Asianet Suvarna News Asianet Suvarna News

ಜೀವಂತವಾಗಿದ್ದೂ ಸುಳ್ಳು ಹೇಳಿದ ಪೂನಂ ಪಾಂಡೆಗೆ ಛೀ ಥೂ ಎಂದು ಹಿಗ್ಗಾಮುಗ್ಗಾ ಉಗಿಯುತ್ತಿರುವ ನೆಟಿಜನ್ಸ್‌

ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಅವರೇ ಹೇಳುವ ಮೂಲಕ ಸಹಜವಾಗಿಯೇ ಸುದ್ದಿಯಾಗಿತ್ತು. ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು.

I am alive, I have done it for cancer awareness says Controversial bollywood actress Poonam Pandey srb
Author
First Published Feb 3, 2024, 12:56 PM IST

ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಬದುಕಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ನಟಿ ಪೂನಂ ಪಾಂಡೆ ಪ್ರಚಾರ ಪಡೆಯಲು ಯತ್ನಿಸಿದ್ದಾರೆ ಎನ್ನಬಹುದು. 'ನಾನು ಬದುಕಿದ್ದೇನೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹೀಗೆ ಮಾಡಿದೆ ಎಂದರು ಪೂನಂ. ನಿನ್ನೆ ಇಡೀ ದಿನ ನಟಿ ಪೂನಂ ಪಾಂಡೇ ಸತ್ತು ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹೀಗೆ ಮಾಡಿದೆ, ನಾನು ಸತ್ತು ಹೋಗಿಲ್ಲ ಬದುಕಿದ್ದೇನೆ ಎಂದು ನಟಿ ಪೂನಂ ಪಾಂಡೇ ಹೇಳಿದ್ದಾರೆ. 

ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಅವರೇ ಹೇಳುವ ಮೂಲಕ ಸಹಜವಾಗಿಯೇ ಸುದ್ದಿಯಾಗಿತ್ತು. ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಆದರೆ, ಅದು ಉದ್ದೇಶಪೂರ್ವಕ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಗರ್ಭಕೋಶದ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ನಾನೇ ನನ್ನ ಸೋಷಿಯಲ್ ಮೀಡಿಯಾ ಮೂಲಕ ಹೀಗೆ ಪೋಸ್ಟಾ ಮಾಡಿದ್ದೇನೆ ಎಂದು ನಟಿ ಪೂನಂ ಪಾಂಡೆ ಹೇಳಿದ್ದಾರೆ. 

ಹೊಟೆಲ್ ಭಟ್ಟ ಸುಬ್ಬಣ್ಣನಾದ್ರು ರಂಗಾಯಣ ರಘು; ಮಲೆನಾಡಿನ ಹಳ್ಳಿಯಲ್ಲಿ ಸಾಗುವ 'ಶಾಖಾಹಾರಿ' ಕಥೆ !

ಆದರೆ, ನಿನ್ನೆ ಆಕೆಯ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ನ್ಯೂಸ್ ನೋಡಿದಾಗಲೇ ಮೀಡಿಯಾಗಳಿಗೆ ಸಂಶಯ ಬಂದಿತ್ತು. ಕಾರಣ, ಮೊನ್ನೆಯಷ್ಟೇ ಆಕೆ ಹುಶಾರಾಗಿದ್ದು ಯಾವುದೋ ಫಂಕ್ಷನ್‌ನಲ್ಲಿ ಪಾಲ್ಗೊಂಡಿದ್ದಾರೆ. ನಿನ್ನೆ ಇದ್ದಕ್ಕಿದ್ದಂತೆ ಸತ್ತು ಹೋಗಿದ್ದೇನೆ ಎಂದರೆ ನಂಬುವುದಕ್ಕೆ ಸ್ವಲ್ಪ ಕಷ್ಟವೇ ಆಗಿತ್ತು. ಆದರೂ ಕೂಡ, ಆಕೆಯ ಅಧಿಕೃತ ಪೇಜ್‌ನಿಂದಲೇ ಸುದ್ದಿ ಬಂದಿದ್ದರಿಂದ ಯಾರೋ ಆಕೆಯ ಆಪ್ತರು ಪೋಸ್ಟ್‌ ಮಾಡಿರಬೇಕೆಂದು ಎಲ್ಲರೂ ಅಂದುಕೊಳ್ಳುವಂತಾಗಿದೆ. 

ಸತ್ತೆನೆಂದು ಹೇಳಿ ಮೂರ್ಖರನ್ನಾಗಿ ಮಾಡಿದ್ರಾ ಪೂನಂ ಪಾಂಡೆ? ಕೆಲ ದಿನಗಳ ಹಿಂದಷ್ಟೇ ನಟಿ ಹೇಳಿದ್ದೇನು?

ಅದರೆ, ನಟಿ ಪೂನಂ ಪಾಂಡೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ಮೀಡಿಯಾಗಳು ಸೇರಿದಂತೆ ಜಗತ್ತನ್ನೇ ಮರುಳು ಮಾಡಲು ಯತ್ನಿಸಿದ್ದಾರೆ ಎನ್ನಬಹುದು. ಹೀಗೆ ಸುಳ್ಳು ಹೇಳಿ ಸುದ್ದಿ ಹಬ್ಬಿಸಿರುವ ನಟಿ ಪೂನಂ ಪಾಂಡೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಜನರು ಛೀ ಥೂ ಎಂದು ಉಗಿಯತೊಡಗಿದ್ದಾರೆ. ಇನ್ನು ಪೂನಂ ಪಾಂಡೆ ಏನು ಹೇಳಿದರೂ ನಂಬುವುದಿಲ್ಲ ಎಂದೂ ಕೆಲವರು ಹೇಳಿದ್ದಾರೆ.

Follow Us:
Download App:
  • android
  • ios