Asianet Suvarna News Asianet Suvarna News

ಗೆಳೆಯ ಕಿಚ್ಚ ಸುದೀಪ್ ಬರ್ತಡೆಗೆ ಸ್ಪಿನ್ ಮಾಂತ್ರಿಕನ ವಿಶೇಷ ಗಿಫ್ಟ್!

* ಕಿಚ್ಚ ಸುದೀಪ್ ಹುಟ್ಟುಹಬ್ಬದ ಕಾಮನ್ ಡಿಪಿ ರಿಲೀಸ್ ಮಾಡಿದ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ
* ಸ್ಯಾಂಡಲ್ ವುಡ್ ಕಿಚ್ಚನ ಜನ್ಮದಿನ ಸಂಭ್ರಮ
* ಸೆಪ್ಟೆಂಬರ್ 2 ರಂದು ಸುದೀಪ್ ಜನ್ಮದಿನಾಚರಣೆ
* ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ಅಭಿಮಾನಿಗಳಿಗಾಗಿ ಡಿಪಿ ಬಿಡುಗಡೆ

Legendary cricketer Anil Kumble released common display picture to celebrate kiccha sudeep birthday mah
Author
Bengaluru, First Published Aug 21, 2021, 9:33 PM IST
  • Facebook
  • Twitter
  • Whatsapp

ಬೆಂಗಳೂರು(ಆ. 21)  ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಮತ್ತು ಸ್ವತಃ ಕಿಚ್ಚ ಸುದೀಪ್ ಗೆ ದಿಗ್ಗಜ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಸರ್ಪ್ರೈಸ್ ನೀಡಿದ್ದಾರೆ ಅನಿಲ್ ಕುಂಬ್ಳೆ ಸುದೀಪ್ ಹುಟ್ಟುಹಬ್ಬದ ಈ ಕಾಮನ್ ಡಿಪಿ ಯನ್ನು ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಡಿಪಿಯಾಗಿಸಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ -ಸುದೀಪ್ ಉತ್ತಮ  ಸ್ನೇಹ ಹೊಂದಿದ್ದು ಗೆಳೆಯನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದಾರೆ.

ಆನ್ ಲೈನ್ ಕಲಿಕೆಗೆ ಕಿಚ್ಚ ಸುದೀಪ್ ಟ್ರಸ್ಟ್ ವಿನೂತನ ಉಪಾಯ

ಸೆಪ್ಟೆಂಬರ್ 2 ರಂದು ಸುದೀಪ್ ಜನ್ಮದಿನಾಚರಣೆ ಇದೆ.  ಬಿಗ್ ಬಾಸ್ ಶೋ ಇತ್ತೀಚೆಗೆ ಅಷ್ಟೇ ಮುಗಿದಿದೆ. ಕೋಟಿಗೊಬ್ಬ 3 ಮತ್ತು ವಿಕ್ರಂ ರೋಣ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿವೆ. ಕೊರೋನಾ ಕಾರಣಕ್ಕೆ ಸ್ಯಾಂಡಲ್ ವುಡ್ ಸಮಸ್ಯೆ ಅನುಭವಿಸುತ್ತಿದ್ದು ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.

ಫೋಟೋದಲ್ಲಿ ಸುತ್ತಲೂ ಜನರು ನೆರೆದಿರುವ ಕ್ರೀಡಾಂಗಣದ ಮಧ್ಯದಲ್ಲಿ ಕುಳಿತು ತಮ್ಮ ಅಭಿಮಾನಿಗಳ ಮುಂದೆ ಕಿಚ್ಚ ಕೈ ಚಾಚುತ್ತಿರುವಂತೆ ಫೋಟೋವೊಂದನ್ನು ಅದ್ಭುತವಾಗಿ ಎಡಿಟ್ ಮಾಡಲಾಗಿದೆ.  ಬಾದ್ ಷಾ ಎಂದು ಬರೆಯಲಾಗಿದ್ದು, ಈ ಫೋಟೋವನ್ನು ಕುಂಬ್ಳೆ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 

Follow Us:
Download App:
  • android
  • ios