Asianet Suvarna News Asianet Suvarna News

ನಿಗೂಢವಾಗಿ ನಾಪತ್ತೆಯಾದ ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?

 ನಿಗೂಢವಾಗಿ ನಾಪತ್ತೆಯಾದ ದರ್ಶನ್​  ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?
 

Letter written by Darshans manager Mallikarjuna who disappeared mysteriously viral suc
Author
First Published Jun 16, 2024, 3:56 PM IST

ಕೊಲೆ ಕೇಸ್​ನಲ್ಲಿ ಸಿಲುಕಿರುವ ಸ್ಯಾಂಡಲ್​ವುಡ್​​ ನಟ ದರ್ಶನ್​ ಅವರ ಬಗ್ಗೆ ಅಗೆದಷ್ಟೂ, ಬಗೆದಷ್ಟೂ ಹಲವು ಸಂಗತಿಗಳು ಪೊಲೀಸರ ಕೈಗೆ ಸೇರುತ್ತಲೇ ಇದೆ.  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ದರ್ಶನ್​ ಅವರ ಬಗ್ಗೆ ವಿಚಾರಿಸುವ ವೇಳೆ ಅವರ ಮ್ಯಾನೇಜರ್​ ಆಗಿದ್ದಂಥ ಮಲ್ಲಿಕಾರ್ಜುನ​ ಅವರ ನಿಗೂಢ ಕಣ್ಮರೆಯಾಗಿರುವ ಆಘಾತಕಾರಿ ವಿಷಯವೂ ಹೊರಕ್ಕೆ ಬಂದಿದೆ. 2018ರಿಂದಲೂ ನಾಪತ್ತೆಯಾಗಿರುವ ಈ ಮ್ಯಾನೇಜರ್​ಗೂ ದರ್ಶನ್​ ಮತ್ತು ಅವರ ಗ್ಯಾಂಗ್​ಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ಇದಾಗಲೇ ತನಿಖೆ ಶುರುವಿಟ್ಟುಕೊಂಡಿದ್ದಾರೆ. ಈ ಮಿಸ್ಸಿಂಗ್​ ಕೇಸ್​ ಬಗ್ಗೆ ಇದಾಗಲೇ ವಿವಿಧ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ, ಈ ಹಿಂದೆ ಮಲ್ಲಿಕಾರ್ಜುನ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹಲ್​ಚಲ್​ ಸೃಷ್ಟಿಸಿತ್ತಿದೆ. ಇದು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗಿದ್ದು, ಈ ಪತ್ರದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

ಅಷ್ಟಕ್ಕೂ ಈ ಪತ್ರದಲ್ಲಿ ಬರೆದಿರುವುದು ಏನೆಂದರೆ, ಪ್ರೀತಿಯ ತೇಜಸ್ವಿನಿಗೆ , ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು.  ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್​ ಬಂದು ಸಾಲ ತೀರಿಸಿ ನನಗಂಟಿರೋ ಕಳಂಕನಾ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ . ದಯವಿಟ್ಟು ನನ್ನನ್ನು ಕ್ಷಮಿಸಿ. ಇಂತಿ ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ ಎಂದು ಬರೆದು ಸಹಿ ಹಾಕಲಾಗಿದೆ.

ದರ್ಶನ್‌ ಪ್ರಕರಣ: ಸಿನಿಮಾ ನಟನಾಗಿ ಒಬ್ಬರ ಜೀವನ ಹಾಳು ಮಾಡ್ತೀದಿರಿ ಅಂದ್ರೆ ಇದು ಅಪರಾಧ, ಶೆಟ್ಟರ್
 
