Asianet Suvarna News Asianet Suvarna News
breaking news image

ದರ್ಶನ್ ಬಗ್ಗೆ 'ಕಾಟೇರ' ಆರಾಧನಾ ರಾಮ್ ಹೇಳಿದ್ದೇನು; ಮಾಲಾಶ್ರೀ ಮಗಳ ಅಭಿಪ್ರಾಯವೇನು?

ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರಕ್ಕೆ ಹಿರಿಯ ನಟಿ ಕನಸಿನ ರಾಣಿ ಮಾಲಾಶ್ರೀ ಹಾಗೂ ದಿವಂಗತ ನಿರ್ಮಾಪಕರಾದ ರಾಮು ಮಗಳು ಆರಾಧನಾ ರಾಮ್ ನಾಯಕಿ. ಆರಾಧನಾ ಅವರಿಗೆ ವೃತ್ತಿಜೀವನದ ಮೊಟ್ಟಮೊದಲ ಚಿತ್ರವಾಗಿದೆ. ರಾಕ್‌ಲೈನ್ ವೆಂಕಟೇಶ್..

Malashri daughter actress Aradhana Ram talks about Kaatera hero darshan murder case incident srb
Author
First Published Jun 23, 2024, 5:00 PM IST

ಮಾಲಾಶ್ರೀ ಮಗಳು ಆರಾಧನಾ ರಾಮ್ ನಟ ದರ್ಶನ್ ನಾಯಕತ್ವದ ಸೂಪರ್ ಹಿಟ್ 'ಕಾಟೇರ' ಚಿತ್ರಕ್ಕೆ ನಾಯಕಿಯಾಗಿದ್ದು ಗೊತ್ತೇ ಇದೆ. ಇದೀಗ ದರ್ಶನ್ ಅವರ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಆರಾಧನಾ ರಾಮ್ ಉತ್ತರಿಸಿದ್ದಾರೆ. ಅವರಿಗೆ ಪ್ರಶ್ನೆ ಕೇಳಿದಾಗ ನಟ ದರ್ಶನ್ ಅವರು ಇನ್ನೂ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿ ಇದ್ದರು. ಬಳಿಕ, ಅಂದರೆ ಈಗ ನಟ ದರ್ಶನ್ ಅವರಿಗೆ ನ್ಯಾಯಾಂಗ ಬಂಧನವಾಗಿದೆ. ಹಾಗಿದ್ದರೆ, ಕಾಟೇರ ನಾಯಕಿ ಆರಾಧನಾ ನಟ ದರ್ಶನ್‌ ಬಗ್ಗೆ ಹೇಳಿದ್ದೇನು?

'ನಾನೇನೂ ಕಾಮೆಂಟ್ ಕೊಡೋಕೆ ಇಷ್ಟಪಡಲ್ಲ. ಯಾಕೆ ಅಂದ್ರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆಯಿಟ್ಕೊಂಡು ನಾವು ಮುಂದುವರಿರ್ಬೇಕು' ಎಂದಿದ್ದಾರೆ. 'ನಿಮ್ಗೆ ಸಹಜವಾಗಿಯೇ ತುಂಬಾ ಸಪೋರ್ಟ್‌ ಮಾಡಿದ್ರು ದರ್ಶನ್ ಸರ್' ಎಂದು ನಿರೂಪಕರು ಹೇಳುತ್ತಿದ್ದಂತೆ, ಆರಾಧನಾ ರಾಮ್ 'ಸಾರಿ, ನಾನು ಇದ್ರ ಬಗ್ಗೆ ಕಾಮೆಂಟ್ ಮಾಡೋಕೆ ಇಷ್ಟ ಪಡಲ್ಲ' ಎಂದಿದ್ದಾರೆ.  

ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?

ಮುಂದುವರೆದ ಪ್ರಶ್ನೆಗೆ 'ಕಾಟೇರ ಸಿನಿಮಾದಲ್ಲಿ ನಿಮ್ಗೆ ಸಿಕ್ಕ ಸಪೋರ್ಟ್‌ ಬಗ್ಗೆ ಏನ್ ಹೇಳ್ತೀರಾ' ಎಂದಿದ್ದಕ್ಕೆ 'ಇಲ್ಲ, ಕಾಟೇರ ಸಿನಿಮಾದಲ್ಲಿ ಇಡೀ ತಂಡ ನನಗೆ ಸಪೋರ್ಟಿವ್ ಆಗಿತ್ತು. ಎಲ್ಲಾ ರೀತಿಯಲ್ಲೂ ಎಕ್ಸ್‌ಪೀರಿಯನ್ಸ್ ತುಂಬಾ ಚೆನ್ನಾಗಿತ್ತು, ಬ್ಯಾಡ್ ಎಕ್ಸ್‌ಪೀರಿಯನ್ಸ್ ಅಂತೇನೂ ಇರ್ಲಿಲ್ಲ. ಆಫ್‌ಕೋರ್ಸ್‌ ಅದು, ಅದು ಪ್ರೊಪಶನಲ್‌ ಆಗಿ ಡಿಫ್ರೆಂಟ್‌ ಅಂಡ್ ಈಗ ನಡಿತಾ ಇರೋದೇ ಡಿಫ್ರೆಂಟ್. ಸೋ, ಆಗ ನಂಗೆ ಎಕ್ಸ್‌ಪೀರಿಯನ್ಸ್ ತುಂಬಾ ತುಂಬಾ ಚೆನ್ನಾಗಿತ್ತು. 

ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!

ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರಕ್ಕೆ ಹಿರಿಯ ನಟಿ ಕನಸಿನ ರಾಣಿ ಮಾಲಾಶ್ರೀ ಹಾಗೂ ದಿವಂಗತ ನಿರ್ಮಾಪಕರಾದ ರಾಮು ಮಗಳು ಆರಾಧನಾ ರಾಮ್ ನಾಯಕಿ. ಆರಾಧನಾ ಅವರಿಗೆ ವೃತ್ತಿಜೀವನದ ಮೊಟ್ಟಮೊದಲ ಚಿತ್ರವಾಗಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಚಿತ್ರವು ಸೂಪರ್ ಹಿಟ್ ದಾಖಲಿಸಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಕನ್ನಡದ ನಭೋ ನಭವಿಷ್ಯತಿ ಖ್ಯಾತಿಯ ನಟಿ ಮಾಲಾಶ್ರೀ ಮಗಳಿಗೆ ಈ ಮೂಲಕ ಮೊದಲ ಚಿತ್ರದಲ್ಲಿಯೇ ಯಶಸ್ಸು ಸಿಕ್ಕಿದೆ. ಮಾಲಾಶ್ರೀ ಕೂಡ ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ 'ನಂಜುಂಡಿ ಕಲ್ಯಾಣ'ದಲ್ಲಿಯೇ ಭಾರೀ ಪ್ರಸಿದ್ಧಿ ಪಡೆದಿದ್ದರು. 

ಕೊನೆಯ ಸಂದರ್ಶನದಲ್ಲಿ ಪುನೀತ್‌ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!

Latest Videos
Follow Us:
Download App:
  • android
  • ios