Asianet Suvarna News Asianet Suvarna News

ಮಾಸ್‌ ಮಹಾರಾಜ ರವಿತೇಜಾ ಮಾತಿಗೆ ಯಶ್‌ ಫ್ಯಾನ್ಸ್‌ ಕೆಂಡಾಮಂಡಲ!


ಮಾಸ್‌ ಮಹಾರಾಜ ರವಿತೇಜಾ ತಮ್ಮ ಮುಂಬರುವ ಚಿತ್ರ ಟೈಗರ್‌ ನಾಗೇಶ್ವರ್‌ ರಾವ್‌ ಪ್ರಚಾರದಲ್ಲಿದ್ದಾರೆ. ಈ ನಡುವೆ ತಮ್ಮ ಚಿತ್ರದ ಪ್ರಚಾರದ ವೇಳೆ ರಾಕಿಂಗ್‌ ಸ್ಟಾರ್‌ ಯಶ್‌ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಯಶ್‌ ಫ್ಯಾನ್ಸ್ ಕಿಡಿಕಾರಿದ್ದಾರೆ.
 

Mass Maharaja Ravi teja comments on rocking Star yash Fans reacts san
Author
First Published Oct 11, 2023, 7:18 PM IST | Last Updated Oct 12, 2023, 10:08 AM IST

