90ರ ದಶಕದಿಂದ ಹಾಸ್ಯನಟರಾಗಿ ಮಿಂಚುತ್ತಿರುವ ಮಂಡ್ಯ ರಮೇಶ್, ಈಗ ನಟನಾ ಶಾಲೆ ನಡೆಸುತ್ತಿದ್ದಾರೆ. ಆರಂಭದಲ್ಲಿ ನೀನಾಸಂನಲ್ಲಿ ತಿಂಗಳಿಗೆ 400 ರೂ. ಸಂಭಾವನೆ ಪಡೆಯುತ್ತಿದ್ದರು. ಮೂರು ವರ್ಷಗಳ ನಂತರ 800 ರೂ.ಗೆ ಏರಿಕೆಯಾಗಿತ್ತು. ನಂತರ ರಂಗಾಯಣದಲ್ಲೂ ಅದೇ ಸಂಭಾವನೆ ಮುಂದುವರಿಯಿತು.

90ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಮಾಡಿಕೊಂಡು ಕನ್ನಡ ಸಿನಿ ರಸಿಕರನ್ನು ಮನೋರಂಜಿಸುತ್ತಿದ್ದ ಮಂಡ್ಯ ರಮೇಶ್ ಈಗ ನಟನಾ ಶಾಲೆ ಹೊಂದಿದ್ದಾರೆ. ಪ್ರತಿ ವರ್ಷವೂ ನೂರಾರು ಮಕ್ಕಳಿಗೆ ನಟನೆ ಹೇಳಿಕೊಡುತ್ತಾರೆ. ಆದರೆ ರಮೇಶ್ ತಮ್ಮ ಜರ್ನಿ ಆರಂಭಿಸುವ ಸಮಯದಲ್ಲಿ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಗೊತ್ತಾ? ಮೂರು ವರ್ಷ ಕಳೆದರೂ ಸಂಬಳ ಎಷ್ಟು ಆಗಿತ್ತು ಗೊತ್ತೇ? ಇಲ್ಲಿದೆ ನೋಡಿ ಫುಲ್ ಮಾಹಿತಿ... 

'ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಕಳ ಮಧ್ಯಮ ವರ್ಗದ ಯುವಕ ಹಾಗೂ ಯುವತಿಗೂ ಯದುರಾಗುವುದು ಏನ್ ದುಡಿಯುತ್ತಿದ್ಯಾ? ಮುಂದೆ ಏನ್ ಮಾಡ್ತೀಯಾ? ನಿನ್ನ ಬದುಕಿಗೆ ಏನ್ ಮಾಡಿಕೊಂಡಿರುವೆ ಅನ್ನೋ ಪ್ರಶ್ನೆ ಬರುತ್ತದೆ. ಅಲ್ಲ ನಾನು ಆರ್ಟಿಸ್ಟ್‌ ಆಗುತ್ತೀನಿ ಅಂದ್ರೆ....ಆರ್ಟಿಸ್ಟ್‌ ಸರ್ ಆದರೆ ಹೊಟ್ಟ ಪಾಡಿಗೆ ಏನು? ಆರ್ಟಿಸ್ಟ್‌ಗೂ ಹೊಟ್ಟಿ ಪಾಡಿಗೂ ಯಾವತ್ತೂ ಒಂದಕ್ಕೆ ಒಂದು ಬೆಸೆಯುವುದಿಲ್ಲ ಅನ್ನೋದು ನಮ್ಮ ಜಗತ್ತಿನ ಸಿದ್ಧಾಂತ. ಅಸ್ಥಿರವಾಗಿರುತ್ತದೆ ಸಂಬಳ ಸಿಗುವುದಿಲ್ಲ ಎಷ್ಟು ದಿನ ಇರ್ತೀಯಾ ಅದರಲ್ಲಿ? ಮುಂದೆ ಏನು ಅಂತಿದ್ದರು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಮೇಶ್ ಮಾತನಾಡಿದ್ದಾರೆ.

