ರಾಣಾ-ರಕ್ಷಿತಾ ಮದುವೆಗೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ವೇಳೆ ಮಾಸ್ಟರ್ ಕಿಶನ್-ರಮ್ಯಾ ಭೇಟಿಯಾಗಿದೆ. ಹೌದು, ʼಎಕ್ಸ್‌ಕ್ಯೂಸ್ ಮೀʼ ಸಿನಿಮಾದಲ್ಲಿ ನಟಿಸಿದ್ದ ಕಿಶನ್-ರಮ್ಯಾ ಅವರು ಮತ್ತೆ ಮುಖಾಮುಖಿಯಾಗಿದ್ದಾರೆ.
2003ರಲ್ಲಿ ತೆರೆ ಕಂಡಿದ್ದ ʼExcuse Me Movieʼ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ಹಾಡುಗಳನ್ನು ಜನರು ಇಂದಿಗೂ ಗುನುಗುತ್ತಿರುತ್ತಾರೆ. ಇನ್ನು ಈ ಸಿನಿಮಾದ ಕೆಲ ಸೀನ್‌ಗಳು ಇಂದಿಗೂ ವೀಕ್ಷಕರಿಗೆ ನಗು ತರಿಸುತ್ತವೆ, ಎಮೋಶನಲ್ ಆಗಿ ಮಾಡಿಬಿಡುತ್ತವೆ. ಪ್ರೇಮ್ ಅವರು ಸುಂದರವಾದ ಪ್ರೇಮಕಥೆಯನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ರಮ್ಯಾ-ಕಿಶನ್ ನಡುವೆ ನಡೆದಿದ್ದ ಸಂಭಾಷಣೆ ಈಗ ಮತ್ತೆ ವೈರಲ್ ಆಗಿದೆ.
ಈ ಸಿನಿಮಾದಲ್ಲಿ ಯಾರು ನಟಿಸಿದ್ದರು?
ʼಎಕ್ಸ್‌ಕ್ಯೂಸ್ ಮೀʼ ಸಿನಿಮಾದಲ್ಲಿ ನಟಿ ರಮ್ಯಾ ಹೀರೋಯಿನ್ ಆದ್ರೆ, ಅಜಯ್ ರಾವ್, ಸುನೀಲ್ ರಾವ್ ಹೀರೋಗಳಾಗಿದ್ದರು. ʼಜೋಗಿʼ ಪ್ರೇಮ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಮಾಸ್ಟರ್ ಕಿಶನ್ ನಟಿಸಿದ್ದರು. ಅಂದು ಕಿಶನ್-ರಮ್ಯಾ ನಡುವೆ ಒಂದೆರಡು ಸೀನ್ ಇತ್ತು.
'ಕಡ್ಲೇ ಬೀಜ'ದ ಕಥೆ ಇನ್ನ ಮುಗಿದಿಲ್ವಾ...? ಅವಮಾನ ಎದುರಿಸಿದ್ದೇನೆ ಅಂದಿದ್ಯಾಕೆ ಲೂಸ್ ಮಾದ..!?
ಆ ದೃಶ್ಯದಲ್ಲಿ ಏನಿತ್ತು?
ಕಿಶನ್ ಮನೆ ಮುಂದೆ ಬಂದ ರಮ್ಯಾ ಬರುತ್ತಾರೆ. ತಾನು ಇಷ್ಟಪಟ್ಟ ಮ್ಯೂಸಿಕ್ ಡೈರೆಕ್ಟರ್ ಮುಖವನ್ನು ರಮ್ಯಾ ನೋಡಿರೋದಿಲ್ಲ. ಆದರೆ ಅವನ ಮನೆಯನ್ನು ರಮ್ಯಾ ನೋಡಿರುತ್ತಾರೆ. ರಮ್ಯಾ ಆ ಮನೆಗೆ ಬಂದು ಸ್ಕೂಟಿ ಕೆಟ್ಟೋಗಿರುವ ರೀತಿ ನಾಟಕ ಮಾಡ್ತಾಳೆ. ಆಗ ಕಿಶನ್ ಎಂಟ್ರಿ ಆಗುತ್ತದೆ. “ಅವತ್ತು ಬಂದು ಮ್ಯೂಸಿಕ್ ಡೈರೆಕ್ಟರ್ ಮನೆ ಇದೇನಾ ಅಂತ ಕೇಳಿದೆ. ಇವತ್ತು ಸ್ಕೂಟಿ ಕೆಟ್ಟೋಗಿದೆ ಅಂತ ನಾಟಕ ಮಾಡ್ತಿದ್ದೀಯಾ? ಸ್ಕೂಟಿ ಈ ಮನೆ ಮುಂದೆ ಕೆಟ್ಟೋಗಬೇಕಾ?” ಅಂತೆಲ್ಲ ಕಿಶನ್ ಹೇಳುತ್ತಾರೆ. ಆಗ ರಮ್ಯಾ ಮಾತಿಗೆ ಮಾತು ಆಡುತ್ತಾರೆ. ಅಷ್ಟೇ ಅಲ್ಲದೆ “ಚೋಟುದ್ದ ಇದ್ಯಾ? ಇಷ್ಟೊಂದು ಮಾತಾಡ್ತೀಯಾ” ಅಂತ ರಮ್ಯಾ ಹೇಳುತ್ತಾರೆ.
