ದೇವ್ರು ರಾಜರು 2-3 ಮದ್ವೆ ಆಗಿಲ್ವಾ?; ಪವಿತ್ರಾ ಲೋಕೇಶ್‌ 3ನೇ ಮದುವೆ ಗಾಸಿಪ್‌ಗೆ ಸಿಕ್ಕ ಉತ್ತರವಿದು

ಎರಡು ಮೂರು ಮದುವೆ ಆಗೋದು ಸರಿ ಅಲ್ಲ ಹಾಗೆ ಹೀಗೆ ಎಂದು ಕೊಂಕು ಮಾಡುವವರಿಗೆ ಪ್ರೆಸ್‌ಮೀಟ್‌ನಲ್ಲಿ ಉತ್ತರ ಕೊಟ್ಟ ನರೇಶ್.. 

Matte maduve Naresh justifies live in relationship with pavitra lokesh vcs

ಪವಿತ್ರಾ ಲೋಕೇಶ್ ಮತ್ತು ನರೇಶ್ ನಟಿಸಿರುವ ಮತ್ತೆ ಮದುವೆ ಸಿನಿಮಾ ಪ್ರೆಸ್ ಮೀಟ್ ಅದ್ಧೂರಿಯಾಗಿ ನಡೆಯಿತ್ತು. ವೈಯಕ್ತಿಕ ಜೀವನದ ಜಂಜಾಟಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದೀವಿ ಎಂದು ಬಹಿರಂಗವಾಗಿಯೂ ಒಪ್ಪಿಕೊಂಡಿದ್ದಾರೆ ಆದರೆ ನೆಟ್ಟಿಗರಿಗೆ ಸಿಟ್ಟು ತರಿಸಿರುವ ವಿಚಾರ ಏನೆಂದರೆ ದೇವರು ರಾಜರು ವಿಚಾರಕ್ಕೆ ಕಂಪೇರ್ ಮಾಡಿಕೊಂಡಿರುವುದು....

'ದೇವರಿಗೆ ರಾಜರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರು ಇರುತ್ತಿದ್ದರು. ಸ್ವಾತಂತ್ರ್ಯ ಬರುವರೆಗೂ ಸಾಕಷ್ಟು ಜನರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರು ಇದ್ದರು. ಆದರೆ ಈಗ ನಾವು ಮದುವೆಯನ್ನು ಗೌರವಿಸುತ್ತೇವೆ. ಲಿವ್‌ ಇನ್‌ ಟುಗೆದರ್‌ನ ಒಪ್ಪಿಕೊಳ್ಳುತ್ತೇವೆ. ಕಾನೂನನ್ನು ಜೀವನಕ್ಕೆ ಫಿಕ್ಸ್‌ ಮಾಡೋಕೆ ಸಾಧ್ಯವಿಲ್ಲ. ಇದು ಬದಲಾಗುತ್ತಿರುತ್ತದೆ. ನಾವು ಬದಲಿಸಲೇಬೇಕು. ಬಹುಪತ್ನಿತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಆದರೆ ಜನರು ತಮ್ಮಿಷ್ಟಕ್ಕೆ ತಕ್ಕಂತೆ ಬದುಕುವ ಸ್ವಾತ್ರಂತ್ರ ಇದೆ' ಎಂದು ಪ್ರೆಸ್‌ಮೀಟ್‌ನಲ್ಲಿ ನರೇಶ್ ಮಾತನಾಡಿದ್ದಾರೆ. 

ಪವಿತ್ರಾ ಲೋಕೇಶ್ 'ಮತ್ತೆ ಮದುವೆ'?; ನರೇಶ್‌ ಜೊತೆ ಲೀವಿಂಗ್‌ ರಿಲೇಶನ್‌ಶಿಪ್‌ ನಿಜವೇ?

'ಸುಪ್ರೀಂ ಕೋರ್ಟ್‌ ಕೂಡ ಈ ಬಗ್ಗೆ ತೀರ್ಪು ನೀಡಿದೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಯಾಕೆ ಅಂದುಕೊಳ್ಳುತ್ತೀರಾ? ನಾವಿಬ್ಬರು ಸಹಜೀವನ ನಡೆಸುತ್ತಿದ್ದೇವೆ. ಬಹಳ ಖುಷಿಯಾಗಿದ್ದೇವೆ ಎಂದು ಪವಿತ್ರಾ ಲೋಕೇಶ್‌ ಕೈ ಹಿಡಿದು ನರೇಶ್‌ ಹೇಳಿದ್ದಾರೆ. ಈ ಸಿನಿಮಾ ಪ್ರಪಂಚ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಕುರಿತಾಗಿ ಮಾಮಾಡಿದ್ದೇವೆ. 50% ದಂಪತಿಗಳು ಸಮಾಜಕ್ಕೆ ಹೆದರಿ ಬಲವಂತವಾಗಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಬಹಳ ಕಿರುಕುಳಗಳ ನಡುವೆಯೂ ಒಟ್ಟಿಗೆ ಜೀವಿಸುತ್ತಿದ್ದಾರೆ. ಕೆಲವರು ಧೈರ್ಯವಾಗಿ ಹೊರ ಬರುತ್ತಿದ್ದಾರೆ' ಎಂದು ನರೇಶ್ ಹೇಳಿದ್ದಾರೆ. 

