'ಲವ್ ಮಾಕ್ಟೇಲ್‌' ಖ್ಯಾತಿಯ ಮಿಲನಾ ನಾಗರಾಜ್‌ ಪಾನಿಪುರಿ ತಿಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಫೋಟೊವನ್ನು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಪಾನಿಪುರಿ ಟ್ರೆಂಡ್‌ ಹುಟ್ಟಿಸಿದ ಓನ್ಲಿ ಲವ್ ಸಿನಿಮಾ 'ಲವ್‌ ಮಾಕ್ಟೇಲ್‌' ಅದೆಷ್ಟೋ ಹೆಣ್ಣು ಮಕ್ಕಳ ಆಸೆ ಏನೆಂದು ಹುಡುಗರಿಗೆ ತಿಳಿಸಿತ್ತು. ಪಂಚ್ ಡೈಲಾಗ್‌ ಹೇಳುತ್ತಾ ಸ್ಟೇಜ್‌ ಬೈ ಸ್ಟೇಜ್‌ ಲವ್‌ ಲೈಫ್‌ ಹೇಗೆ ಬದಲಾಗುತ್ತದೆ ಎಂದು ಕೇವಲ 3 ಗಂಟೆಯಲ್ಲಿ ತೋರಿಸಿ ಜನರಲ್ಲಿ ಮುಂದಿನ ಭಾಗ ನೋಡಲು ನಿರೀಕ್ಷೆ ಹುಟ್ಟಿಸಿದ್ದಾರೆ ಡೈರೆಕ್ಟರ್ ಡಾರ್ಲಿಂಗ್ ಕೃಷ್ಣ. 

ಬರ್ತಡೇ ಗಿಫ್ಟ್:

ಇತ್ತೀಚಿಗೆ ಬರ್ತಡೇ ಆಚರಿಸಿಕೊಂಡ ಮಿಲನಾ ನಾಗರಾಜ್‌ ಲಾಕ್‌ಡೌನ್‌ ಪರಿಣಾಮ ಯಾವ ಪಾರ್ಟಿ ಏನೂ ಮಾಡದೇ ಸುಮ್ಮನಿದ್ದರು ಆದರೀಗ ಅವರ ಆಪ್ತ ಗೆಳತಿ ಪಾನಿಪೂರಿ ತಯಾರಿಸಿಕೊಟ್ಟಿದ್ದಾರೆ. ಅತ್ಯಂತ ರುಚಿಕರ ಬರ್ತಡೇ ಗಿಫ್ಟ್ ಪಡೆದ ಮಿಲನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಶೇರ್ ಮಾಡಿಕೊಂಡಿದ್ದಾರೆ.

'ಥ್ಯಾಂಕ್ಸ್‌ ಹೇಮಾ, ರುಚಿಕರ ಬರ್ತಡೇ ಗಿಫ್ಟ್‌ಗೆ' ಎಂದು ಬರೆದುಕೊಂಡಿದ್ದಾರೆ.

View post on Instagram

ಲವ್‌ ಮಾಕ್ಟೇಲ್‌ ಪಾನಿಪುರಿ:

ಲವ್‌ ಮಾಕ್ಟೇಲ್‌ ಸಿನಿಮಾ ವೀಕ್ಷಿಸಿದವರಿಗೆ ತಿಳಿಯುತ್ತದೆ ಪಾನಿ ಪುರಿ ಅಂದ್ರೆ ನಿಧಿಮಾಗೆ ಎಷ್ಟು ಇಷ್ಟ ಅಂದ್ರೆ ಮುಚ್ಚಿದ್ದ ಪಾನಿಪುರಿ ಅಂಗಡಿಯನ್ನು ತೆರೆಸಿ ತಿನ್ನುತ್ತಾರೆ. ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಸಿನಿಮಾದಲ್ಲಿ ಬಹುತೇಕ ರಿಯಲ್‌ ಲೈಫ್‌ ಘಟನೆಗಳನ್ನು ಹೊಂದಿಸಿಕೊಂಡು ಕಥೆ ಬರೆದಿದ್ದಾರೆ. ನಿಧಿಮಾ ಪಾತ್ರಕ್ಕೆ ಮಿಲನಾನೇ ಸ್ಪೂರ್ತಿ ಎಂದು ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.

ಲವ್‌ ಮಾಕ್‌ಟೇಲ್‌ ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ? ರಿಯಲ್‌ ಲೈಫ್‌ ಗುರು!

ಲಾಕ್‌ಡೌನ್‌ ಆದ್ಮೇಲೆ ಲವ್‌ ಮಾಕ್ಟೇಲ್‌-2

 ಈಗಾಗಲೇ ಮೊದಲ ಭಾಗ ನೋಡಿ ಪುಲ್‌ ಫಿದಾ ಆದ ಅಭಿಮಾನಿಗಳು ಎರಡನೇ ಭಾಗಕ್ಕೆ ಕಾಯುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಡೈರೆಕ್ಟರ್‌ ಕೃಷ್ಣ ಕಥೆ ರೆಡಿ ಮಾಡುತ್ತಿದ್ದಾರಂತೆ. ಆದಷ್ಟು ಬೇಗ ರೆಡಿಯಾಗಿ ಕೊರೋನಾ ದೂರವಾದ ನಂತರ ತೆರೆಮೇಲೆ ಬರಲಿ ಎಂಬುದು ಅಭಿಮಾನಿಗಳ ಆಸೆ.