ಬಾಕ್ಸ್ ಆಫೀಸ್ ಸುಲ್ತಾನ್ ಬಹು ನಿರೀಕ್ಷಿತಾ ಐತಿಹಾಸಿಕ ಚಿತ್ರ 'ಗಂಡುಗಲಿ ಮದಕರಿ ನಾಯಕ' ಹೆಸರನ್ನು 'ರಾಜ ವೀರ ಮದಕರಿ ನಾಯಕ' ಎಂದು ಬದಲಾವಣೆ ಮಾಡಿದ್ದು, ಸುಮಲತಾ ಸಹ ಈ ಚಿತ್ರದಲ್ಲಿ ನಟಿಸುತ್ತಾರಂತೆ. ಅಷ್ಟಕ್ಕೂ ಇವರದ್ದು ಎಂಥ ಪಾತ್ರ?

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಐತಿಹಾಸಿಕ ಚಿತ್ರದಲ್ಲಿ ನೋಡುವುದೇ ಸಂಭ್ರಮ, ಎನ್ನುತ್ತಾರೆ ಅಭಿಮಾನಿಗಳು. ಸಂಗೊಳ್ಳಿ ರಾಯಣ್ಣನ ಅಭಿನಯಕ್ಕೆ ಮನಸೋತವರು 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಿಗೆ ಫಿದಾ ಆಗಿದ್ದರು. ಇದೀಗ 'ಗಂಡುಗಲಿ ವೀರ ಮದಕರಿ ನಾಯಕ'ನಾಗಿ ನೋಡಲು ಬಯಸಿದ್ದಾರೆ.

ದರ್ಶನ್ ಜತೆಗಿನ ಫೋಟೋ ಶೇರ್ ಮಾಡ್ಕೊಂಡು ಸುದ್ದಿಯಾಗಿದ್ದ ಪವಿತ್ರಾ ಗೌಡ ಯಾರು?

ಇಂದು ಬೆಳಗ್ಗೆ 5.30ಕ್ಕೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮೂಲಕ ಚಿತ್ರದ ಮುಹೂರ್ತ ನೆರೆವೇರಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ಶ್ರೀನಿವಾಸ್ ಸೇರಿ ಹಲವರು ಭಾಗಿಯಾಗಿದ್ದರು.

View post on Instagram

'ಸುಮಲತಾ ಅಮ್ಮ 'ರಾಜ ವೀರಮದಕರಿ ನಾಯಕ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯರು ಅಂದರೆ, ನಮ್ಮ ತಂದೆ ಜೊತೆ ಕೆಲಸ ಮಾಡಿದವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ಕೂತ್ಕೊ ಅಂದ್ರೆ ಕುತ್ಕೊ ನಿಂತ್ಕೊ ಅಂದ್ರೆ ನಿಂತ್ಕೊ ಬೇಕು. ಇದೊಂದು ದೊಡ್ಡ ಟೀಂ. ವಿಶೇಷ ಅಂದ್ರೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ' ಎಂದು ಮುಹೂರ್ತದ ನಂತರ ಹೇಳಿದ್ದಾರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್. 

ಕೋಟೆ ನಾಡಲ್ಲಿ ದರ್ಶನ್; ಶೂಟಿಂಗ್‌ಗೂ ಮುನ್ನ ಟೆಂಪಲ್ ರನ್!

'ಇನ್ನು ಚಿತ್ರಕ್ಕೆ ಚಾಲನೆ ನೀಡಿರುವ ಸುಮಲತಾ ತಮ್ಮ ಮಾನಸ ಪುತ್ರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ದರ್ಶನ್ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವುದೇ ಖುಷಿ ಸಮಾಚಾರ. ಇದೊಂದು ಹಿಸ್ಟರಿ ಕ್ರಿಯೇಟ್ ಮಾಡುವ ಪಾತ್ರ. ದರ್ಶನ್ ನನ್ನ ದತ್ತು ಮಗ ಅಲ್ಲ ಸ್ವಂತ ಮಗನೇ. ನಾನು ಈ ಚಿತ್ರದಲ್ಲಿ ರಾಜಮಾತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ.

"