ಬೆಂಗಳೂರು (ಅ.11): ಸೋಶಿಯಲ್‌ ಮೀಡಿಯಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಮಾಸ್‌ ಮಹಾರಾಜ ರವಿತೇಜಾ ಫ್ಯಾನ್ಸ್‌ಗಳ ನಡುವಿನ ವಾರ್‌ ಜೋರಾಗಿದೆ.  ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಪ್ರಮೋಷನ್ ಗಾಗಿ ರವಿತೇಜಾ ಯಶ್‌ ಹೆಸರು ಬಳಸಿಕೊಂಡಿದ್ದಾರೆ. ಅದಲ್ಲದೆ. ರಾಕಿಭಾಯ್ ಬಗ್ಗೆ ಹಗುರವಾಗಿ ತೆಲುಗು ನಟ ಮಾತನಾಡಿದ್ದಾರೆ ಎನ್ನುವ ವಾದ ಕೇಳಿ ಬಂದಿದೆ. ಇದರ ಬೆನ್ನಲ್ಲಿಯೇ ಮಾಸ್ ಮಹಾರಾಜ ರವಿತೇಜ ವಿರುದ್ಧ ಯಶ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಶ್‌ ನನಗೆ ಗೊತ್ತೇ ಇರಲಿಲ್ಲ, ಕೆಜಿಎಫ್‌ನಂಥ ಚಿತ್ರ ಸಿಗೋಕೆ ಯಶ್‌ ಬಹಳ ಲಕ್ಕಿ ಎನ್ನುವ ಅರ್ಥದಲ್ಲಿ ರವಿ ತೇಜಾ ಮಾತನಾಡಿದ್ದರು. ರವಿತೇಜಾ ಈ ಮಾತು ಹೇಳಿದ್ದೇ ಈಗ ವಿವಾದದ ಮೂಲ ಕಾರಣ. ಇದರ ಬೆನ್ನಲ್ಲಿಯೇ ಯಶ್‌ ಅವರ ಅಭಿಮಾನಿಗಳು ಕೆಜಿಎಫ್‌ ಮಾಡೋಕು ಮುನ್ನವೇ ಯಶ್‌ ದೊಡ್ಡ ಸ್ಟಾರ್‌ ಆಗಿದ್ದರು. ಅವರಬಗ್ಗೆ ಇಷ್ಟ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ. ಕೆಜಿಎಫ್ ಸಿನಿಮಾಗಾಗಿ ಯಶ್ ಆರು ವರ್ಷ ತನು ಮನ ಅರ್ಪಿಸಲಿಲ್ಲವೇ, ಹಾಗಿದ್ರೆ ಯಶ್ ಪರಿಶ್ರಮಕ್ಕೆ ಬೆಲೆ ಇಲ್ವಾ. ಆರಕ್ಕೇರದ ಮೂರಕ್ಕಿಳಿದ ರವಿತೇಜ ಎಂದು ತೆಲುಗು ನಟನ ವಿರುದ್ಧ ಯಶ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ವಿಚಾರವಾಗಿ ರವಿತೇಜ, ಯಶ್‌ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?: ಜೂಮ್‌ ಟಿವಿಯ ಕಾರ್ಯಕ್ರಮದಲ್ಲಿ ನಿರೂಪಕಿ ಕೇಳುವ ಕೆಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಾರೆ. ಇದೇ ವೇಳೆ ಅವರಿಗೆ ಕೆಲವೊಂದು ನಾಯಕರಿಂದ ಏನನ್ನು ಕದಿಯಲು ಇಷ್ಟಪಡುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ, ರಾಮ್‌ಚರಣ್‌, ದಳಪತಿ ವಿಜಯ್‌, ರಾಜಮೌಳಿ ಬಗ್ಗೆ ಕೇಳುತ್ತಾರೆ. ಅವುಗಳಿಗೆ ಹೆಮ್ಮೆಯಿಂದಲೇ ರವಿತೇಜಾ ಉತ್ತರ ನೀಡುತ್ತಾರೆ. ಕೆಲವರಿಂದ ಡಾನ್ಸ್‌, ವಿಶನ್‌ ಕದಿಯಬೇಕು ಎನ್ನುತ್ತಾರೆ. ಇದೇ ಹಂತದಲ್ಲಿ ನಿರೂಪಕಿ ಯಶ್‌ ಬಗ್ಗೆ ಕೇಳಿದಾಗ, 'ಯಶ್‌..' ಎಂದು ಒಮ್ಮೆಲೆ ದೊಡ್ಡದಾಗಿ ಹೇಳುವ ರವಿತೇಜಾ, 'ಯಶ್‌ ಬಗ್ಗೆ ನಾನು ನೋಡಿದ್ದೇ..ಆ ಕೆಲವು ಚಿತ್ರಗಳಿಂದ. ಅದು ಕೆಜಿಎಫ್‌..ಕೆಜಿಎಫ್‌ನಂಥ ಚಿತ್ರ ಸಿಗೋಕೆ ಅವರು ಲಕ್ಕಿ ಆಗಿದ್ದರು' ಎಂದು ಹೇಳಿದ್ದಾರೆ. ರವಿತೇಜಾ ಹೇಳಿರುವ ಈ ಮಾತೇ ಈಗ ವಿವಾದಕ್ಕೆ ಕಾರಣವಾಗಿದೆ. ರವಿತೇಜಾ ಹೀಗೆ ಹೇಳಿದ್ದಕ್ಕಿಂತ ಯಶ್‌ ಬಗ್ಗೆ ಹೇಳುವಾಗ ಅವರ ಟೋನ್‌ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಇನ್ನು ಒಂದು ಸಿನಿಮಾ ಸಾಕು ಅನ್ಸುತ್ತೆ ಡೈಲಾಗ್ ಚೇಂಜ್ ಆಗೋಕೆ. ಇಷ್ಟು ವಯಸ್ಸಲ್ಲೇ ಈ ರೇಂಜ್ ನಲ್ಲಿ ಎರ್ರಾ ಬಿರ್ರಿ ರೆಕಾರ್ಡ್ ಮಾಡಿದ್ದಾರೆ. ನಿಮ್ಮ ವಯಸ್ಸಿಗೆ ಬರುವಷ್ಟರಲ್ಲಿ ಇಂಡಿಯನ್ ಫಿಲಂ ಇಂಡಸ್ಟ್ರಿ ನೇ ಅಳ್ತಿರ್ತಾರೆ ನೋಡ್ತಾ ಇರಿ. ಯಶ್‌ ನಮ್ಮ ಹೆಮ್ಮೆ' ಎಂದು ಖಡಕ್‌ ಸಿನಿಮಾ ಕಾಮೆಂಟ್‌ ಮಾಡಿದೆ.