'ಕಾನೂನು ನಿಮ್ಮ ಜೀವನವನ್ನು ಸಾಗಿಸುವ ಹಕ್ಕು ನೀಡಿದೆ. ಸುಪ್ರೀಂ ಕೋರ್ಟ್‌ ಕೂಡ ಇದನ್ನು ಹೇಳಿದೆ. ಇರುವುದು ಒಂದೇ ಜೀವನ ಆ ಒಂದು ಜೀವನವನ್ನು ನೀವು ಖುಷಿಯಾಗಿ ಕಳೆಯಬೇಕು, ಸುತ್ತ ಇರುವವರಿಗೂ ಖುಷಿ ಹಂಚಬೇಕು. ನಮ್ಮನ್ನು ಮದುವೆಯಾಗಿದೆ ಅಂತ ಹೇಳಿದ್ರು ..ಆಗ ನಾನು ಮದುವೆ ಅಂದ್ರೆ ಏನು ಎಂದು ಪ್ರಶ್ನೆ ಮಾಡಿದೆ. ತಾಳಿ ಹಾಕಿಕೊಳ್ಳುವುದು ಉಂಗುರ ಹಾಕಿಕೊಳ್ಳೋದು ಮದುವೆನಾ? ನಮ್ಮ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಇದೆಲ್ಲಾ ಸಾಂಕೇತಿಕ ಅಷ್ಟೇ. ಮದುವೆ ಅಂದರೆ ಎರಡು ಹೃದಯಗಳು ಒಂದಾಗಬೇಕು. ನಮ್ಮ ಹೃದಯಗಳಿಗೆ ಮದುವೆ ಆಗಿದೆ. ನಾವು ಖುಷಿಯಾಗಿದ್ದೆವೆ. ನಾವು ಮದುವೆ ಅನ್ನೋ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಈ ಸಿನಿಮಾದಲ್ಲೂ ಅದನ್ನೇ ಹೇಳಿದ್ದೇವೆ. ಸುಪ್ರೀಂ ಕೋರ್ಟ್‌ ಕೂಡ ಲಿವಿಂಗ್‌ಟು ಗೆದರ್‌ ಮದುವೆಗೆ ಸಮಾನ ಎಂದು ಹೇಳಿದೆ. ಸಮಾಜ ಬದಲಾಗುತ್ತಿದೆ' ಎಂದಿದ್ದಾರೆ ನರೇಶ್. 

ನರೇಶ್​, ಪವಿತ್ರಾ ಲೋಕೇಶ್​ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​- ಕಿಸ್ಸಿಂಗ್​ ಟೀಸರ್​ ಬಿಡುಗಡೆ

'ನನಗೆ ಕನ್ನಡ ಸ್ವಲ್ಪ ಗೊತ್ತು. ಮತ್ತೆ ಮದುವೆ ಚಿತ್ರಕ್ಕೆ ನಾನು ಕನ್ನಡದಲ್ಲಿ ಡಬ್ ಮಾಡಿದ್ದೀನಿ. ಕನ್ನಡ ತೆಲುಗು ಸಿನಿಮಾರಂಗ ಅಕ್ಕ ತಂಗಿ ಇದ್ದಂತೆ. ಆರಂಭದಿಂದಲ್ಲೂ ಕನ್ನಡ ಚಿತ್ರರಂಗದ ಜೊತೆ ನನಗೆ ಒಳ್ಳೆಯ ಸ್ನೇಹವಿದೆ. ಶಿವಣ್ಣ ನನ್ನ ಸ್ಕೂಲ್‌ನಲ್ಲಿ ನನ್ನ ಕ್ಲಾಸ್‌ಮೆಟ್ ಆಗಿದ್ದರು. ಅಂಬರೀಶ್ ಮತ್ತು ಸುಮಲತಾ ಕೂಡ ನನಗೆ ತುಂಬಾ ಆತ್ಮೀಯರು. ಮತ್ತೆ ಮದುವೆ ಸಿನಿಮಾದಲ್ಲಿ ಐದು ಬೆಸ್ಟ್‌ ಹಾಡುಗಳು ಇದೆ ಏಕೆಂದರೆ ಇದೊಂದು ಎಮೋಷನಲ್ ಸಿನಿಮಾ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನನ್ನ ಪ್ರಯಾಣ ಶುರುವಾಗಲಿದೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ ನೀವಿಬ್ಬರು ಮದುವೆ ಆಗಿದ್ದೀರಾ ಅಂತ ಕೇಳಿದ್ದಾರೆ ನನ್ನ ಪ್ರಕಾರ ಮದುವೆ ಅನ್ನೋದು ಹೃದಯದಲ್ಲಿ ಇದ್ದರೆ ಸಾಕು ಅದನ್ನು ತೋರಿಸಿಕೊಳ್ಳಲು ತಾಳಿ ಉಂಗುರ ಬೇಕಿಲ್ಲ...ನಾನು ಪವಿತ್ರ ಲೋಕೇಶ್‌ ಲೀವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದೀವಿ' ಎಂದು ನರೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios