ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿ ಭಾನುಪ್ರಿಯಾ ಈಗ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ನೃತ್ಯದಲ್ಲೂ ಮಿಂಚಿದ್ದ ಭಾನುಪ್ರಿಯಾ, ಪತಿಯ ಅಗಲಿಕೆಯ ನಂತರ ಖಿನ್ನತೆಗೆ ಒಳಗಾಗಿದ್ದರು. ಚಿತ್ರರಂಗದಿಂದ ದೂರ ಸರಿದ ನಟಿ, ಈಗ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದಾರೆ. ವಯಸ್ಸಾದಂತೆ ಕಲಾವಿದರನ್ನು ಜನ ಮರೆಯುವ ದುರಂತದ ಉದಾಹರಣೆಯಿದು.

ಜೀವನವೇ ಹಾಗಲ್ಲವೆ? ಎತ್ತರಕ್ಕೆ ಏರಿದವ ದಿಢೀರ್​ ಇಳಿಯುತ್ತಾನೆ, ಯಾರಿಗೂ ಬೇಡ ಎಂದು ಪರಿಗಣಿಸ್ಪಟ್ಟವ ಒಂದು ದಿನ ದಿಢೀರ್​ ಶ್ರೀಮಂತನಾಗುತ್ತಾನೆ. ವಿಧಿಯಾಟವನ್ನು ಬಲ್ಲವರಾರು, ದೇವರ ಎದುರು ನಿಲ್ಲುವವರಾರು ಎನ್ನುವ ಮಾತೆಲ್ಲಾ ಇರುವುದು ಇದೇ ಕಾರಣಕ್ಕೆ. ಅದರಲ್ಲಿಯೂ ಬಣ್ಣದ ಲೋಕದ ಅಂದ ಕೆಲವೇ ಕೆಲವು ವರ್ಷ ಮಾತ್ರ. ಹಿಟ್​ ಚಿತ್ರಗಳನ್ನು ನೀಡುವಾಗ ಎಲ್ಲರೂ ಅವರ ಹಿಂದೆ ನಿಲ್ಲುವವರೇ, ಅವರ ಒಂದು ಝಲಕ್​ಗಾಗಿ ಪ್ರಾಣವನ್ನೂ ಬೇಕಿದ್ದರೆ ಪಣಕ್ಕಿಡುತ್ತಾರೆ. ಆದರೆ ವಯಸ್ಸಾದಂತೆ ಅವರು ತೆರೆಮರೆಯಲ್ಲಿ ಸರಿಯುತ್ತಿದ್ದಂತೆಯೇ, ಅವರ ಪ್ರಾಣ ಹೋದರೂ ನೋಡಲು ಬರುವವರೂ ಇರುವುದಿಲ್ಲ. ಕೆಲವು ಕಲಾವಿದರು ಬೀದಿ ಹೆಣವಾಗಿರುವ ಘಟನೆಗಳೂ ನಮ್ಮ ಕಣ್ಣಮುಂದೆ ಇವೆ. ಇದೇ ಬದುಕಿನ ಅತಿ ದೊಡ್ಡ ದುರಂತ.

ಈಗ ಹೇಳಹೊರಟಿರುವುದು ಅಪ್ರತಿಮ ಸುಂದರಿ, ಖ್ಯಾತ ಶಾಸ್ತ್ರೀಯ ನೃತ್ಯಗಾತಿ, ಚೆಲುವೆ ಭಾನುಪ್ರಿಯಾ ಅವರ ಬಗ್ಗೆ. ಇವರ ಒಂದು ನೋಟಕ್ಕೆ ಬಿದ್ದವರು ಅದೆಷ್ಟೋ ಮಂದಿ. ಕನ್ನಡ, ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟಿ ಅಭಿನಯಕ್ಕೆ ಮಾತ್ರವಲ್ಲದೇ ನೃತ್ಯದಿಂದಲೂ ಮೋಡಿ ಮಾಡಿದವರು. 1994ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅಭಿನಯದ 'ರಸಿಕ' (Rasika) ಚಿತ್ರ ನೋಡಿದವರಿಗೆ ಮುದ್ದುಮೊಗದ ನಾಯಕಿ ಭಾನುಪ್ರಿಯಾ ಅವರ ನೆನಪು ಮರೆಯಾಗಲು ಸಾಧ್ಯವೇ ಇಲ್ಲ. ಇದಾಗ ಮೇಲೆ 'ಕನ್ನಡದಲ್ಲಿ ದೇವರ ಮಗ',`ಸಿಂಹಾದ್ರಿಯ ಸಿಂಹ' (Simhadriya Simha),`ಕದಂಬ',`ಮೇಷ್ಟ್ರು' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಿಗ್​ಬಾಸ್​​ ಐಶ್ವರ್ಯ ಸಿಂಧೋಗಿ ಲವರ್​ ಹೆಸ್ರು ಬಾಯಿ ಬಿಟ್ರಾ? ನಾಚಿ ನಾಚಿ ನೀರಾದ ನಟಿ ಹೇಳಿದ್ದೇನು?

