ನಟಿ ಸಾಯಿ ಪಲ್ಲವಿ ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಸಿನಿಪ್ರಪಂಚಕ್ಕೆ ನಟಿಯಾಗಿ ಬಂದವರು. ಆದರೆ, ಆ ಬಳಿಕ ತಮಿಳು, ತೆಲುಗು ಹಾಗು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿ ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. 

ನಟಿ ಸಾಯಿಪಲ್ಲವಿ (Sai Pallavi) ಸಂದರ್ಶನವೊಂದರಲ್ಲಿ ತಮ್ಮ ಕಂಫರ್ಟ್ ಜೋನ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಾಯಿ ಪಲ್ಲವಿ 'ನನಗೆ ಲವ್ ಬಗ್ಗೆ ಎಕ್ಸ್‌ಪ್ರೆಸ್‌ ಮಾಡುವುದು ಎಂದರೆ ತುಂಬಾ ಇಷ್ಟ, ಅದು ನನ್ನ ಕಂಫರ್ಟ್ ಜೋನ್‌ ಎಂದಿದ್ದಾರೆ. ನಾನು ಬಹಳಷ್ಟು ವಿಭಿನ್ನ ರೋಲ್‌ಗಳನ್ನು ಸಿನಿಮಾಗಳಲ್ಲಿ ಪ್ಲೇ ಮಾಡಿದ್ದರೂ ಲವ್ ನನಗೆ ಹೆಚ್ಚು ಸುಲಭ ಹಾಗೂ ಇಷ್ವವಾಗಿದ್ದು.

ಏಕಂದರೆ, ನಾನು ನನ್ನೊಳಗೆ ತುಂಬಾ ಪ್ರೀತಿಯನ್ನು ತುಂಬಿಕೊಂಡಿದ್ದೇನೆ. ಅದನ್ನು ನನ್ನಿಂದ ಹೊರಗಿರುವ ಯಾರಿಗಾದರೂ ನೀಡಲು ಬಯಸುತ್ತಲೇ ಇರುತ್ತೇನೆ' ಎಂದಿದ್ದಾರೆ ಸಾಯಿ ಪಲ್ಲವಿ. 'ನಿಮ್ಮ ಫಸ್ಟ್ ಸಿನಿಮಾ 'ಪ್ರೇಮಂ' ಕೂಡ ಅಲ್ಟಿಮೇಟ್ ಲವ್ ಸ್ಟೋರಿ. ಅದರಲ್ಲಿ ಅಮೊಘವಾಗಿಯೂ ನಟಿಸಿರುವ ನೀವು ರಿಯಲ್ ಲೈಫ್‌ನಲ್ಲಿ ಯಾಕೆ ಯಾರನ್ನೂ ಲವ್ ಮಾಡಿಲ್ಲ' ಎಂಬ ನಿರೂಪಕರ ಪ್ರಶ್ನೆಗೆ ಕೂಡ ಸಾಯಿ ಪಲ್ಲವಿ ನಗುತ್ತ ಉತ್ತರ ನೀಡಿದ್ದಾರೆ. 'ಹೌದು, ನಾನು ನನ್ನೊಳಗೆ ತುಂಬಾ ಪ್ರೀತಿಯನ್ನು ತುಂಬಿಕೊಂಡಿರುವುದು, ಅದನ್ನು ಹೊರಗಿನ ಪ್ರಪಂಚಕ್ಕೆ ನೀಡುತ್ತಿರುವುದು ಸುಳ್ಳಲ್ಲ.

ನಾಗ ಚೈತನ್ಯ ಜತೆ ಹತ್ತು ವರ್ಷದ ಬಳಿಕ ಮತ್ತೆ ತೆರೆಯಾಟ ಶುರು ಮಾಡ್ಬಿಟ್ರಲ್ಲ ಪೂಜಾ ಹೆಗಡೆ!

