ಕನ್ನಡ ಕಾಮಿಡಿ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'ನ ಮೋಶನ್ ಪೋಸ್ಟರ್ ಅನ್ನು ಅಮೆಜಾನ್ ಪ್ರೈಮ್ ವೀಡಿಯೋ ಬಿಡುಗಡೆ ಮಾಡಿದೆ. ಸಿನಿಮಾ ಮೇ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಕನ್ನಡ ಕಾಮಿಡಿ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'ನ (Man Of The Match) ಮೋಶನ್ ಪೋಸ್ಟರ್ (Motion Poster) ಅನ್ನು ಅಮೆಜಾನ್ ಪ್ರೈಮ್ (Amazon Prime) ವೀಡಿಯೋ ಬಿಡುಗಡೆ ಮಾಡಿದೆ. ಸಿನಿಮಾ ಮೇ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ನಿರ್ಮಾಣ ಮಾಡಿದ 'ಮ್ಯಾನ್ ಆಫ್ ದಿ ಮ್ಯಾಚ್' ಅನ್ನು ಡಿ ಸತ್ಯ ಪ್ರಕಾಶ್ (D Satya Prakash) ನಿರ್ದೇಶನ ಮಾಡಿದ್ದಾರೆ. ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ವೀಣಾ ಸುಂದರ್, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಮುಖ್ಯ ಪಾತ್ರದಲ್ಲಿದ್ದಾರೆ. ಮುಖ್ಯ ಪಾತ್ರವು ನಿರ್ದೇಶಕನಾಗಿದ್ದು, ಈ ಪಾತ್ರದಲ್ಲಿ ನಟರಾಜ್ ಎಸ್ ಭಟ್ (Nataraj S Bhat) ನಟಿಸಿದ್ದಾರೆ.
ತನ್ನ ಮುಂಬರುವ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಆಡಿಶನ್ ಮಾಡುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ನಡೆಯುವ ಘಟನೆಗಳು ನಗೆಬುಗ್ಗೆ ಉಕ್ಕಿಸುತ್ತವೆ. 'ರಾಮಾ ರಾಮಾ ರೇ' ಚಿತ್ರದ ನಟರಾದ ಧರ್ಮಣ್ಣ, ನಟರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಧರ್ಮಣ್ಣ ನಿರ್ಮಾಪಕನಾಗಿ ಕಾಣಿಸಿಕೊಂಡರೆ, ನಿರ್ದೇಶಕನಾಗಿ ನಟರಾಜ್ ಇರಲಿದ್ದಾರೆ. ವಿಶೇಷವೆಂದರೆ, ಅವರು ನಿಜ ಜೀವನದ ಪಾತ್ರಗಳಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತಾರಾ ಜೋಡಿ ವೀಣಾ ಸುಂದರ್ ಮತ್ತು ಸುಂದರ್ ವೀಣಾ ಅವರು ಕೂಡ ಚಿತ್ರದಲ್ಲಿ ದಂಪತಿಗಳಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಚಿತ್ರದಲ್ಲೂ ಅವರು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ.
ಮೇ 27ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಕೆಜಿಎಫ್ 2
ಜೊತೆಗೆ 50ಕ್ಕೂ ಅಧಿಕ ಹೊಸ ಪ್ರತಿಭೆಗಳು 'ಮ್ಯಾನ್ ಆಫ್ ದಿ ಮ್ಯಾಚ್'ನಲ್ಲಿ ಬಣ್ಣ ಹಚ್ಚಿದ್ದಾರೆ. ಲವಿತ್ ಮತ್ತು ಮದನ್ ಛಾಯಾಗ್ರಹಣ ಚಿತ್ರಕ್ಕಿದ್ದು, ಸುಂದರ್ ವೀಣಾ ನಟಿಸುವುದರ ಜೊತೆಗೆ ಪದ್ಮನಾಭ್ ಭಟ್, ಸತ್ಯಪ್ರಕಾಶ್, ನಾಗೇಂದ್ರ ಎಚ್.ಎಸ್. ಜೊತೆ ಸೇರಿಕೊಂಡು ಸ್ಕ್ರಿಪ್ಟ್ ಕೂಡ ಬರೆದಿದ್ದಾರೆ. ನಿರ್ದೇಶನದ ಜೊತೆ ಸತ್ಯ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕೂ ಸತ್ಯಪ್ರಕಾಶ್ ಕೈ ಹಾಕಿದ್ದಾರೆ. ಅವರಿಗೆ ಮತ್ತೋರ್ವ ನಿರ್ಮಾಪಕ ಮಂಜುನಾಥ್ ದಾಸೇಗೌಡ ಸಾಥ್ ನೀಡಿದ್ದಾರೆ. ‘ಪ್ರತೀ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡೀತಿರುತ್ತದೆ. ಸಂಜೆ ವಾಪಾಸ್ ಮನೆಗೆ ಬರುವಾಗ ಆತ ಗೆದ್ದಿರಬೇಕು ಅಥವಾ ಸೋತಿರಬೇಕು.