'ಈತ ಮಾತನಾಡುವ ವೇಳೆ ಅವರ ಅಹಂಕಾರ, ಭಂಗಿ, ಧ್ವನಿ ಮಾಡ್ಯುಲೇಶನ್‌ಗಳನ್ನು ನೋಡಿ. ನಿಮ್ಮ ಯಾವುದೇ ಚಲನಚಿತ್ರವನ್ನು ನೋಡಿಲ್ಲ, ಆ ರೀತಿಯಲ್ಲಿ ನನ್ನನ್ನು ನಾನು ಲಕ್ಕಿ ಎನ್ನಬಹುದು. ನಿಮ್ಮ ಅಸೂಯೆ ಹಾಗೂ ನಿಮ್ಮ ಇಂಥ ಅಭಿಪ್ರಾಯವನ್ನು ನಿಮ್ಮಲ್ಲಿಯೇ ಇಟ್ಟುಕೊಂಡರೆ ಒಳ್ಳೆಯದು ಕಾಮಿಡಿ ಹೀರೋ. ಸಮಾಧಾನವಾಗಿ ಯಶ್‌ ಅವರ ಮಿ.& ಮಿಸೆಸ್‌ ರಾಮಾಚಾರಿ, ರಾಜಾಹುಲಿ, ಕಿರಾತಕ ಚಿತ್ರಗಳನ್ನು ನೋಡಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಮೊದಲಿಗೆ ನೀವು ಯಾರನ್ನೂ ಕೂಡ ಉತ್ತಮ ನಟ ಎನ್ನೋದಿಲ್ಲ. ಇದರ ನಡುವೆ ನೀವು ಯಶ್‌ ಕೆಜಿಎಫ್‌ನಂಥ ಚಿತ್ರ ಪಡೆಯೋಕೆ ಲಕ್ಕಿ ಅಂತೀರಿ. ದೇಶದಲ್ಲಿ ಸಾಕಷ್ಟು ಡೈರೆಕ್ಟರ್‌ಗಳು ಫ್ಲಾಪ್‌ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಶ್‌ ಹೊಸ ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ತಮ್ಮ ಮೂರು ವರ್ಷವನ್ನು ಕೆಜಿಎಫ್‌ಗಾಗಿ ವ್ಯಯ ಮಾಡಿದ್ದಾರೆ' ಎಂದು ಇನ್ನೊಬ್ಬರು ಬರೆದಿದ್ದಾರೆ.

ರಣಬೀರ್‌-ಸಾಯಿಪಲ್ಲವಿ ಬಾಲಿವುಡ್‌ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್‌ ನೆಗೆಟಿವ್‌ ರೋಲ್‌ಗೆ ಕಾಲ್‌ಶೀಟ್‌?

ಇನ್ನು ರವಿತೇಜ ಫ್ಯಾನ್ಸ್‌ಗಳು ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಯಶ್‌ ಫ್ಯಾನ್ಸ್‌ಗೆ ಹೇಳೋದಿಷ್ಟೇ. ರವಿತೇಜ ಅವರ ಉದ್ದೇಶ ಯಶ್‌ ಅವರಿಗೆ ಅವಮಾನ ಮಾಡುವುದಾಗಿರಲಿಲ್ಲ.ಅವರು ಕೇವಲ ತಮ್ಮ ಅಭಿಪ್ರಾಯ ಹೇಳಿದ್ದಾರೆ.ಅದಲ್ಲದೆ, ನಟರ ಹಾರ್ಡ್‌ವರ್ಕ್‌ ಹಾಗೂ ಬದ್ಧತೆಯ ಬಗ್ಗೆ ರವಿತೇಜಾ ಅವರಿಗೆ ತಿಳಿದಿದೆ' ಎಂದು ಬರೆದಿದ್ದಾರೆ.

Yash19 ಅಕ್ಟೋಬರ್‌ನಲ್ಲಿ ಯಶ್‌ ಹೊಸ ಚಿತ್ರ ಘೋಷಣೆ?

Latest Videos
Follow Us:
Download App:
  • android
  • ios