ಅಷ್ಟಕ್ಕೂ ಈ ಪತ್ರ ಖುದ್ದು ಮಲ್ಲಿಕಾರ್ಜುನ ಅವರು ಬರೆದದ್ದೇ ಅಲ್ಲವೇ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪತ್ರವಂತೂ ಸೋಷಿಯಲ್​  ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಮಲ್ಲಿಕಾರ್ಜುನ ಅವರು,  2011ರಿಂದಲೂ ದರ್ಶನ್ ಮ್ಯಾನೇಜರ್ ಆಗಿದ್ದರು. ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು.  ಈ ಬಗ್ಗೆ ಅರ್ಜುನ್​ ಸರ್ಜಾ ದೂರು ನೀಡಿ, ತಮಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದಿದ್ದರು. ಈ ಘಟನೆ ಬಳಿಕ ದರ್ಶನ್​ ಅವರು  ಮಲ್ಲಿಕಾರ್ಜುನ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಇದಾದ ಬಳಿಕ  ರಾತ್ರೋರಾತ್ರಿ ಮಲ್ಲಿಕಾರ್ಜುನ 2018ರಲ್ಲಿ ನಾಪತ್ತೆಯಾಗಿದ್ದರು. ಇವರ ಮೇಲೆ ಇನ್ನೂ ವಂಚನೆ ಆರೋಪಗಳು ಇದ್ದವು. ದರ್ಶನ್‌ಗೆ ಸೇರಿದ 10 ಕೋಟಿ ಹಣ ವಂಚನೆ ಮಾಡಿದ್ದಾಗಿಯೂ ಆರೋಪಿಸಲಾಗಿತ್ತು. ಇದೀಗ ಅವರ ನಾಪತ್ತೆ ಪ್ರಕರಣ ಮಹತ್ವ ಪಡೆದುಕೊಳ್ಳುತ್ತಿದೆ.

ಅದೇ ಇನ್ನೊಂದೆಡೆ,  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ದರ್ಶನ್ ಸೇರಿದಂತೆ ಅವರ  ಸ್ನೇಹಿತೆ-ನಟಿ ಪವಿತ್ರಾ ಗೌಡ  13 ಜನ  ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.  ಹೀಗಾಗಿ ಅವರ ಮುಂದಿನ ಚಿತ್ರಗಳು ನಿಂತೋಗುತ್ತಾ ಎಂಬ ಪ್ರಶ್ನೆಗಳು ಇದೀಗ ಉದ್ಭವಾಗುತ್ತಿವೆ.  ದರ್ಶನ್ ನಟನೆಯ ಡೆವಿಲ್ ಸಿನಿಮಾದ ಶೂಟಿಂಗ್ ನಿಲ್ಲಿಸಲು ಚಿಂತನೆ ನಡೆಸಿದೆಯಂತೆ ಎಂದು ಹೇಳಲಾಗುತ್ತಿದೆ. ಡೆವಿಲ್ ಶುರುವಾದ ಮೇಲೆ ಕಾಂಟ್ರವರ್ಸಿಲ್ಲೇ ಇದೆ. "ಡೆವಿಲ್" ಮೊದಲ ಶೆಡ್ಯೂಲ್ ವೇಳೆ ಕೈ ಪೆಟ್ಟು ಮಾಡಿಕೊಂಡು ದರ್ಶನ್ ಆಪರೇಷನ್‌ಗೆ ಒಳಗಾಗಿದ್ದರು. ಎರಡನೇ ಶೆಡ್ಯೂಲ್ ಶುರುವಾದಾಗ ದರ್ಶನ್ ನಾಯಿಯಿಂದ ಸ್ಟೇಷನ್ ಮೆಟ್ಟಿಲು ಹತ್ತಿದ್ದರು. ಜೆಟ್ ಲ್ಯಾಗ್ ಪಬ್‌ನಲ್ಲಿ  ಬೆಳಗಿನ ಜಾವದ ತನಕ ಪಾರ್ಟಿ ಕೇಸ್‌ನಲ್ಲೂ ದರ್ಶನ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈಗ ಮರ್ಡರ್​ ಕೇಸ್​ ಎದುರಿಸುತ್ತಿದ್ದಾರೆ. 

CT Ravi on Darshan case: ನಟ ದರ್ಶನ್‌ ಮನಸ್ಥಿತಿ ಅಷ್ಟು ಕ್ರೂರ ಎಂದು ಯಾರೂ ಭಾವಿಸಿರಲಿಲ್ಲ: ಸಿಟಿ ರವಿ

Latest Videos
Follow Us:
Download App:
  • android
  • ios