ಸಂಜೆ ಅವನು ಗೆಲ್ತಾನಾ, ಅವನ ಆದರ್ಶ ಗೆಲ್ಲುತ್ತಾ ಅಥವಾ ಯೋಚನೆ ಗೆಲ್ಲುತ್ತಾ ಎಂಬ ಐಡಿಯಾದಡಿ ಇಡೀ ಸಿನಿಮಾವನ್ನು ಹೆಣೆಯಲಾಗಿದೆ. ಈ ಚಿತ್ರ ಒಂದೇ ದಿನ ಒಂದೇ ಜಾಗದಲ್ಲಿ ನಡೆಯುವ ಕಥೆ’ ಎಂದರು ಸತ್ಯಪ್ರಕಾಶ್. ‘ಇಡೀ ಸಿನಿಮಾ ನಾರ್ಮಲ್ ಸಿನಿಮಾ ವಿನ್ಯಾಸದಲ್ಲಿಲ್ಲ. ಕ್ಯಾಂಡಿಡ್ ಫಾಮ್ರ್ಯಾಟ್‌ನಲ್ಲಿ ಚಿತ್ರೀಕರಿಸುತ್ತಿದ್ದೇವೆ. ಆಡಿಶನ್ ಸಬ್ಜೆಕ್ಟ್ ಪ್ರಧಾನವಾಗಿರುತ್ತೆ. ನಟ ಎಂಬವರು ನಿರ್ದೇಶಕನಾಗಿ, ಧರ್ಮಣ್ಣ ಪ್ರೊಡ್ಯೂಸರ್ ಪಾತ್ರ ಮಾಡಲಿದ್ದಾರೆ. ಉಳಿದಂತೆ ನೂರಾರು ಕಲಾವಿದರನ್ನು ಆಡಿಶನ್‌ಗೆ ಬರುವವರಂತೆ ಚಿತ್ರೀಕರಿಸಲಾಗಿದೆ. 50 ಜನ ಹೊಸ ನಟ ನಟಿಯರಿರುತ್ತಾರೆ. ಉಳಿದಂತೆ ರಿಯಲ್ ಟೆಕ್ನಿಷಿಯನ್ಸ್ ಸಿನಿಮಾದಲ್ಲೂ ಬರುತ್ತಾರೆ’ ಎಂದು ಸತ್ಯ ಪ್ರಕಾಶ್ ಈ ಹಿಂದೆ ತಿಳಿಸಿದ್ದಾರೆ.
ತಿರುಪತಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಅಪಮಾನ!
ಜೊತೆಗೆ ಈ ಹಿಂದಿನ ಚಿತ್ರಗಳಲ್ಲಾದರೆ ಜರ್ನಿ ಕಥೆ ಇತ್ತು, ಹಾಗಾಗಿ ಅಂಥಾ ಚಾಲೆಂಜಿಂಗ್ ಅನಿಸಲಿಲ್ಲ. ಆದರೆ ಈ ಸಿನಿಮಾ ಸಂಪೂರ್ಣ ಹೊಸತನದಿಂದ ಕೂಡಿದ್ದು, ಹೆಜ್ಜೆ ಹೆಜ್ಜೆಗೂ ಸವಾಲಿದೆ ಎಂಬುದು ಸತ್ಯಪ್ರಕಾಶ್ ಮಾತು. ಸತ್ಯ ಪಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರೈಮ್ ವೀಡಿಯೋದಲ್ಲಿ ಭಾರತ ಮತ್ತು 240 ದೇಶಗಳು ಹಾಗೂ ಪ್ರಾಂತ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಮೇ 5 ಕ್ಕೆ ಬಿಡುಗಡೆಯಾಗಲಿದೆ. ವಿಶೇಷವಾಗಿ ಈ ಸಿನಿಮಾ ಕುರಿತು ಟ್ವೀಟ್ (Tweet) ಮಾಡಿರುವ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar), ‘ಮ್ಯಾನ್ ಆಫ್ ದಿ ಮ್ಯಾಚ್ ಘೋಷಿಸುವ ಸಮಯ ಸನ್ನಿಹಿತವಾಗಿದೆ’ ಎಂದು ಹೇಳಿದ್ದಾರೆ.
