ಅಮೃತಂ ಕೊಟ್ಟ ಕಾಟಕ್ಕೆ ಬೇಸತ್ತು ಅತ್ಮಹತ್ಯೆ ಮಾಡಿಕೊಂಡರೇ ನಟಿ ಮಂಜುಳಾ; ಅಂಥ ದುರಂತ ಸಾವಿನ ರಹಸ್ಯವೇನು?
ಮಂಜುಳಾ ಸಾವಿನ ಬಗ್ಗೆ ಇಂದಿಗೂ ಹಲವರು ಸಂದೇಹ ವ್ಯಕ್ತಪಡಿಸುತ್ತಾರೆ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಾವಿಗೆ ಶರಣಾದ ನಟಿ ಮಂಜುಳಾರಿಗೆ, ಅದಾಗಲೇ ಮದುವೆಯಾಗಿ ಒಬ್ಬ ಮಗ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಎಂ ಕರುಣಾನಿಧಿ ಅಕ್ಕನ ಮಗ 'ಅಮೃತಂ..
ಕನ್ನಡದ ಅದ್ಭುತ ಕಲಾವಿದೆಯರಲ್ಲಿ ಒಬ್ಬರಾದ ನಟಿ ಮಂಜುಳಾ (Manjula) ಅವರು 1986 ಸೆಪ್ಟೆಂಬರ್ 12 ರಂದು ನಿಧನರಾದರು. ಆದರೆ ಅದಕ್ಕೂ ಒಂದು ವಾರ ಮೊದಲು ಅವರ ಮೈಗೆ ಬೆಂಕಿ ತಗುಲಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮಂಜುಳಾ ಅಸುನೀಗಿದ್ದಾರೆ ಎನ್ನಲಾಗಿದೆ. ಆದರೆ, ಮಂಜುಳಾ ಮೈಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಗ್ಯಾಸ್ ಸ್ಟೌವ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಅದೇ ಕಾರಣಕ್ಕೆ ಅವರು ಸತ್ತಿದ್ದು ನಿಜವೇ ಸುಳ್ಳೇ ಎಂಬ ಬಗ್ಗೆ ಇಂದಿಗೂ ಹಲವರಲ್ಲಿ ಸಂದೇಹವಿದೆ.
ನಟಿಯಾಗಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮಂಜುಳಾರಿಗೆ (Actress Manjula) ಅಂದಿನ ಕಾಲದ ಎಲ್ಲ ನಟರೊಂದಿಗೂ ನಟಿಸುವ ಚಾನ್ಸ್ ದೊರಕಿತ್ತು. ಡಾ ರಾಜ್‌ಕುಮಾರ್ (Dr Rajkumar), ಡಾ ವಿಷ್ಣುವರ್ಧನ್ (Vishnuvardhan),ಕಲ್ಯಾಣ್ ಕುಮಾರ್, ಶ್ರೀನಾಥ್ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಮಂಜುಳಾ ಅಂದು ಬಹುಬೇಡಿಕೆಯ ಸ್ಟಾರ್ ನಟಿಯಾಗಿದ್ದರು. ಆದರೆ ಕೇವಲ 32ನೇ ವಯಸ್ಸಿನಲ್ಲಿಯೇ ತೀರಿಕೊಂಡರು. ಮಂಜುಳಾ ಅವರು ಚಿತ್ರರಂಗ ಹಾಗು ಅಪಾರ ಅಭಿಮಾನಿಗಳನ್ನು ಅಗಲಿ ದೂರ ಹೋಗಿಬಿಟ್ಟರು.
ಸರಿತಾ ಬಿಟ್ಟರೆ ಸುಧಾರಾಣಿ ನನ್ನ ಫೇವರೆಟ್ ನಟಿ; ಹೀಗಂದಿದ್ರು ಕನ್ನಡದ ಮೋಸ್ಟ್ Top ಸ್ಟಾರ್ ನಟ!
ಮಂಜುಳಾ ಸಾವಿನ ಬಗ್ಗೆ ಇಂದಿಗೂ ಹಲವರು ಸಂದೇಹ ವ್ಯಕ್ತಪಡಿಸುತ್ತಾರೆ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಾವಿಗೆ ಶರಣಾದ ನಟಿ ಮಂಜುಳಾರಿಗೆ, ಅದಾಗಲೇ ಮದುವೆಯಾಗಿ ಒಬ್ಬ ಮಗ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಎಂ ಕರುಣಾನಿಧಿ (M Karunanidhi) ಅಕ್ಕನ ಮಗ 'ಅಮೃತಂ (Amrutham)ಜತೆ ವಿವಾಹವಾಗಿದ್ದರು ನಟಿ ಮಂಜುಳಾ. ಅವರಿಗೊಬ್ಬ ಮಗನೂ ಹುಟ್ಟಿದ. ಆದರೆ, ಕಾಲಕಳೆದಂತೆ ಗಂಡ-ಹೆಂಡತಿ ನಡುವೆ ಅನ್ಯೋನ್ಯತೆ ಇರಲಿಲ್ಲ, ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ (Madras) ಸೇರಿಕೊಂಡಿದ್ದರು ಎನ್ನಲಾಗಿದೆ.
ಶರತ್ ಸಿಗಲಿಲ್ಲ, ಗಂಗೂಲಿಯೂ ಕೈ ಹಿಡಿಯಲಿಲ್ಲ; 'ಮನೆಹಾಳಿ' ಪಟ್ಟದ ನಟಿ ನಗ್ಮಾ ಮುಂದೇನ್ ಮಾಡ್ತಾರಂತೆ?
'ಆ ಬಳಿಕ ಒಬ್ಬಂಟಿಯಾಗಿದ್ದ ಮಂಜುಳಾ ಚಾಮರಾಜನಗರದ (Chamarajanagara) ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಸಿಯೇನೋ ಆಗಿತ್ತು, ಜತೆಯಲ್ಲಿ ಓಡಾಡುತ್ತಲೂ ಇದ್ದ ಆ ಹುಡುಗ ಮಂಜುಳಾರನ್ನು ಮದುವೆಯಾಗಲು ಮಾತ್ರ ನಿರಾಕರಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಬೇಸತ್ತಿದ್ದ ನಟಿ ಮಂಜುಳಾ ಸ್ವತಃ ತಾವೇ ಗ್ಯಾಸ್ ಲೀಕ್ ಮಾಡಿಕೊಂಡು, ಕಡ್ಡಿ ಗೀರಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ತಕ್ಷಣಕ್ಕೆ ಪ್ರಾಣಪಕ್ಷಿ ಹಾರಿ ಹೋಗಲಿಲ್ಲ, ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿಕೊಂಡು ಅಲ್ಲಿ ವಾರಗಟ್ಟಲೇ ನರಳಿ ಸತ್ತರು' ಎನ್ನುತ್ತಾರೆ ಕೆಲವರು. ಆದರೆ ಅದು ಹೌದು ಎನ್ನಲು ಯಾವುದೇ ಸಾಕ್ಷಿಯಿಲ್ಲ. ಒಟ್ಟಿನಲ್ಲಿ ನಟಿ ಮಂಜುಳಾ ದುರಂತ ಸಾವು ಕಂಡಿದ್ದತೂ ನಿಜ!
'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?
ಸತ್ಯ ಸಂಗತಿ ಏನೇ ಆಗಿರಲಿ, ನಟಿ ಮಂಜುಳಾ ಸತ್ತಿದ್ದು (Death)ಮಾತ್ರ ಅತಿ ಕಡಿಮೆ ವಯಸ್ಸಿನಲ್ಲಿ ಎಂಬುದು ತುಂಬಾ ದುಃಖಕರವಾದ ಸಂಗತಿಯೇ ಸರಿ. ಮಂಜುಳಾ ಅನಿರೀಕ್ಷಿತ ಸಾವಿನಿಂದ ಅಂದು ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಕನ್ನಡನಾಡಿನ ಸಿನಿಪ್ರೇಕ್ಷಕರು ನಿಜವಾಗಿಯೂ ದಿಗ್ಭ್ರಮೆಗೊಂಡಿದ್ದರು. ಮಂಜುಳಾ ಸತ್ತು ಇಂದಿಗೆ ಬರೋಬ್ಬರಿ 40ಕ್ಕೂ ವರ್ಷಗಳು ಕಳೆದು ಹೋಗಿದ್ದರೂ, ಇಂದಿಗೂ ಜನರು ಹಾಗು ಕನ್ನಡನಾಡು ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದರೆ ಅವರ ಅಮೋಘ ಕಲಾಸೇವೆಯೇ ಹೊರತೂ ಬೇರಿನ್ನೇನೂ ಅಲ್ಲ.
ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?