Nimagondu Sihi Suddi: ಕನ್ನಡ ನಾಡಿನಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ ಕಾರ್ಯ; ಇದು ʼನಿಮಗೊಂದು ಸಿಹಿ ಸುದ್ದಿʼನಾ?
ಕನ್ನಡ ನಾಡಿನಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ ಮಾಡಲಾಗಿದೆ. ಇದು ‘ನಿಮಗೊಂದು ಸಿಹಿ ಸುದ್ದಿ’ ಆಗಲಿದೆಯಾ? ಒಟ್ಟಿನಲ್ಲಿ ಇದು ಕರ್ನಾಟಕದಲ್ಲಿ ಹೊಸ ಪ್ರಯತ್ನ ಎನ್ನಬಹುದು.

ಒಂದು ಹೆಣ್ಣು ʼಸಿಹಿ ಸುದ್ದಿʼ ಕೊಟ್ಟರೆ ಖುಷಿಪಡಬಹುದು, ಆದರೆ ಪುರುಷ ಸಿಹಿಸುದ್ದಿ ಕೊಟ್ಟರೆ? ಹೌದು, ಇಲ್ಲೋರ್ವ ಗಂಡಸು ಗರ್ಭಿಣಿಯಾಗಿದ್ದಾನೆ. ಕರ್ನಾಟಕದಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ. ಹೌದು, ನೀವು ಓದುತ್ತಿರುವ ವಿಷಯವಂತೂ ಸತ್ಯ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ‘ನಿಮಗೊಂದು ಸಿಹಿಸುದ್ದಿ’ ಎನ್ನುವ ಸಿನಿಮಾ ತಂಡವೊಂದು ಸುದ್ದಿಗೋಷ್ಠಿ ಕರೆದು, ಅಲ್ಲಿ ಸೀಮಂತ ಕಾರ್‍ಯಕ್ರಮ ಆಯೋಜಿಸಿತ್ತು. ಸುದ್ದಿಗೋಷ್ಠಿಯಲ್ಲಿ ಪುರುಷನಿಗೆ ಸೀಮಂತ ಮಾಡೋದು ನೋಡಿ ಅಲ್ಲಿದ್ದವರಿಗೆಲ್ಲ ಅಚ್ಚರಿ ಆಗಿದ್ದಂತೂ ಸತ್ಯ.
ಗಂಡಸಿಗೆ ಸೀಮಂತ!
ಕಳೆದ ಸಂಕ್ರಾಂತಿ ಹಬ್ಬದ ಟೈಮ್‌ನಲ್ಲಿ ‘ನಿಮಗೊಂದು ಸಿಹಿಸುದ್ದಿ’ ಎನ್ನುವ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈಗ ಈ ಚಿತ್ರ ಟ್ರೇಲರ್ ರಿಲೀಸ್ ಮಾಡಿದೆ. ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಗರ್ಭಿಣಿ ಗಂಡಸಿಗೆ ಸೀಮಂತ ಮಾಡಲಾಗಿದೆ.
ಲೂಸ್ ಬಟ್ಟೆಯಲ್ಲಿ ಕಾಣಿಸಿಕೊಂಡ ಸೋನಾಕ್ಷಿ, ಗರ್ಭಿಣಿಯೆಂದು ಜ್ಯೂಮ್ ಹಾಕಿ ನೋಡಿ ಫ್ಯಾನ್ಸ್ ಕ್ಯೂರಿಯಾಸಿಟಿ!
ಈ ಸಿನಿಮಾದಲ್ಲಿ ಯಾರಿದ್ದಾರೆ? ಕಥೆ ಏನು?
ಈ ಚಿತ್ರದ ಮೂಲಕ ರಘು ಭಟ್ ಅವರು ನಿರ್ದೇಶಕರಾಗಿದ್ದಾರೆ. ಅಶ್ವಿನ್ ಹೇಮಂತ್, ಕಾವ್ಯಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೆಫ್ ಆಗಿರೋ ಹೀರೋ ಅರ್ಜುನ್ ಮದುವೆ ಆಗೋಕೆ ಇಷ್ಟಪಡೋದಿಲ್ಲ. ಹೀರೋ, ಹೀರೋಯಿನ್ ಪ್ರೀತಿಸಿ ದೈಹಿಕ ಸಂಪರ್ಕಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮ ಹೀರೋ ಗರ್ಭಿಣಿ ಆಗುತ್ತಾನೆ. ಗಂಡಸು ಗರ್ಭಿಣಿ ಆಗಿದ್ದು ಹೇಗೆ? ನಿಜಕ್ಕೂ ಏನಾಗಿತ್ತು ಎನ್ನುವ ಬಗ್ಗೆ ಈ ಸಿನಿಮಾವಿದೆ. ಒಟ್ಟಿನಲ್ಲಿ ವೈಜ್ಞಾನಿಕ ವಿಷಯಗಳನ್ನು ಹೇಳುವುದರ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಥರ ಕಥೆ ಸಾಗಿದೆ. ಒಟ್ಟಿನಲ್ಲಿ ಈ ಕಾನ್ಸೆಪ್ಟ್ ವಿಭಿನ್ನವಾಗಿದ್ದು, ಈ ಸಿನಿಮಾದಲ್ಲಿ ಏನು ಹೇಳಲಿದ್ದಾರೆ ಎಂಬ ಕುತೂಹಲವೇ ಜೋರಾಗಿದೆ.
