದು ಮಲಗಿಕೊಳ್ಳುತ್ತಿದ್ದೆ. ಅವನು ಎದ್ದು ಇವತ್ತು ಮಾಡ್ಕೊಂಡಾ ಎಂದು ಹೇಳಿ ನನ್ನ ಬೆಡ್‌ಶೀಟ್ ಕ್ಲೀನ್ ಮಾಡಿ ಅಲ್ಲಿ ಹೋಗಿ ಮಲಗಿಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದ ನಾನು ತಂದೆ ತಾಯಿ ಜೊತೆ ಇರಲಿಲ್ಲ ಆದರೆ ಅಣ್ಣನ ಜತೆ ಇಲ್ಲದ ದಿನನೇ ಇಲ್ಲ. ಈಗ ಅವನಿಲ್ಲದ ದಿನಗಳಿಂದ ಹೊರಗೆ ಬರುತ್ತಿದ್ದೀವಿ. ಅತ್ತಿಗೆ ಬಂದ್ರು ಲೈಫಲ್ಲಿ ಎಲ್ಲಾ ಚೆನ್ನಾಗಿತ್ತು ಆದರೆ ಈ ರೀತಿ ಆಯ್ತು' ಎಂದಿದ್ದಾರೆ ಧ್ರುವ.