ಹೊಸ ಪ್ರತಿಭೆಗಳೇ ಸೇರಿಕೊಂಡು ರೂಪಿಸಿರುವ 32 ನಿಮಿಷಗಳ ಚಿತ್ರ ‘ಮಾಸ್ಟರ್ ಮೈಂಡ್’ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ.
ಶಿವರಾಜ್‌ಕುಮಾರ್ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಚನೆ ಹಾಗೂ ನಿರ್ದೇಶನ ಮಾಡಿರುವುದು ಎ.ವಿ.ಸುರೇಶ್. ಇಬ್ಬರು ರೌಡಿಗಳ ರಾಜಕೀಯ ದೊಂಬರಾಟ ಜತೆಗೆ ಮಹಿಳಾ ಪ್ರಧಾನ ಅಂಶಗಳನ್ನು ಒಳಗೊಂಡ ಕತೆ ಇಲ್ಲಿದೆ.
ಅಶೋಕ್ ಎನ್ ಶಿಂಧೆ ನಿರ್ಮಾಣದ ಈ ಚಿತ್ರದಲ್ಲಿ ಅನಂತು ವಾಸುದೇವ್, ಹಿಮಾ ಮೋಹನ್, ಬಲರಾಂ, ಎ.ವಿ. ಸುರೇಶ್, ನಿಹಾಲ್ ಗೌಡ, ಸದಾನಂದ ಗೌಡ, ಕುಶಾಲ್ ನಟಿಸಿದ್ದಾರೆ. ‘ನಮ್ಮ ಈ ಚಿತ್ರವನ್ನು ಪ್ರೊಡ್ಯೂಸರ್ ಪೊ್ರೀಮೋ ಮೂವಿ(ಪಿಪಿಎಂ) ಯೋಜನೆಯಲ್ಲಿ ಶುರು ಮಾಡಲಾಗಿದೆ. ಹೊಸಬರು ಚಿತ್ರ ಮಾಡಿದ ನಂತರ ಏನು ಮಾಡಬೇಕು, ಯಾರಿಗೆ ತೋರಿಸಬೇಕು ಇತ್ಯಾದಿ ಗೊಂದಲದಲ್ಲಿ ಇರುತ್ತಾರೆ. ಅಂತಹವರು ಚಿತ್ರವನ್ನು ಆನಂದ್ ಆಡಿಯೋ ಸಂಸ್ಥೆಗೆ ಕೊಡುವಾಗ ಪಿಪಿಎಂ ಜಾನರ್ ಅಡಿಯಲ್ಲಿ ಪ್ರಸಾರ ಮಾಡಲು ಕೋರಿಕೊಳ್ಳಬೇಕಾಗುತ್ತದೆ.
ಆ್ಯಕ್ಷನ್ ಹೀರೋ ರಾಣ ಆದ ಶ್ರೇಯಸ್; ನಂದಕಿಶೋರ್ ಹಸನ್ಮುಖ, ಕೆ.ಮಂಜು ಭಾವುಕ
ಅವರು ಅದೇ ವಿಭಾಗದಲ್ಲಿ ಪ್ರಸಾರ ಮಾಡುತ್ತಾರೆ. ಇದನ್ನು ನೋಡಿದ ನಿರ್ಮಾಪಕರು ಇಷ್ಟವಾದರೆ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬರುವುದರಿಂದ ತಂತ್ರಜ್ಞರು, ಕಲಾವಿದರುಗಳಿಗೆ ಅವಕಾಶ ಸಿಕ್ಕಂತೆ ಆಗುತ್ತದೆ. ಇದೊಂದು ಹೊಸ ರೀತಿಯ ಯೋಜನೆ. ಇದು ಎಲ್ಲರಿಗೂ ಗೊತ್ತಾಗಬೇಕು. ಆ ಉದ್ದೇಶದಿಂದ ಈ ಚಿತ್ರವನ್ನು ರೂಪಿಸಿದ್ದೇವೆ’ ಎಂದರು ನಿರ್ದೇಶಕ ಎ.ವಿ. ಸುರೇಶ್. ಅತಿಥಿಯಾಗಿ ಆಗಮಿಸಿದ್ದ ಉಮೇಶ್ ಬಣಕಾರ್ ಚಿತ್ರತಂಡಕ್ಕೆ ಶುಭ ಕೋರಿದರು.

