ಸಿಕ್ಕಾಪಟ್ಟೆ ವೈರಲ್ ಆಗಿದೆ ನಿಖಿಲ್ ಎಲ್ಲಿದ್ದಿಯಪ್ಪಾ ವಿಡಿಯೋ | ಎಲ್ಲಿ ನೋಡಿದ್ರೂ ನಿಖಿಲ್ ಹವಾ | ಕರುವಿಗೆ ನಿಖಿಲ್ ಎಂದು ಹೆಸರಿಟ್ಟು ಅಭಿಮಾನ ಮೆರೆದ ಮಂಡ್ಯ ರೈತ 

ಬೆಂಗಳೂರು (ಏ. 10): ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಚುನಾವಣಾ ಕಣ ಹೆಚ್ಚು ಗಮನ ಸೆಳೆದಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಸ್ಪರ್ಧೆಯಿಂದ ಚುನಾವಣಾ ಕಾವು ಹೆಚ್ಚಾಗಿದೆ. ಏತನ್ಮಧ್ಯೆ ನಿಖಿಲ್ ಎಲ್ಲಿದ್ದಿಯಪ್ಪಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಟೈಟಲ್ ಗಾಗಿ ನಿರ್ಮಾಪಕರು, ನಿರ್ದೇಶಕರು ಫಿಲ್ಮ್ ಚೇಂಬರ್ ಗೆ ಮುಗಿ ಬಿದ್ದಿದ್ದಾರೆ. 

ಆಗಸ್ಟ್‌ ತಿಂಗಳನ್ನು ಹಂಚಿಕೊಂಡ ನಾಲ್ಕು ದೊಡ್ಡ ಚಿತ್ರಗಳು

ಎಲ್ಲಾ ಟ್ರೋಲ್ ಪೇಜ್ ಗಳಲ್ಲೂ ಮಂಡ್ಯ ಚುನಾವಣೆಯದ್ದೇ ಟ್ರೋಲ್ ಗಳು. ಅದರಲ್ಲೂ ನಿಖಿಲ್ ಎಲ್ಲಿದ್ದಿಯಪ್ಪಾ ಸಿಕ್ಕಾಪಟ್ಟೆ ಫೇಮಸ್ ಆಗಿದೆ. 

ಕೆಜಿಎಫ್ ನಂತರ 5 ಭಾಷೆ​ಗ​ಳಲ್ಲಿ ಅವನೇ ಶ್ರೀಮ​ನ್ನಾ​ರಾ​ಯ​ಣ

ಕುಮಾರಸ್ವಾಮಿ ಅಭಿಮಾನಿಯೊಬ್ಬರು ತಮ್ಮ ಕರುವೊಂದಕ್ಕೆ ನಿಖಿಲ್ ಎಂದು ಹೆಸರಿಟ್ಟಿದ್ದಾರೆ. ಮಂಡ್ಯದ ಉಂಡುವಾಡಿ ಗ್ರಾಮದ ರಾಜು ಎಂಬ ರೈತ ತಮ್ಮ ಬಳಿಯಿರುವ ಕರುವಿಗೆ ನಿಖಿಲ್ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.