ಯಶಸ್ಸಿನಲ್ಲಿ ಇದ್ದಾಗ ಬಂದು ಹೋಗೋ ಫ್ರೆಂಡ್ಸ್‌ ನಂಗೆ ಬೇಡ, ಕಷ್ಟದಲ್ಲಿದ್ದಾಗ ನಿಂತಿದ್ದು ಇವರೇ: ಅಮೃತಾ ಅಯ್ಯಂಗಾರ್

'ನನ್ನ ಹುಡುಕಾಟ ಏನಾಗಿತ್ತು ಅಂದ್ರೆ ಹೊಟ್ಟಪಾಡಿದಿ ಒಂದಿಷ್ಟು ದುಡ್ಡು ಕಾಸು ಸಿಗಲಿ ಅದನ್ನು ತೆಗೆದುಕೊಂಡು ಬಿಡೋಣ. ಆದರೆ ಸಾಯುವವರೆಗೂ ರಂಗಭೂಮಿ ಕ್ಷೇತ್ರದಲ್ಲಿ ಇದ್ದ ಕೆಲಸ ಮಾಡಬಹುದು. ಪುಸ್ತಕ ಓದಬಹುದು, ಸಂಗೀತ ಸಿಗುತ್ತೆ, ಬಿಂದಾಸ್ ಹೆಣ್ಣು ಮಕ್ಕಳನ್ನು ನೋಡಬಹುದು. ಆ ವಯಸ್ಸಿನಲ್ಲಿ ಹುಡುಗ ಪಕ್ಕ ಚೆನ್ನಾಗಿ ಮಾತನಾಡಿಸು ಚೆನ್ನಾಗಿ ಹಾಡುವ ಚೆನ್ನಾಗಿ ನಟಿಸುವ ಹುಡುಗಿ ವಿಶ್ವಸ ಕೊಟ್ಟರು ವಿಶ್ವಾಸ ಕೊಡುವ ಗಳಿಗೆಗಳು ಸೃಷ್ಟಿ ಆಗಿಬಿಟ್ಟಿರುತ್ತದೆ. ಅಲ್ಲಿ ಮುಗಿದ ಒಂದು ತಿಂಗಳಿಗೆ ಕೆಲಸ ಕೊಡುತ್ತಾರೆ ನೀನಾಸಂ ತಿರುಗಾಟ ಶುರುವಾಗುತ್ತದೆ. 15 ದಿನಕ್ಕೆ 200 ರೂ. ಕೊಡುತ್ತೀನಿ ಎನ್ನುತ್ತಾರೆ ಅಲ್ಲಿಗೆ ತಿಂಗಳಿಗೆ 400 ರೂ. ಆಯ್ತು. 1985ರಲ್ಲಿ ನಾನು ತೆಗೆದುಕೊಂಡ ಮೊದಲ ಸಂಬಳ. ಅಲ್ಲಿ ಮೂರು ವರ್ಷ ಕಳೆದ ಮೇಲೆ 800 ರೂ. ಆಗಿರಬಹುದು. ಅಲ್ಲಿಂದ ರಂಗಾಯಣಕ್ಕೆ ಸೇರಿಕೊಂಡಾಗ ಮತ್ತೆ 800 ರೂ. ಬರುತ್ತದೆ. ಕಿರುಮಗ ಆಗಿದ್ದ ಕಾರಣ ಓಡಾಡಿಕೊಂಡು ಇದ್ದೆ' ಎಂದು ಮಂಡ್ಯ ರಮೇಶ್ ಹೇಳಿದ್ದಾರೆ. 

6 ಗಂಟೆ ತಡವಾಗಿ ಆಗಮಿಸಿದ ನಯನತಾರಾ; ಕ್ಷಮೆ ಕೇಳದೆ ಅಹಂಕಾರ ಮಾಡಿದ್ದಕ್ಕೆ ಅಭಿಮಾನಿಗಳಲ್ಲಿ ಆಕ್ರೋಶ

YouTube video player