ಈಗಾಗಲೇ ಚಿತ್ರರಂಗದಲ್ಲಿ LG BT Q ಆಧರಿತ ಸಿನಿಮಾಗಳು ಬಂದಿವೆ. ಹಿಂದಿಯಲ್ಲಿಯೂ ಕೂಡ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಈಗ ಕನ್ನಡದಲ್ಲಿ ಈ ರೀತಿ ಕಂಟೆಂಟ್ ಇಟ್ಟುಕೊಂಡು ಹೊಸ ಸಾಹಸ ಮಾಡಲಾಗಿದೆ.
ಕುಂಭ ಮೇಳದಲ್ಲಿ ಜನಿಸಿದ 12 ಮಕ್ಕಳಿಗೆ ನಾಮಕರಣದ ಸಂಭ್ರಮ, ಕೇಳಿ ಬರ್ತಿದೆ ಈ ಎಲ್ಲ ಹೆಸರು
ರಘು ಭಟ್ ಏನಂದ್ರು?
“ವಿಚಿತ್ರ ಪ್ರಯತ್ನ ಇದು. ಈ ಪ್ರಯತ್ನದ ಬಗ್ಗೆ ಇರುವ ಸಾಕಷ್ಟು ಪ್ರಶ್ನೆಗಳಿಗೆ ಫೆಬ್ರವರಿ 21ಕ್ಕೆ ಉತ್ತರ ಸಿಗಲಿದೆಯಂತೆ. ಈಗ ನಾನು ಈ ಬಗ್ಗೆ ಹೇಳಿದರೆ ಸಿನಿಮಾ ಬಿಟ್ಟುಕೊಟ್ಟ ಹಾಗೆ ಆಗುತ್ತದೆ. ಯಾವುದೇ ಸಿನಿಮಾದ ಕತೆಯನ್ನು ಟಚ್ ಮಾಡದೆ ನಾವು ಹೊಸದಾಗಿ ಕನ್ನಡದಲ್ಲಿ ಕಥೆಯನ್ನು ಹೇಳಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸದೆ, ಹಾಸ್ಯಾತ್ಮಕವಾಗಿ ಹೇಳಲಾಗಿದೆ” ಎಂದು ರಘು ಭಟ್ ಅವರು ಹೇಳಿದ್ದಾರೆ.
“ಜನತೆ ಹೊಸ ಪ್ರಯತ್ನವನ್ನು ಬೆಂಬಲಿಸಿದ್ದಾರೆ. ಕಮರ್ಷಿಯಲ್ ಸಿನಿಮಾ ಬಿಟ್ಟು ಬೇರೆ ಥರದ ಸಿನಿಮಾ ಮಾಡಬೇಕು ಅಂತ ಈ ಪ್ರಯತ್ನ ಮಾಡಿದ್ದೇವೆ. ಜನತೆ ತುಂಬ ಬುದ್ಧಿವಂತರು. ಹೊಸ ಪ್ರಯತ್ನಗಳಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದ ಬರವಣಿಗೆಯಿಂದಲೇ ಸಾಕಷ್ಟು ಹೋಮ್‌ವರ್ಕ್ ಮಾಡಿದ್ದೇವೆ. ಶೆಫ್ ಹೇಗೆ ಇರುತ್ತಾನೆ ಅಂತ ಹೋಟೆಲ್‌ಗಳಿಗೆ ಹೋಗಿ ನೋಡಿಕೊಂಡು ಬಂದಿದ್ದೇನೆ” ಎಂದು ರಘು ಭಟ್ ಅವರು ಹೇಳಿದ್ದಾರೆ.
ಗರ್ಭಿಣಿಯರು ಬೆಂಡೆಕಾಯಿ ತಿಂದರೆ ಏನಾಗುತ್ತೆ? ಮಗುವಿನ ಬೆಳವಣಿಗೆಗೆ ಒಳ್ಳೆಯದೋ, ಕೆಟ್ಟದ್ದೋ?
“ಸಿನಿಮಾ ಮೇಕರ್ ಆಗಿ ಈ ಸಿನಿಮಾ ಸ್ಕ್ರಿಪ್ಟ್‌ನಿಂದ ರಿಲೀಸ್‌ವರೆಗೆ ನಾನು ಒಂಥರ ಹೆರಿಗೆ ನೋವು ಅನುಭವಿಸಿದ್ದೇನೆ. ಈ ಮೂಲಕ ಹೆಣ್ಣು ಮಕ್ಕಳು ಒಂದು ಮಗುವನ್ನು ಹೆರುವಾಗ ಎಷ್ಟು ಕಷ್ಟಪಡ್ತಾರೆ ಅಂತ ಗೊತ್ತಾಯ್ತು. ಈ ಸಿನಿಮಾ ಅದ್ಭುತವಾಗಿ ಬಂದಿದೆ. ಆನಂದ್ ಸುಂದರೇಶ್ ಅವರು ಈ ಸಿನಿಮಾದ ಛಾಯಾಗ್ರಹಣ ಮಾಡಿದ್ದಾರೆ. ಓರ್ವ ಪುರುಷ ತಂದೆಯಾಗೋದು ಅಥವಾ ಪಾಲಕರಾಗೋದು ಹೊಸ ಜವಾಬ್ದಾರಿ. ಎಲ್ಲರೂ ಈ ಸಿನಿಮಾ ನೋಡಿ ಖುಷಿಪಡ್ತಾರೆ. ಒಟ್ಟೂ ಈ ಸಿನಿಮಾ 2.30 ಗಂಟೆಯಿದೆ” ಎಂದು ರಘು ಭಟ್ ಅವರು ಹೇಳಿದ್ದಾರೆ.