ರಣಬೀರ್-ಸಾಯಿಪಲ್ಲವಿ ಬಾಲಿವುಡ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನೆಗೆಟಿವ್ ರೋಲ್‌ಗೆ ಕಾಲ್‌ಶೀಟ್?
ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾಗಾಗಿ ಫ್ಯಾನ್ಸ್ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ನಡುವೆ ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ರಾಮಾಯಣದ ಮೊದಲ ಭಾಗದಲ್ಲಿ ನಟಿಸಲು ಕನ್ನಡ ನಟ ಯಶ್ 15 ರಿಂದ 20 ದಿನದ ಕಾಲ್‌ಶೀಟ್ ನೀಡಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಈ ಪೌರಾಣಿಕ ಸಿನೆಮಾ ಭಾರತೀಯ ಚಿತ್ರರಂಗದ ಹಿಂದೆಂಗೂ ಕಂಡಿರದ ಅತ್ಯಂತ ಪ್ರಮುಖ ಬಿಗ್ ಬಜೆಟ್ ಚಿತ್ರ ಎಂದು ಹೇಳಲಾಗುತ್ತಿದೆ.
ರಾಮಾಯಣದಲ್ಲಿ ಕೆಜಿಎಫ್ ರಾಕಿ ಬಾಯ್ ಯಶ್ ಅವರು ನಟಿಸಲಿದ್ದಾರೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಾಮಾಯಣದ ಚಿತ್ರೀಕರಣವನ್ನು 2024ರ ಮೊದಲ ತ್ರೈಮಾಸಿಕದಲ್ಲಿ ನಡೆಸಲು ಉದ್ದೇಶಿಸಲಾಗಿದೆಯಂತೆ. ರಾಮಯಣದ ಮೊದಲ ಭಾಗದಲ್ಲಿ 15 ರಿಂದ 20 ದಿನದ ಕಾಲ್‌ಶೀಟ್ ನೀಡಿದ್ದಾರಂತೆ. ಪಾರ್ಟ್ 2ನಲ್ಲಿ ಯಶ್ ಅವರ ಪಾತ್ರ ಹೆಚ್ಚು ಇರಲಿದೆಯಂತೆ.
ನಟ ಪ್ರಭಾಸ್ ಅವರ ಆದಿಪುರುಷ ಚಿತ್ರದ ಸೋಲಿನ ಹೊರತಾಗಿಯೂ, ನಿರ್ಮಾಪಕ ಮಧು ಮಂಟೇನಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರ ತಂಡವು ರಾಮಾಯಣದ ಸಿನಿಮೀಯ ರೂಪಾಂತರಕ್ಕಾಗಿ ಪೂರ್ಣಪ್ರಮಾಣದಲ್ಲಿ ತೊಡಗಿದೆ. 2020 ರಲ್ಲೇ ಈ ಬಗ್ಗೆ ಬ್ಲೂ ಪ್ರಿಂಟ್ ತಯಾರಿ ಮಾಡಲಾಗಿತ್ತು. ಫೆಬ್ರವರಿ 2024ರ ಬಳಿಕ ನಿತೇಶ್ ತಿವಾರಿ ತಂಡ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಂಡಿದೆ ಎಂದು ಬಿಟೌನ್‌ನಿಂದ ಕೇಳಿಬಂದಿದೆ.
ಈ ಬಹುನಿರೀಕ್ಷಿತ ರಾಮಾಯಣ ಸಿನೆಮಾದಲಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇದರಲ್ಲಿ ರಾಮನಾಗಿ ರಣಬೀರ್ ಕಪೂರ್ ಸೀತೆಯಾಗಿ ನಟಿ ಸಾಯಿ ಪಲ್ಲವಿ ನಟಿಸಿದರೆ ಕನ್ನಡದ ನಟ ಯಶ್ ಚಿತ್ರದಲ್ಲಿ ರಾವಣನ ಪಾತ್ರ ಮಾಡಲಿದ್ದಾರಂತೆ. ರಾವಣನ ಪಾತ್ರಕ್ಕೆ ಬಣ್ಣ ಹಚ್ಚಲು ಯಶ್ ಉತ್ಸುಕರಾಗಿದ್ದಾರೆ ಎಂದು ಬಿಟೌನ್ ಮಾಧ್ಯಮಗಳು ವರದಿ ಮಾಡಿವೆ.
