ಸ್ಯಾಂಡಲ್‌ವುಡ್‌ ಸುಂದರಿ ಸುಮಲತಾ ಹಾಗೂ ಬಾಲಿವುಡ್‌ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಸಂಸತ್ ಸದಸ್ಯರು. ಸುಮಲತಾ ಕರ್ನಾಟಕದ ಮಂಡ್ಯವನ್ನು ಪ್ರತಿನಿಧಿಸುತ್ತಿದ್ದರೆ, ಹೇಮಮಾಲಿನಿ ಉತ್ತರ ಪ್ರದೇಶದ ಮಥುರಾ ಸಂಸದೆ. ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ ಅನ್ನು ಈ ಇಬ್ಬರೂ ಒಂದು ಕಾಲದಲ್ಲಿ ಆಳಿದವರು. ಇದೀಗ ಇಬ್ಬರೂ ಸಹೋದ್ಯೋಗಿಗಳು. ಅಷ್ಟೇ ಅಲ್ಲ, ನೆರೆಹೊರೆಯವರೂ ಹೌದು. 

ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು

ಸಂಸದರಿಗೆ ಹೊಸ ದಿಲ್ಲಿಯ 'ಕಾವೇರಿ' ಅಪಾರ್ಟ್‌ಮೆಂಟ್‌ನಲ್ಲಿ ಮನೆಗಳನ್ನು ಹಂಚಲಾಗಿದೆ. ಒಂಟು ಎಂಟು ಮಹಿಳಾ ಎಂಪಿಗಳಿಗೆ ಇಲ್ಲಿಯೇ ಮನೆಗಳನ್ನು ನೀಡಲಾಗಿದ್ದು, ಹೇಮಮಾಲಿನಿ ಹಾಗೂ ಸುಮಲತಾಗೆ ಅಕ್ಕಪಕ್ಕದ ಮನೆಗಳನ್ನು ನೀಡಲಾಗಿದೆ. ಇದನ್ನು ಖುದ್ದು ಸುಮಲತಾ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ಹೀಗೆ...

ದೀನ್ ದಯಾಳ್ ಉಪಧ್ಯಾಯ ಮಾರ್ಗದಲ್ಲಿರುವ 'ಕಾವೇರಿ' ಅಪಾರ್ಟ್‌ಮೆಂಟ್‌ನಲ್ಲಿ ಈ ಇಬ್ಬರು ಎಸ್ಟರ್ ಇಯರ್ಸ್‌ನ ಮಹಾ ನಟಿಯರಿಗೆ ಮನೆ ನೀಡಿದ್ದು, ಹೇಮಾ ಮಾಲಿನಿ 702ನೇ ಫ್ಲಾಟ್‌‌ನಲ್ಲಿದ್ದರೆ, ಸುಮಲತಾ ಅವರದ್ದು 703 ಫ್ಲಾಟ್‌.  'Film Fraternity, Fellow Parlimentarians, Now neighbors in same apartment and floor. ಡ್ರೀಮ್‌ ಗರ್ಲ್‌ ಹಾಗೂ ನನ್ನ ಐಡಲ್‌ ಫಾರ್ ಎವರ್. ಹೆಮ್ಮೆಯ ಕ್ಷಣ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮನೆಯ ರಿಪೇರಿ ಕೆಲಸಗಳು ನಡೆಯುತ್ತಿದ್ದು ಸುಮಲತಾ ಅಂಬರೀಶ್‌ ಇನ್ನೂ ಈ ಮನೆಗೆ ಶಿಫ್ಟ್‌ ಆಗಿಲ್ಲ. 

ಇದೇ 'ಕಾವೇರಿ' ಅಪಾರ್ಟ್‌ಮೆಂಟ್‌ನಲ್ಲಿ 7-8 ಮಹಿಳಾ ಸಂಸದೆಯರಿಗೂ ಫ್ಲಾಟ್‌ ನೀಡಲಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕ ಸಂಸದರಾದ ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ, ಬೆಂಗಳೂರು ಗ್ರಾಮೀಣದ ಡಿ.ಕೆ ಸುರೇಶ್‌ ಹಾಗೂ ಕಲಬುರಗಿ ಉಮೇಶ್‌ ಜಾದವ್‌ ಕೂಡ ಇದೇ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ.