ಮಂಡ್ಯದ ಗಂಡು ಅಂಬರೀಶ್‌ರಂತೆ ನಟ ದರ್ಶನ್‌ಗೂ ಒಂದು ಆಟಿಟ್ಯೂಡ್ ಇದೆ; ಕುಮಾರ್ ಬಂಗಾರಪ್ಪ
ರಾಜ್ಯದಲ್ಲಿ ಸ್ನೇಹ ಹಾಗೂ ನೇರ ಮಾತಿನೊಂದಿಗೆ ಖಡಕ್ ಆಟಿಟ್ಯೂಡ್ ಹೊಂದಿದ್ದ ನಟ ಅಂಬರೀಶ್ ಅವರಂತೆಯೇ ನಟ ದರ್ಶನ್ ಒಂದು ಆಟಿಟ್ಯೂಡ್ ಹೊಂದಿದ್ದಾರೆ ಎಂದು ನಟ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರು (ಜು.30): ಕರ್ನಾಟಕದಲ್ಲಿ ಸಿನಿಮಾ ಅಭಿಮಾನಿಗಳನ್ನು ಅನೇಕ ನಾಯಕ ನಟರು ಅಭಿಮಾನಿ ದೇವರುಗಳು ಎಂದು ಕರೆಯುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಅಂಬರೀಶ್, ವಿಷ್ಣುವರ್ಧನ್ ಅವರಿಗೆ ತಮ್ಮದೇ ಆದ ಆಟಿಟ್ಯೂಟ್ ಇತ್ತು. ಅದೇ ರೀತಿ ಹಾರ್ಡ್ ವರ್ಕಿಂಗ್ ಫೆಲೋ ನಟ ದರ್ಶನ್‌ಗೂ ಒಂದು ಆಟಿಟ್ಯೂಡ್ ಇದೆ. ಅಭಿಮಾನಿಗಳೇ ದೇವರು ಅನ್ನಿಸಿಕೊಂಡ ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ನಟ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆಯ ಘಟನೆ ನಡೆಯಬಾರದಿತ್ತು. ಆದರೆ, ಕೈ ತಪ್ಪಿನಿಂದಾಗಿ ಘನಘೋರ ನಡೆದು ಬಿಟ್ಟಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ಹೊಗಳೊದಾಗ್ಲಿ ತೆಗಳುವುದು ಇರುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಅಪ್ಪಾಜಿ ಅಭಿಮಾನಿಗಳೇ ದೇವರು ಅಂತ ಹೇಳಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ದರ್ಶನ್ ಈ ಪ್ರಕರಣದ ಬಂಧಿಯಾಗಿದ್ದಾರೆ. ಈಗ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಮಾತಾಡೋದು ಅಷ್ಟು ಯೋಗ್ಯವಲ್ಲ. ದರ್ಶನ್ ರಿಂದ ಈ ಪ್ರಕರಣ ಆಗಿದೆ ಅಂದ್ರೆ ನ್ಯಾಯಾಲಯ ಇದೆ ಕಾನೂನು ಇದೆ. ಚಿತ್ರರಂಗದಲ್ಲಿ ಯಾರಿಗೇ ನೋವಾದ್ರು ಕುಟುಂಬದ ಎಲ್ಲಾರಿಗೂ ನೋವಾಗುತ್ತದೆ. ಈ ಘಟನೆ ದರ್ಶನ್ ಅವರಂದಾನೆ ಆಗಿದ್ರೆ ಅದನ್ನ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ದೇವರು ಇದ್ದಾನೆ ತಪ್ಪು ಮಾಡಿದವರಿಗೆ ಶಿಕ್ಷೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡ್ತಾನೆ ಎಂದು ತಿಳಿಸಿದರು.