ಆದರೆ, ನನ್ನನ್ನು ಲವ್ ಮಾಡುತ್ತಿದ್ದ ಒಬ್ಬ ಹುಡುಗನ ಪ್ರೇಮವನ್ನು ನಾನು ಯಾಕೆ ರಿಜೆಕ್ಟ್ ಮಾಡಿದೆ ಎಂಬುದನ್ನು ನಾನು ಬಹಿರಂಗವಾಗಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ನಾನು ಅದನ್ನು ಓಪನ್ ಆಗಿ ಹೇಳಿದರೆ ಆತನಿಗೆ ಹರ್ಟ ಆಗುತ್ತದೆ. ಅಗ ನನ್ನ ಲವ್‌ ಬಗ್ಗೆ ನನಗೇ ಪ್ರಶ್ನೆ ಮೂಡುತ್ತದೆ. ಹೌದು, ನಾನು ನನ್ನ ವೈಯಕ್ತಿನ ಬದುಕಿನ ಲವ್ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ನನ್ನ ಪ್ರಕಾರ ಲವ್ ಎಂದರೆ ಒಬ್ಬ ವ್ಯಕ್ತಿಯನ್ನು ನಾನು ಲವ್ ಮಾಡುವುದು ಅಲ್ಲವೇ ಅಲ್ಲ.

ಸಕ್ಸಸ್‌ಫುಲ್ ಆಗಿರುವಾಗ ತುಂಬಾನೇ ಕೇರ್‌ಫುಲ್ ಆಗಿರಬೇಕು; ಹೀಗ್ಯಾಕೆ ಹೀಳಿದ್ರು ರಾಕಿಂಗ್ ಸ್ಟಾರ್ ಯಶ್?

ನಾನು ನನ್ನಲ್ಲಿ ಲವ್ ತುಂಬಿಕೊಂಡು ಅದನ್ನು ಹೊರಜಗತ್ತಿಗೆ ಹರಿಸುವುದು, ಅದನ್ನು ಸಮಾಜಕ್ಕೆ ಕೊಡುತ್ತಲೇ ಇರುವುದು. ಯಾರಿಗೆ ಯಾವಾಗ ಎಷ್ಟು ಅಗತ್ಯವಿದೆಯೋ ಅದನ್ನು ಎಲ್ಲರೂ ಸ್ವೀಕರಿಸಲು ಅರ್ಹರು. ಹಾಗೆ ಬದುಕುವುದು ನನ್ನ ಬಯಕೆ, ಅದನ್ನೇ ನಾನು ತುಂಬಾ ಸಮಯದಿಂದ ಮಾಡಿಕೊಂಡು ಬಂದಿದ್ದೇನೆ' ಎಂದಿದ್ದಾರೆ ಸಾಯಿ ಪಲ್ಲವಿ. 

ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ಸತ್ಯವನ್ನು ಬೇಗನೇ ಹೇಳಬಾರದಿತ್ತೇ ಅಂತಿದಾರಲ್ಲ!

ಅಂದಹಾಗೆ, ನಟಿ ಸಾಯಿ ಪಲ್ಲವಿ ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಸಿನಿಪ್ರಪಂಚಕ್ಕೆ ನಟಿಯಾಗಿ ಬಂದವರು. ಆದರೆ, ಆ ಬಳಿಕ ತಮಿಳು, ತೆಲುಗು ಹಾಗು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿ ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. ಸೋಲಿಗಿಂತ ಗೆಲುವನ್ನೇ ಹೆಚ್ಚು ನೋಡಿರುವ ಸಾಯಿ ಪಲ್ಲವಿಗೆ ಪ್ರಪಂಚದಾದ್ಯಂತ ಬಹಳಷ್ಟು ಅಭಿಮಾನಿಗಳು ಇದ್ದಾರೆ.

ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?

ಈ ಕಾರಣಕ್ಕೇ ಇರಬಹುದು, ಈಗ ರಾಕಿಂಗ್ ಸ್ಟಾರ್ ಅಭಿನಯದ ಮುಂಬರುವ, ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ಚಿತ್ರಕ್ಕೆ ಹಿರೋಯಿನ್ ಎನ್ನಲಾಗುತ್ತಿದೆ. ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತೂ ಮೋಹನ್‌ದಾಸ್ ಕೂಡ ಮಲಯಾಳಂ ಮೂಲದವರೇ ಆಗಿರುವ ಕಾರಣಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆ ಕನ್ಫರ್ಮ್ ಎನ್ನಲಾಗುತ್ತಿದೆ, ಸತ್ಯವನ್ನು ಕಾಲವೇ ಉತ್ತರಿಸಬೇಕು, ಕಾದು ನೋಡೋಣ!

ಅಮೃತಂ ಕೊಟ್ಟ ಕಾಟಕ್ಕೆ ಬೇಸತ್ತು ಅತ್ಮಹತ್ಯೆ ಮಾಡಿಕೊಂಡರೇ ನಟಿ ಮಂಜುಳಾ; ಅಂಥ ದುರಂತ ಸಾವಿನ ರಹಸ್ಯವೇನು?