ಮಾಸ್ಟರ್ ಆನಂದ್ ಅವರು ಕೆಟ್ಟ ಕಮೆಂಟ್ ಹಾಕುವವರಿಗೆ ರಾಜನ ಕಥೆಯನ್ನು ಹೇಳುವ ಮೂಲಕ, ಏನು ಹೇಳಿದ್ದಾರೆ ನೋಡಿ...
ಆ ಊರಲ್ಲೊಬ್ಬ ರಾಜ. ಸಾವಿರಾರು ಮಂದಿಗೆ ಅಡುಗೆ ಮಾಡಿಸಿದ್ದ. ಅನ್ನಸೇವೆ ಮಾಡಬೇಕು ಎನ್ನುವುದು ಅವನ ಆಸೆಯಾಗಿತ್ತು. ತೆರೆದ ಜಾಗದಲ್ಲಿ ನೂರಾರು ಬಾಣಸಿಗರು ಪದಾರ್ಥ ರೆಡಿ ಮಾಡುತ್ತಿದ್ದರು. ಆಗ ಮೇಲೆ ಗರುಡ ಒಂದು ಹಾವನ್ನು ಕಚ್ಚಿಕೊಂಡು ಹೋಗುತ್ತಿತ್ತು. ಹಾವಿನ ವಿಷ ಈ ಅಡುಗೆಯ ಮೇಲೆ ಬಿತ್ತು. ಅದು ಯಾರಿಗೂ ತಿಳಿಯಲೇ ಇಲ್ಲ. ಊಟ ಮಾಡಿದ ಸಾವಿರಾರು ಮಂದಿ ಪ್ರಾಣ ತೆತ್ತರು. ಆಗ ಚಿತ್ರಗುಪ್ತನಿಗೆ ತಲೆನೋವು ಶುರುವಾಯಿತು. ಈ ಸಾವಿರಾರು ಮಂದಿ ಸಾವಿಗೆ ಯಾರನ್ನು ಫಿಕ್ಸ್ ಮಾಡುವುದು ಎಂದು. ಗರುಡನನ್ನೋ, ಹಾವನ್ನೋ, ರಾಜನನ್ನೋ, ಬಾಣಸಿಗರನ್ನೋ ಯಾರನ್ನು ಫಿಕ್ಸ್ ಮಾಡುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ... ಎನ್ನುತ್ತಲೇ ನಟ ಮಾಸ್ಟರ್ ಆನಂದ್ ತಮ್ಮ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಯಾರದ್ದೇ ವಿರುದ್ಧ ಕಮೆಂಟ್ ಮಾಡುವವರಿಗೆ ತಿವಿದಿದ್ದಾರೆ! Rapdi Rashmi ಷೋನಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ರಾಜ ಈ ಕಥೆಯನ್ನು ಮುಂದುವರೆಸಿದ ಆನಂದ್, ಇಲ್ಲಿ ಯಾರನ್ನೂ ಫಿಕ್ಸ್ ಮಾಡುವಂತೆ ಇರಲಿಲ್ಲ. ಗರುಡನ ಆಹಾರ ಹಾವು. ಅದು ತನ್ನ ಕೆಲಸ ಮಾಡಿದೆ. ಹಾವಿಗೆ ವಿಷ ಇರುವುದು ಅಪರಾಧವಲ್ಲ, ಅಡುಗೆ ಭಟ್ಟರು ತಮ್ಮ ಕೆಲಸ ಮಾಡಿದ್ದಾರೆ. ರಾಜನಿಗೆ ರಾಜ್ಯದ ಪ್ರಜೆಗಳಿಗೆ ಅನ್ನದಾನ ಮಾಡಬೇಕು ಎನ್ನುವ ಮಹದಾಸೆಯಿಂದ ಮಾಡಿದ್ದಾನೆ. ಯಾರದ್ದೂ ತಪ್ಪಲ್ಲ, ಹಾಗಿದ್ದರೆ ಯಾರನ್ನಾದರೂ ಫಿಕ್ಸ್ ಮಾಡಬೇಕಲ್ಲವೇ ಎನ್ನುತ್ತ ದಿನ ಕಳೆದ. ಅದೊಂದು ದಿನ ಅದೇ ಊರಿನ ಮುಖ್ಯ ದ್ವಾರದಲ್ಲಿ ಅಜ್ಜಿಯೊಬ್ಬಳು ಕುಳಿತಿದ್ದಳು. ಆ ಊರಿಗೆ ಬರುವವರನ್ನೆಲ್ಲಾ ಆಕೆ ತಡೆದು ಪ್ರಶ್ನೆ ಮಾಡುತ್ತಿದ್ದಳು. ಆ ಜನರು ನಾನು ರಾಜನ ಬಳಿ ಹೋಗುತ್ತಿದ್ದೇವೆ ಎಂದೋ, ಊಟ ಮಾಡಲು ಹೋಗುತ್ತಿದ್ದೇವೆ ಎಂದೋ ಹೇಳಿದಾಗ ಅಜ್ಜಿ ಬೇಡ, ಬೇಡ.. ಆ ರಾಜ ಹಾಕೋ ಊಟದಲ್ಲಿ ವಿಷ ಇರುತ್ತೆ. ಸಾವಿರಾರು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಎಲ್ಲರನ್ನೂ ವಾಪಸ್ ಕಳಿಸುತ್ತಿದ್ದಳು. ಕೊನೆಗೆ ಈ ಇಡೀ ಸಾವಿನ ಪ್ರಕರಣದಲ್ಲಿ ಯಾರನ್ನು ಫಿಕ್ಸ್ ಮಾಡಬೇಕು ಎನ್ನುವುದು ಚಿತ್ರಗುಪ್ತನಿಗೆ ತಿಳಿದೇ ಬಿಟ್ಟಿತು, ಹಿಂದೆ ಮುಂದೆ ಗೊತ್ತಿಲ್ಲದೇ ರಾಜನ ಬಗ್ಗೆ ಇಲ್ಲಸಲ್ಲದ್ದನ್ನು ಅಪಪ್ರಚಾರ ಮಾಡ್ತಿರೋ ಆ ಅಜ್ಜಿಯನ್ನೇ ಫಿಕ್ಸ್ ಮಾಡಲು ನಿರ್ಧರಿಸಿದ...
