ಕರ್ನಾಟಕದಲ್ಲಿ ಚಿತ್ರಮಂದಿರಗಳ ಬಂದ್ ವಿಚಾರ, ಫಿಲಂ ಚೇಂಬರ್‌ನಲ್ಲಿ ಹೈ ವೋಲ್ಟೇಜ್ ಮೀಟಿಂಗ್!
'ಸಿನಿಮಾ ಬಿಡುಗಡೆ ವಿಚಾರವಾಗಿ ಚಿತ್ರಮಂದಿರಗಳ ಬಂದ್ ವಿಚಾರವಾಗಿ ಚರ್ಚೆ ಮಾಡುತ್ತೇವೆ. ದೊಡ್ಡ ನಟರು ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡೋ ಬಗ್ಗೆಯೂ ಚರ್ಚೆ ಆಗಿದೆ. ಚಿತ್ರಮಂದಿರದ ಮಾಲೀಕರು ಚಿತ್ರಮಂದಿರಗಳನ್ನು..
ಸ್ಯಾಂಡಲ್‌ವುಡ್ ಅಂದರೆ, ಕನ್ನಡ ಚಿತ್ರೋದ್ಯಮದಲ್ಲಿ ಒಂದು ತಿಂಗಳು ಚಿತ್ರಮಂದಿರಗಳ ಬಂದ್ (Sandalwood Bandh) ವಿಚಾರಕ್ಕೆ ಸಂಬಂಧಿಸಿ ಫಿಲಂ ಚೇಂಬರ್‌ನಲ್ಲಿ ಹೈ ವೋಲ್ಟೇಜ್ ಮೀಟಿಂಗ್ನಡೆಯಲಿದೆ. ಚಿತ್ರರಂಗದ ಪ್ರಮುಖ ನಿರ್ಮಾಪಕರು, ಸಭೆಯಲ್ಲಿ ಭಾಗಿಯಾಗಿ, ಚಿತ್ರರಂಗದ ದಯನೀಯ ಸ್ಥಿತಿಯ ಬಗ್ಗೆ ಸ್ಟಾರ್ ನಟರುಗಳ ಜೊತೆಗೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ವರ್ಷಕ್ಕೆ ಎರಡು ಸಿನಿಮಾ ಮಾಡಲು ಸ್ಟಾರ್‌ಗಳಿಗೆ ಫಿಲ್ಮ್ ಚೇಂಬರ್ ಮನವಿ ಮಾಡಲಿದೆ ಎನ್ನಲಾಗಿದೆ.
ಚಿತ್ರರಂಗದ ಉಳಿವಿಗಾಗಿ ನಡೆಯಲಿರೋ ಈ ಮೀಟಿಂಗ್, ಇಂದು ಮಧ್ಯಾನ 3 ಗಂಟಗೆ ವಾಣಿಜ್ಯಮಂಡಳಿಯಲ್ಲಿ ಸಭೆ ಸೇರಲಿದೆ. ಸಂಕಷ್ಟದಲ್ಲಿರೋ ಕನ್ನಡ ಚಿತ್ರರಂಗಕ್ಕೆ ಪರಿಹಾರ ಹುಡುಕಲು ಮುಂದಾದ ಚಿತ್ರರಂಗದ ಅಂಗ ಸಂಸ್ಥೆಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಚಿತ್ರರಂಗದ ಸಮಸ್ಯೆ ಹಾಗೂ ಪರಿಹಾರದ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನಿರ್ಮಾಪಕರ ಸಂಘಧ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿದ್ದಾರೆ.
ನಾನಿನ್ನೂ ಮದುವೆಯಾಗಿಲ್ಲ, ಉಪೇಂದ್ರರ 'A'ಸಿನಿಮಾ ನನ್ನ ತಲೆ ಹಾಳು ಮಾಡಿದೆ; ನಟಿ ಚಾಂದಿನಿ
'ಸಮಸ್ಯೆಗೆ ಪರಿಹಾರ ಹುಡುಕಲು ಅಂಗ ಸಂಸ್ಥೆಗಳ ಜೊತೆ ಸಭೆ ಮಾಡಿದ್ದೇವೆ. ರಾಜ್ಯದ ಹಲವು ಚಿತ್ರಮಂದಿರಗಳು ಮುಚ್ಚಿ ಹೋಗಿವೆ. ಚಿತ್ರಮಂದಿರಗಳಿಗೆ ಬೀಗ ಹಾಕೋ ವಿಚಾರವಾಗಿ ಸಭೆ ಆಗಿದೆ. ಇದಕ್ಕೆ ಸಂಬಂಧಿಸಿ ಫಿಲ್ಮ್ ಚೇಂಬರ್ ನಲ್ಲಿ ನಿರ್ಮಾಪಕರ ಸಭೆ ಕರೆದಿದ್ದೇವೆ' ಎಂದಿದ್ದಾರೆ.