ರಾಣಾ ಮದುವೆಯಲ್ಲಿ ಕಿಶನ್, ರಮ್ಯಾ!
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ರಮ್ಯಾ ಆಗಮಿಸಿದ್ದರು. ರಕ್ಷಿತಾ ಹಾಗೂ ರಮ್ಯಾ ಒಂದು ಕಾಲಕ್ಕೆ ಬೇಡಿಕೆಯ ಹೀರೋಯಿನ್‌ಗಳು. ಕೆಲ ಕಾಲ ಇವರ ಮಧ್ಯೆ ಮನಸ್ತಾಪ ಉಂಟಾಗಿತ್ತು ಎಂಬ. ಈಗ ಇವರಿಬ್ಬರು ಸ್ನೇಹದಿಂದ ಇದ್ದಾರೆ. ಈ ವೇಳೆ ಮಾಸ್ಟರ್ ಕಿಶನ್ ಕೂಡ ಮದುವೆಗೆ ಆಗಮಿಸಿದ್ದರು. ಅಂದು ಚೋಟುದ್ದ ಇದ್ದ ಮಾಸ್ಟರ್ ಕಿಶನ್ ಇಂದು ರಮ್ಯಾ ಅವರಿಗಿಂತಲೂ ಎತ್ತರವಾಗಿದ್ದಾರೆ.
ನಾನು ಈ ರೀತಿ ಆಗುವುದಕ್ಕೆ ಕಾರಣ ನಟಿ ರಮ್ಯಾ: ರಾಧಿಕಾ ಕುಮಾರಸ್ವಾಮಿ ಮಾತೀಗ ವೈರಲ್
ವಿಡಿಯೋ ವೈರಲ್!
ಈ ಸಿನಿಮಾ ರಿಲೀಸ್ ಆಗಿ ಇಷ್ಟು ವರ್ಷಗಳ ಬಳಿಕ ರಮ್ಯಾ, ಕಿಶನ್ ಭೇಟಿ ಆಗಿತ್ತು. ಆ ವೇಳೆ ಇವರಿಬ್ಬರು ʼಎಕ್ಸ್‌ಕ್ಯೂಸ್ ಮೀʼ ಸಿನಿಮಾ ಡೈಲಾಗ್ ಮರುಸೃಷ್ಟಿ ಮಾಡಿದ್ದಾರೆ. ಆ ವೇಳೆ ರಮ್ಯಾಗೆ ಈ ಡೈಲಾಗ್ ಮರೆತು ಹೋದಂತಾಗಿತ್ತು. ʼಚೋಟುದ್ದ ಇದ್ಯಾ? ಎಷ್ಟೊಂದ್ ಮಾತಾಡ್ತೀಯಾ?ʼ ಅಂತ ಡೈಲಾಗ್ ಹೇಳೋಕೆ ಅವರು ಎರಡು ಟೇಕ್ ತಗೊಂಡರು. ಈ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗ್ತಿದೆ. ಇಷ್ಟು ವರ್ಷಗಳ ಬಳಿಕ ರಮ್ಯಾ, ಕಿಶನ್ ಭೇಟಿಯಾಗಿರೋದು ಇವರಿಬ್ಬರಿಗೂ ಖುಷಿ ಆಗಿದೆ. ಸದ್ಯ ರಮ್ಯಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಇನ್ನೊಂದು ಕಡೆ ಕಿಶನ್ ಅವರು ಸಿನಿಮಾ ರಂಗದಲ್ಲಿ ಇನ್ನಷ್ಟು ಬ್ಯುಸಿಯಾಗ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಮದುವೆ, ಆರತಕ್ಷತೆಯಲ್ಲಿ ಗಣ್ಯರು ಭಾಗಿ!
ಅಂದಹಾಗೆ ರಾಣಾ ಆರತಕ್ಷತೆಗೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ, ಕಿಚ್ಚ ಸುದೀಪ್, ಶರ್ಮಿಳಾ ಮಾಂಡ್ರೆ, ತರುಣ್ ಸುಧೀರ್, ಮೇಘನಾ ರಾಜ್, ಕಿಚ್ಚ ಸುದೀಪ್-ಪ್ರಿಯಾ, ವಸಿಷ್ಠ ಸಿಂಹ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಹೇಮಾ ಚೌಧರಿ ಮುಂತಾದವರು ಆಗಮಿಸಿದ್ದರು.