ಜ್ಯೋತಿಷಿಗೇ ಸುಳ್ಳು ಹೇಳಿ ಸಿಕ್ಕಾಕ್ಕೊಂಡು ಬಿದ್ದೆ: ಅಂದು ನಡೆದ ರೋಚಕ ಪ್ರಸಂಗ ವಿವರಿಸಿದ ಮಾಸ್ಟರ್ ಆನಂದ್
ಹೀಗೆ ಹೇಳುತ್ತಲೇ ಯಾರೊಬ್ಬರ ಬಗ್ಗೆ ಅರಿವು ಇಲ್ಲದೇ, ಸತ್ಯ ತಿಳಿದುಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡುವುದು, ಅವರ ಬಗ್ಗೆ ಕಮೆಂಟ್ ಹಾಕುವುದು... ಹೀಗೆ ಏನೇನೋ ಮಾತನಾಡುವವರಿದ್ದರೆ ಅವರೇ ತಪ್ಪಿತಸ್ಥರಾಗುತ್ತಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಇನ್ನು ಮಾಸ್ಟರ್ ಆನಂದ್ ಕುರಿತು ಎಲ್ಲರಿಗೂ ತಿಳಿದಿರುವುದೇ. ಅವರ ಬಗ್ಗೆ ಕೇಳಿರದ ಕನ್ನಡಿಗರೇ ಇಲ್ಲ ಎನ್ನಬಹುದು. ಬಾಲ ಕಲಾವಿದನಾಗಿ ಅವರು ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಅಬ್ಬಾ ಇಂಥ ಆ್ಯಕ್ಟಿಂಗ್ ಈ ಪುಟಾಣಿಯಿಂದ ಸಾಧ್ಯವೇ ಎನ್ನುವ ರೀತಿಯಲ್ಲಿ ಆನಂದ್ ಅದ್ಭುತವಾಗಿ ನಟಿಸಿದ್ದು ಇದೆ.
1991 ರಲ್ಲಿ ಗೌರಿ ಗಣೇಶದಲ್ಲಿ ಅನಂತ್ ನಾಗ್, ಸಿಹಿ ಕಹಿ ಚಂದ್ರು ಮತ್ತು ರಮೇಶ್ ಭಟ್ ಅವರೊಂದಿಗೆ ಅಭಿನಯಿಸಿದರು. ಕಿಂದರಿಜೋಗಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಆನಂದ್ ಬಾಲ ಕಲಾವಿದನಾಗಿ ಅಭಿನಯಿಸಿದ್ದಾರೆ. ಗೌರಿ ಗಣೇಶ ಚಿತ್ರ ನೋಡಿದವರಿಗಂತೂ ಮಾಸ್ಟರ್ ಆನಂದ್ ಇನ್ನೂ ಅದೇ ಪುಟಾಣಿಯಾಗಿಯೇ ಕಾಣಿಸಲಿಕ್ಕೆ ಸಾಕು. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಈ ಸಿನಿಮಾಕ್ಕೆ ಮಾಸ್ಟರ್ ಆನಂದ್ ಅವರೇ ನಾಯಕ ಎಂದರೂ ತಪ್ಪಾಗಲಿಕ್ಕಿಲ್ಲ. ಹಾಸ್ಯ, ಕೋಪ, ಗಂಭೀರ ಯಾವುದೇ ಪಾತ್ರ ಕೊಟ್ಟರೂ ಸೈ ಎನ್ನಿಸಿಕೊಂಡಿದ್ದ ಬಾಲಕ ಮಾಸ್ಟರ್ ಆನಂದ್ ಇದೀಗ ಅವರದ್ದೇ ರೀತಿಯ ನಟನೆಯಿಂದ ತುಂಬಿರುವ ಪುಟಾಣಿ ವಂಶಿಕಾಳ ತಂದೆಯಾಗಿದ್ದಾರೆ.
ಡಿವೋರ್ಸ್ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ: ಪತ್ನಿ ಮೇಲೆ ಕೋಪಗೊಂಡ ಆನಂದ್ ಹೇಳಿದ್ದೇನು?