ಕ್ರಿಕೆಟ್ ಮ್ಯಾಚ್ ನಂತರದ ಕಿಚ್ಚ ಸುದೀಪ್ ಹೊಸ ಹೇರ್‌ಸ್ಟೈಲ್‌ಗೆ ಚಪ್ಪಾಳೆ ಸುರಿಮಳೆ!
'ಸಿನಿಮಾ ಬಿಡುಗಡೆ ವಿಚಾರವಾಗಿ ಚಿತ್ರಮಂದಿರಗಳ ಬಂದ್ ವಿಚಾರವಾಗಿ ಚರ್ಚೆ ಮಾಡುತ್ತೇವೆ. ದೊಡ್ಡ ನಟರು ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡೋ ಬಗ್ಗೆಯೂ ಚರ್ಚೆ ಆಗಿದೆ. ಚಿತ್ರಮಂದಿರದ ಮಾಲೀಕರು ಚಿತ್ರಮಂದಿರಗಳನ್ನು ಅನಿರ್ಧಿಷ್ಟ ಅವಧಿಗೆ ಬಂದ್ ಮಾಡೋ ಬಗ್ಗೆ ಮಾತನಾಡಿದ್ದಾರೆ. ಈ ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತೇವೋ ಅದಕ್ಕೆ ಬದ್ದರಾಗಿರುತ್ತೇವೆ ಎಂದಿದ್ದಾರೆ. ಚಿತ್ರರಂಗದ ಮೂಲಭೂತ ಸಮಸ್ಯೆಗಳಿವೆ.
ಮೋದಿ ಪಾತ್ರದ ಆಫರ್ ಬಗ್ಗೆ ನಟ ಸತ್ಯರಾಜ್ ಹೇಳಿಕೆಯೀಗ ಭಾರೀ ವೈರಲ್; ಹೀಗಂದ್ರಾ ನಟ?
ಚಿತ್ರಮಂದಿರಕ್ಕೆ ಜನ ಯಾಕೆ ಬರುತ್ತಿಲ್ಲ.? ಗಳಿಕೆ ಯಾಕೆ ಆಗ್ತಿಲ್ಲ..? ಕಂಟೆಂಟ್ ಸಿನಿಮಾಗಳು ಯಾಕೆ ಬರುತ್ತಿಲ್ಲ.? ದೊಡ್ಡ ನಟರ ಸಿನಿಮಾಗಳು ಯಾಕೆ ನೆಲ ಕಚ್ಚುತ್ತಿವೆ ಎಂಬ ಸಮಸ್ಯೆಗೂ ಪರಿಹಾರ ಹುಡುಕಬೇಕಾಗಿದೆ. ಟೆಲಿಗ್ರಾಂ ಅನ್ನೋ ಆ್ಯಪ್ ನಿಂದ ಸಿನಿಮಾಗಳು ಪೈರೆಸಿ ಆಗುತ್ತಿವೆ. ಪೈರೆಸಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ಗಮನ ಹರಿಸಬೇಕು. ಅದ್ರೆ ಟೆಲಿಗ್ರಾಂ ಅ್ಯಪ್ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಸರ್ಕಾರಕ್ಕೆ ಬರುವ ವರಮಾನದಲ್ಲಿ ನಷ್ಟ ಆಗ್ತಿದೆ.
ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್ ಮುಂದೂಡಿದ ಟೀಮ್!
ಈ ಬಗ್ಗೆ ಜ್ಞಾನ ಸರ್ಕಾರಕ್ಕೆ ಇಲ್ಲವಾಗಿದೆ. ಕೋವಿಡ್ ಸಮಯದಲ್ಲಿ ಚೀನಾ ಆ್ಯಪ್ ಗಳನ್ನ ಬ್ಯಾನ್ ಮಾಡಿದ್ರು. ಆದ್ರೆ ಟೆಲಿಗ್ರಾಂ ನಲ್ಲಿ ಸಿನಿಮಾ ಪೈರೆಸಿ ಆದ್ರೆ ಕೇಂದ್ರ ಕ್ರಮ ತೆಗೆದುಕೊಳ್ಳಲ್ಲ. ಈ ತರ ಆದಾಗ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಆಗಲ್ಲ. ಈ ತರಹದ ಮೂಲ ಭೂತ ಸಮಸ್ಯೆ ಇದೆ. ಇಂದು ಮಧ್ಯಾಹ್ನ 3 ಗಂಟೆಗೆ ನಡೆಯೋ ಸಭೆಯಲ್ಲಿ ತೆಗೆದುಕೊಳ್ಳೊ ತೀರ್ಮಾನದ ಮೇಲೆ ಚಿತ್ರಮಂದಿರಗಳ ಬಂದ್ ಬಗ್ಗೆ ತಿಳಿಯಲಿದೆ' ಎಂದಿದ್ದಾರೆ ಉಮೇಶ್ ಬಣಕಾರ್.