'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ
ನಾನು ಕೂಡ ದರ್ಶನ್ ಜೊತೆ ಒಂದು ಸಿನಿಮಾ ಮಾಡಿದ್ದೀನಿ. ಸುಮಾರು ಒಂದು ತಿಂಗಳ ದರ್ಶನ್ ಜೊತೆ ಇದೀನಿ. ಈ ವೇಳೆ ದರ್ಶನ್ ಹಾರ್ಡ್ ವರ್ಕಿಂಗ್ ಫೆಲೋ ಎನ್ನುವುದು ತಿಳಿದುಬಂದಿದೆ. ದರ್ಶನ್‌ಗೆ ಅವರದ್ದೇ ಆದಂತಹ ಒಂದು ಅಟಿಟ್ಯೂಡ್ ಇದೆ. ಕೊಲೆ ಮಾಡಿದ್ದಾರೆ ಅಥವಾ ಮಾಡಿಲ್ಲ ಎಂದು ನಾನು ಹೇಳಲು ಆಗಲ್ಲ. ಆದರೆ, ನಟ ದರ್ಶನ್ ತುಂಬಾ ಹಾರ್ಡ್ ವರ್ಕಿಂಗ್ ಮಾಡುತ್ತಾ ಕೆಳಮಟ್ಟದಿಂದ ಮೇಲಕ್ಕೆ ಬಂದು ಸೂಪರ್ ಸ್ಟಾರ್ ಆಗಿದ್ದಾನೆ. ಕೆಳಮಟ್ಟದಿಂದ ಬಂದು ಸ್ಟಾರ್ ಆದ ವ್ಯಕ್ತಿಗೆ ಹೀಗಾಗಿದೆ. ಈ ಪ್ರಕರಣ ಚಿತ್ರರಂಗದ ಮೇಲೆ ಪ್ರಭಾವ ಬೀರುತ್ತದೆ.
ರಾಜ್ಯದಲ್ಲಿರುವ ಕನ್ನಡ ಚಿತ್ರರಂಗದ ಅಭಿಮಾನಿಗಳ ಮೇಲೆ ಜನರಿಗೆ ಅಪಾರ ಅಭಿಮಾನವಿದೆ. ಆದರೆ, ನಟ ದರ್ಶನ್ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲಿನಲ್ಲಿರದ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ, ನಟರು ಪ್ರತಿ ಹೆಜ್ಜೆಇ ಇಡುವಾಗಲೂ ಮೈತುಂಬಾ ಕಣ್ಣಾಗಿ ಇಟ್ಟುಕೊಂಡಿರಬೇಕು ಎಂದು ಮಧು ಬಂಗಾರಪ್ಪ ಸಲಹೆ ನೀಡಿದರು.
ಬೆಂಗಳೂರು: ಯಮಲೂರಿನ ದಿವ್ಯಶ್ರೀ ಟೆಕ್‌ಪಾರ್ಕ್ ಮನೆಯಲ್ಲಿ ವಜ್ರದ ಸರ, ಚಿನ್ನಾಭರಣ ಕಳ್ಳತನ ಮಾಡಿದ ಮಹಿಳೆ!
ರೋಲ್ ಮಾಡೆಲ್ ಆದವರು ಇತರ ಮಾಡಿದಾಗ ಪರಿಣಾಮ ಬಿರುತ್ತದೆ. ಅಭಿಮಾನಿಗಳು ದೇವರೆನಿಸಿಕೊಂಡ ನಮ್ಮ ರಾಜ್ಯದಲ್ಲಿ ಈ ಘಟನೆ ಆಗಬಾರದಿತ್ತು. ನಮ್ಮ ರಾಜ್ಯದಲ್ಲಿ ಡಾ. ರಾಜ್ ಕುಮಾರ್ ಅವರನ್ನು ನಾವೆಲ್ಲರೂ ರೋಲ್ ಮಾಡೆಲ್ ಎಂದುಕೊಳ್ಳುತ್ತಿದ್ದೆವು. ಅವರು ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದಕ್ಕೆ ಅಣ್ಣಾವ್ರು ರೋಲ್ ಮಾಡೆಲ್ ಆಗಿದ್ದರು. ರಾಜ್ ಕುಮಾರ್ ಅವರಂತೆ ಸರಳತೆ, ನಮ್ರತೆ ಹಾಗೂ ಯಾರಿಗೂ ನೋವಾಗದಂತೆ ನಡೆದುಕೊಳ್ಳುತ್ತಿದ್ದರು. ಇನ್ನು ಅಂಬರೀಶ್ ಹಾಗೂ ವಿಷ್ಣುವರ್ಧನ್ ಉತ್ತಮ ಸ್ನೇಹ ಬಾಂಧವ್ಯವಿತ್ತು. ಅದರೊಂದಿಗೆ ನಟ ಅಂಬರೀಶ್ ಅವರಿಗೆ ಅವರದ್ದೇ ಆದ ಆಟಿಟ್ಯೂಟ್ ಇತ್ತು. ಕೆಲವೊಂದು ವಿಚಾರದಲ್ಲಿ ಅವರು ತ್ಯಾಗ ಮಾಡಿಕೊಂಡಿದ್ದರು ಎಂದು ತಿಳಿಸಿದರು.