Mandeep Roy ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ
ಹೃದಯಘಾತದಿಂದ ಕೊನೆಯುಸಿರೆಳೆದ ಹಿರಿಯ ನಟ ಮಂದೀಪ್ ರಾಯ್. ಒಂದು ತಿಂಗಳ ಹಿಂದೆಯೂ ಹೃದಯಾಘಾತವಾಗಿತ್ತು ಎನ್ನಲಾಗಿದೆ....

ಕನ್ನಡ ಚಿತ್ರರಂಗ ಹೆಸರಾಂತ ನಟ ಮಂದೀಪ್ ರಾಯ್ ಜನವರಿ 29ರಂದು ರಾತ್ರಿ 1.30ಕ್ಕೆ ರಿಂದ 2 ಗಂಟೆಯ ಮಧ್ಯೆ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 72 ವರ್ಷದ ಮಂದೀಪ್ ರಾಯ್ ಅವರ ಅಂತ್ಯಕ್ರಿಯೆ ಹೆಬ್ಬಾಳ ಕ್ರಿಮೆಟೋರಿಯಂನಲ್ಲಿ ನೆರವೇರಲಿದೆ ಎಂದು ಪುತ್ರಿ ಅಕ್ಷತಾ ತಿಳಿಸಿದ್ದಾರೆ.
500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಮಂದೀಪ್ ರಾಯ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟವರು ಶಂಕರ್ ನಾಗ್. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಕಳೆದಿದ್ದು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಮುಂಬೈನವರಾಗಿರುವ ಮಂದೀಪ್ ರಾಯ್ ಬಾಲ್ಯದಿಂದಲೂ ನಾಟಕದಲ್ಲಿ ತೊಡಗಿಸಿಕೊಂಡಿರುವ ಕಾರಣ ಅಭಿನಯವನ್ನು ವೃತ್ತಿ ಜೀವನವಾಗಿ ಆಯ್ಕೆ ಮಾಡಿಕೊಳ್ಳಲು ಸುಲಭವಾಯಿತ್ತು.
ಮಂದೀಪ್ ರಾಯ್ ಅವರಿಗೆ 6 ವರ್ಷ ಹಿರಿಯಕ್ಕ ಮತ್ತು 6 ವರ್ಷದ ಕಿರಿಯ ಸಹೋದರನಿದ್ದಾರೆ. ಡಬಲ್ ಗ್ರ್ಯಾಜುಯೆಟ್ ಆಗಿರುವ ಮಂದೀಪ್ ಕೆಲವು ವರ್ಷಗಳ ಕಾಲ ಮುಂಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಆನಂತರ ಟ್ಯಾಕ್ಸಿ ಓಡಿಸುತ್ತಿದ್ದರಂತೆ. ಅನಂತ್ ನಾಗ್ ಮತ್ತು ಶಂಕರ್ ನಾಗ್ ಅವರು ಮಂದೀಪ್ ರಾಯ್ ಅವರ ಬಾಲ್ಯ ಸ್ನೇಹಿತರು, ಇಬ್ಬರೂ ಎದುರು ಬದುರು ಮನೆಯಲ್ಲಿದ್ದರಂತೆ.
1986ರಲ್ಲಿ ಮಂದೀಪ್ ರಾಯ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ನೇಹಿತನ ಮನೆ ಎದುರು ಪತ್ನಿ ವಾಸಿಸುತ್ತಿದ್ದರಂತೆ. ಮಂದೀಪ್ ತಾಯಿ ತಾಯಿ ಇಂಗ್ಲೀಷ್ ಟೀಚರ್, ಪತ್ನಿ ಕನ್ನಡ ಟೀಚರ್. ಈ ಜೋಡಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ಕುಡಿಯುವುದು, ಸಿಗರೇಟ್ ಸೇದುವು ಯಾವ ಅಭ್ಯಾಸವೂ ನನಗಿಲ್ಲ ಎಂದು ಹೆಮ್ಮೆಯಿಂದ ರೇಖಾ ದಾಸ್ ನಡೆಸಿದ ಸಂದರ್ಶನದಲ್ಲಿ ಜೀವನದ ಬಗ್ಗೆ ಮಂದೀಪ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮನೆಗೆ ಹೋಗಿ ಮಗಳ ಜೊತೆ ಸಮಯ ಕಳೆಯುತ್ತಿದ್ದರಂತೆ. 'ಶಾದಿ ಡಾಟ್ ಕಾಮ್ ಮೂಲಕ ಅಳಿಯ ನನ್ನ ಮಗಳಿಗೆ ಪರಿಚಯವಾಗಿದ್ದು. ಆ ಹುಡುಗ ನನ್ನ ಅಭಿಮಾನಿ. ಮದುವೆ ಮಾತುಕತೆ ಸಮಯದಲ್ಲಿ ತಿಳಿಯಿತ್ತು ಅವರ ತಂದೆ ನನ್ನ ಸ್ನೇಹಿತರು' ಎಂದು ಮಗಳ ಬಗ್ಗೆ ಹೇಳಿದ್ದರು.