ಸಿನಿಮಾದ ಬ್ಲೂಪ್ರಿಂಟ್ ತಯಾರಾಗಿದ್ದು, ಆಸ್ಕರ್ ವಿನ್ನಿಂಗ್ ಕಂಪನಿಯಾದ ಡಿಎನ್‌ಇಜಿ ವಿಎಫ್‌ಎಕ್ಸ್ ಪ್ಲೇಟ್‌ಗಳನ್ನು ತಯಾರು ಮಾಡುತ್ತಿದೆಯಂತೆ. ರಾವಣನಾಗಿ ಯಶ್ ಶೂಟಿಂಗ್ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಭಾಗದ ಶೂಟಿಂಗ್ ಫೆಬ್ರವರಿ ತಿಂಗಳಿನಿಂದ ನಡೆಯಲಿದೆಯಂತೆ.
ರಾಮಾಯಣ- ಭಾಗ 1ರಲ್ಲಿ ಯಶ್ ಹೆಚ್ಚೇನು ಕಾಣಿಸಿಕೊಳ್ಳುವುದಿಲ್ಲ. ಪಾರ್ಟ್-2ನಲ್ಲಿ ಯಶ್ ಅವರ ರಾವಣ ಪಾತ್ರ ಹೆಚ್ಚು ಕಾಣಿಸಿಕೊಳ್ಳಲಿದೆ. ಇದು ಲಂಕೆಯಲ್ಲಿ ನಡೆಯುವ ಕತೆಯಾಗಲಿದೆ. ಹೀಗಾಗಿ ಭಾಗ 1ರ ಶೂಟಿಂಗ್‌ಗೆ ಯಶ್ ಕಾಲ್ ಶೀಟ್ ನೀಡಿದ್ದಾರೆ.
ಇನ್ನು ಯಶ್ ಅವರ 19ನೇ ಸಿನಿಮಾದ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಅಂದರೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ. 2025ಕ್ಕೆ ಕೆಜಿಎಫ್ 3 ಸಿನಿಮಾ ರಿಲೀಸ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಯಶ್ ತಮ್ಮ 19ನೇ ಚಿತ್ರವನ್ನು ಮುಂದಿನ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖ್ಯಾತ ಸಿನಿಮಾ ವಿಮರ್ಶಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಸುಂಟರಗಾಳಿಯ ಗ್ರಾಫಿಕ್ ಚಿತ್ರದೊಂದಿಗೆ ರಾಕಿಂಗ್ ಸ್ಟಾರ್ ಯಶ್, ಬಿಗ್ ಅನೌನ್ಸ್‌ಮೆಂಟ್ ಇನ್ ಅಕ್ಟೋಬರ್ ಎನ್ನುವ ಪೋಸ್ಟರ್‌ಅನ್ನು ಅವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಯಶ್ 19 ಸಿನಿಮಾದ ಅನೌನ್ಸ್‌ಮೆಂಟ್ ಸುದ್ದಿ ಅಕ್ಟೋಬರ್‌ನಲ್ಲಿ ಬಿತ್ತರವಾಗುವ ಸಾಧ್ಯತೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.
ಮೂಲಗಳ ವರದಿಯ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಇದೇ ಯಶ್ 19 ಸಿನಿಮಾ ಅಗಿ ಘೋಷಣೆಯಾಗುವ ಸಾಧ್ಯತೆ ಇದೆ. ದೊಡ್ಡ ಚಿತ್ರವೊಂದರಲ್ಲಿ ಇವರಿಬ್ಬರೂ ಜೊತೆಯಾಗಲಿದ್ದಾರೆ ಎಂದು ಸಿನಿಮಾ ರಂಗದ ಮೂಲಗಳು ತಿಳಿಸಿವೆ.