ಪ್ರಸಿದ್ಧ ಕೂಚುಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ 58 ವರ್ಷ ಪೂರೈಸಿರುವ ನಟಿ ಇದೀಗ ಜೀವನದ ಬಹುದೊಡ್ಡ ದುರಂತ ಎದುರಿಸುತ್ತಿದ್ದಾರೆ. ಸಂಪೂರ್ಣ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ನಟಿಯ ಬಾಳಲ್ಲಿ ದುರಂತಗಳ ಸರಮಾಲೆಯೇ ನಡೆದಿದೆ. ಕೆಲ ದಶಕಗಳವರೆಗೆ ಬಹುಭಾಷೆಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಕೊನೆಗೊಂದು ದಿನ ಚಿತ್ರರಂಗದಿಂದ ದೂರವಾಗಿಬಿಟ್ಟರು. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಭಾನುಪ್ರಿಯಾ (Bhanupriya) ಅವರ ಅಭಿಮಾನಿಗಳು ಕೆಲಕಾಲ ಆತಂಕಕ್ಕೂ ಒಳಗಾಗಿದ್ದರು. ಆದರೆ ಯಾವುದೇ ಕ್ಷೇತ್ರವಾದರೂ ಅಷ್ಟೇ ತಾನೆ? ಪ್ರಚಲಿತದಲ್ಲಿ ಇರುವಾಗ ಅಭಿಮಾನ, ಅದೂ, ಇದೂ ಎಂದೆಲ್ಲಾ ಒಂದಿಷ್ಟು ವರ್ಷ ಹೇಳಿದರೂ ನಂತರ ಅವರ ಬಗ್ಗೆ ಮರೆತೇ ಬಿಡುತ್ತಾರೆ. ಇಲ್ಲಿಯೂ ಹಾಗೆಯೇ ಆಯಿತು. ಭಾನುಪ್ರಿಯಾ ಅವರ ಬಗ್ಗೆ ಜನ ಮರೆತೇ ಬಿಟ್ಟರು.

1998ರಲ್ಲಿ ಭಾನುಪ್ರಿಯಾ ಸಿನಿಮಾಟೋಗ್ರಫರ್ ಆದರ್ಶ್ ಕೌಶಲ್ (Adarsh Koushak) ಕೈ ಹಿಡಿದಿದ್ದರು. 2005ರಲ್ಲಿ ಡಿವೋರ್ಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಕೆಲ ಕಾರಣಗಳಿಂದ ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದೇವೆ ಅಷ್ಟೇ. ವಿಚ್ಛೇದನ ಏನೂ ಆಗಲಿಲ್ಲ. ಡಿವೋರ್ಸ್ ಸುದ್ದಿಯೂ ಸುಳ್ಳು ಎಂದಿದ್ದರು. ಆದರೆ 2018 ಭಾನುಪ್ರಿಯಾ ಅವರ ಜೀವನದಲ್ಲಿ ಬಹುದೊಡ್ಡ ಆಘಾತವಾಗಿ ಹೋಯಿತು. ಅವರ ಪತಿ ಆದರ್ಶ್​ ಅವರು ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದರು. ಪತಿಯ ಸಾವಿನ ಬಳಿಕ ನಟಿ ಭಾನುಪ್ರಿಯಾ ಖಿನ್ನತೆಗೆ ಜಾರಿಹೋದರು. ಇದೀಗ ಅದೇ ನೋವಿನಿಂದ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ನಟಿ, ಯಾರನ್ನೂ ಗುರುತಿಸುವ ಹಂತದಲ್ಲಿ ಇಲ್ಲ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ, ಪತಿಯ ಅಗಲಿಕೆ ನಂತರ ನಾನು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದೆ. ಏಕೋ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅವರ ಸಾವಿನ ಶಾಕ್​ನಿಂದ ನಾನು ಹೊರಬರುವುದು ಕಷ್ಟವೇ ಆಗಿಹೋಯಿತು. ಆರೋಗ್ಯ ಸಮಸ್ಯೆ ತಲೆದೋರಿತು. ಕ್ರಮೇಣ ಈಗ ನೆನಪಿನ ಶಕ್ತಿ ಕುಂದುತ್ತಾ ಬಂದಿದೆ ಎಂದು ನಟಿ ಹೇಳಿಕೊಂಡಿದ್ದರು. ಆದರೆ ಇದೀಗ ಜಾಸ್ತಿಯಾಗಿದೆ. 

ಶ್ರೀದೇವಿ ಸಾವಿಗೆ 7 ವರ್ಷ: ಸ್ವಂತ ತಂಗಿಗೇ ನಟಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?